ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XIX - 362-

                      ಶೀತೇ   ರಾತ್ರೌ   ಪಿಬೇತ್ಸ್ನೇ ಹಂ ನರಃ ಶ್ಲೇಷ್ಯಾಧಿಕೋಪಿ ವಾ |
                     ಆನಾಹಮರುಚಿಂ ಶೂಲಂ ಪಾಂಡುತಾಂ ವಾ ಸಮೃಚ್ಛತಿ || (ಚ. 68-69.) 
           ವಾತಪಿತ್ತವು ಅಧಿಕವಾಗಿರುವಲ್ಲಿ ಮತ್ತು ಉಷ್ಣ ಕಾಲದಲ್ಲಿ ಯಾವನಾದರೂ ಸ್ನೇಹ     
 ತೆಗೆದುಕೊಳ್ಳತಕ್ಕವನು ಅದನ್ನು ರಾತ್ರಿಕಾಲದಲ್ಲಿ ಸೇವಿಸಬೇಕು. ಕಫಾಧಿಕವಾಗಿರುವಲ್ಲಿ              
 ಮತ್ತು ಶೀತಕಾಲದಲ್ಲಿ ಸ್ನೇಹವನ್ನು ಹಗಲು ಸೂರ್ಯಪ್ರಭೆ ವಿಮಲವಾಗಿರುವಾಗ್ಗೆ ಸೇವಿಸ      
 ತಕ್ಕದ್ದು. ಹಾಗೆ ಮಾಡದೆ ವಾತಪಿತ್ತಾಧಿಕವಾದಲ್ಲಿ, ಅಥವಾ ಅತ್ಯುಷ್ಣ ಕಾಲದಲ್ಲಿ, ಸ್ನೇಹ              
ವನ್ನು ಹಗಲು ಸೇವಿಸಿದರೆ, ಅದರಿಂದ ಮೂರ್ಚ್ಛೆ  , ಬಾಯಾರಿಕೆ, ಉನ್ಮಾದ, ಅಥವಾ ಕಾಮಿಲೆ,
ಉಂಟಾಗುತ್ತದೆ. ಹಾಗೆಯೇ, ಕಫಾಧಿಕವಾಗಿರುವಾಗ್ಗೆ,  ಅಧವಾ ಶೀತಕಾಲದಲ್ಲಿ, ರಾತ್ರಿ          
ಸ್ನೇಹಪಾನ ಮಾಡಿದರೆ, ಅದರಿಂದ ಆನಾಹ, ಅರುಚಿ, ಶೂಲೆ, ಅಧವಾ ಪಾಂಡು, ಉಂಟಾ

ಗುವದು

                 55.                        ಜಲಮುಷ್ಣಂ  ಘೃತೇ ಪೇಯಂ  ಯುಷಸ್ತೈಲೇॐನುಶಸ್ಯತೇ||                                    
ಬೇರೆಬೇರೆ ಸ್ನೇಹಗ                ವಸಾಮಜ್ಞೋಸ್ತು ಮಂಡಃ ಸ್ಯಾತ್ ಸರ್ವೇಷೂಷ್ಣ ಮಧಾಂಬು ವಾ ||  ಳಿಗೆಅನುಪಾನಗಳು                                                                                                                   (ಚ. 69.)
 ಘೃತಪಾನ ಮಾಡಿದವನಿಗೆ ಬಿಸಿನೀರನ್ನು, ತೈಲಪಾನ ಮಾಡಿದವನಿಗೆ ಸಾರನ್ನು, ವಸಾ                     
 ಅಧವಾ ಮಜ್ಜಾಪಾನ  ಮಾಡಿದವನಿಗೆ  ಮಂಡ(ಗಂಜಿನೀರು)ವನ್ನು,  ಅಧವಾ ಎಲ್ಲಾ ಸಂಗತಿ      
  ಗಳಲ್ಲಿಯೂ ಬಿಸಿನೀರನ್ನು ಕುಡಿಯಲಿಕ್ಕೆ ಕೂಡಬೇಕು.

56. ಯಾ ಮಾತ್ರಾ ಪರಿಜೀರ್ಯೇತ ಚತುರ್ಭಾಗಗತೇॐಹನಿ |

                              ಸಾ ಮಾತ್ರಾ ದೀಪಯತ್ಯಗ್ನಿಮಲ್ಪದೋಷೇ ಚ ಪೂಜಿತಾ|| 
                               ಯಾ ಮಾತ್ರಾ ಪರಿಜೀರ್ಯೇತ ತಧಾರ್ಧದಿವಸೇ ಗತೇ|
                              ಸಾ ವೃಷ್ಯಾ ಬೃಂಹಣೀ  ಚೈವ ಮಧ್ಯದೋಷೇ ಚ ಪೂಜಿತಾ ||
                                ಯಾ ಮಾತ್ರಾ ಪರಿಜೀರ್ಯೇತ ಚತುರ್ಭಾಗಾವಶೇಷಿತೇ |
                              ಸ್ನೇಹನೀಯಾ ಚ ಸಾ ಮಾತ್ರಾ ಬಹುದೋಷೇ ಚ ಪೂಜಿತಾ ||

ಸ್ನೇಹಪಾನಕ್ಕೆ ಯಾ ಮಾತ್ರಾ ಪರಿಜೀರ್ಯೇತ್ತು ತಧಾ ಪರಿಣತೇॐಹನಿ |

ಪ್ರಮಾಣಗಳು,         ಗ್ಲಾ ನಿಮೂರ್ಚ್ಛಾಮದಾನ್ ಹಿತ್ವಾ ಸಾ ಮಾತ್ರಾ ಪೂಜಿತಾ ಭವೇತ್ || 
ಅತಿಯಾದದ್ದರ       ಅಹೋರಾತ್ರಾದಸಂದುಷ್ಟಾ ಯಾ ಮಾತ್ರಾ ಪರಿಜೀರ್ಯತಿ |                                 
ದೋಷ ಮತ್ತು         ಸಾ ತು ಕುಷ್ಠ  ವಿಷೋನ್ಮಾದಗ್ರಹಾಪಸ್ಮಾರನಾಶಿನೀ  ||                        
ಅದ್ದಕ್ಕೆಪರಿಹಾರ       ಯಧಾಗ್ನಿ ಪ್ರಧಮಾಂ ಮಾತ್ರಾ೦ ಪಾಯಯೇತ ವಿಚಕ್ಷಣಃ |
                                ಪೀತೋ  ಹ್ಯತಿಬಹುಸ್ನೇಹೋ ಜನಯೇತ್ ಪ್ರಾಣಸಂಶಯಂ ||   
                               ಮಿಧ್ಯಾಹಾರಾದ್ಬ  ಹುತ್ವಾದ್ವಾ ಯಸ್ಯ   ಸ್ನೇಹೋ ನ  ಜೀರ್ಯತಿ  
                               ವಿಷ್ಟಭ್ಯ  ಚಾಪಿ ಜೀರ್ಯೇತ್ತಂ  ವಾರಿಣೋಷ್ಣೇನ  ವಾಮಯೇತ್ || 
                                ಜೀರ್ಣಾಜೀರ್ಣವಿಶಂಕಾಯಾಂ ಸ್ನೇಹಸ್ಯೋಷ್ಣೋದಕಂ ಪಿಬೇತ್ |