ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- 363 - ಅ. XIX
ತೇನೋದ್ಗಾರೋ ಭವೇಚ್ಛುದ್ದೋ ಭುಕ್ತಂ ಪ್ರತಿ ರುಚಿಸ್ತಧಾ || ಸ್ಯುಃ ಪಚ್ಯಮಾನೇ ತೃ ಡ್ದಾಹಭ್ರಮಸಾದಾರತಿಕ್ಲಮಾ ಃ| (540-41.) ಯಾವ ಮಾತ್ರೆಯು (ಪ್ರಮಾಣ) ದಿವಸದ ನಾಲ್ಕನೇ ಒಂದು ಭಾಗದಲ್ಲಿ (3 ಘಂಟೆ ಸಮಯದಲ್ಲಿ) ಜೀರ್ಣವಾಗುತ್ತದೋ, ಅದರಿಂದ ಅಗ್ನಿ ಚುರುಕಾಗುತ್ತದೆ; ಮತ್ತು ಅದು ದೋಷವು ಅಲ್ಪವಾಗಿದ್ದಾಗ್ಗೆ ಪ್ರಶಸ್ತವಾ ದದ್ದು . ಯಾವ ಮಾತ್ರೆಯು ಅರ್ಧ ದಿನದಲ್ಲಿ (ಅಂದರೆ 6 ಘಂಟೆ ಸಮಯದಲ್ಲಿ ಜೀರ್ಣವಾಗುತ್ತದೋ, ಅದರಿಂದ ವೃಷ್ಯ ಮತ್ತು ಬೃಂಹಣ ಗುಣ ಗಳು ಉಂಟಾಗುತ್ತವೆ; ಮತ್ತು ಅದು ದೋಷವು ಮಧ್ಯಸ್ದಿತಿದಾಗಿದ್ದಾಗ್ಗೆ ಪ್ರಶಸ್ತ. ಯಾವ ಮಾತ್ರೆಯು ದಿನದ 4ನೇ 1 ಭಾಗ ಉಳಿಯುವ ಕಾಲದಲ್ಲಿ (9 ಘಂಟೆ ಕಾಲದಲ್ಲಿ ಜೀರ್ಣ ವಾಗುತ್ತದೋ, ಅದು ಸ್ನೇಹನಮಾಡತಕ್ಕಂಧಾದ್ದು; ಮತ್ತು ಅದು ದೋಷವು ಬಹಳವಾಗಿರು ವಾಗ್ಗೆ ಪ್ರಶಸ್ತ. ಯಾವ ಮಾತ್ರೆಯು ಸಂಜೆಗೆ (12 ಘಂಟೆ ಕಾಲದಲ್ಲಿ ಜೀರ್ಣವಾಗು ತ್ತದೋ , ಅದು ಗ್ಲಾನಿ, ಮೂರ್ಚ್ಛ , ಮದಗಳನ್ನು ಬಿಟ್ಟು ಇತರ ರೋಗಗಳಲ್ಲಿ ಪೂಜಿತವಾಗು
ತ್ತದೆ. ಯಾವ ಮಾತ್ರೆಯು ಒಂದು ಹಗಲೂರಾತ್ರಿಕಾಲದಲ್ಲಿ (24 ಘಂಟೆಯಲ್ಲಿ), ವಿಶೇಷವಾಗಿ
ದೋಷವನ್ನು ಮಾಡದೆ, ಜೀರ್ಣಕ್ಕೆ ಬರುತ್ತದೋ, ಅದರಿಂದ ಕುಷ್ಠ, ವಿಷ, ಉನ್ಮಾದ, ಗ್ರಹ ಮತ್ತು ಅಪಸ್ಮಾರ ನಾಶವಾಗುತ್ತವ. ಬುದ್ದಿವಂತನು ಅಗ್ನಿ ಬಲ ನೋಡಿಕೊಂಡು, ಒಂದನೇ (3 ಘಂಟೆಯಲ್ಲಿ ಜೀರ್ಣಕ್ಕೆ ಬರುವಂಧಾ) ಮಾತ್ರೆಯನ್ನು ಕುಡಿಸಬೇಕು. ಕುಡಿದ ಸ್ನೇಹವು ಅತಿಹೆಚ್ಚಾದರೆ ಅದರಿಂದ ಪ್ರಾಣಸಂಶಯವುಂಟಾಗಬಹುದು. ಆಚಾರ(ಪಧ್ಯ)ದ ವ್ಯತ್ಯಾಸ ದಿಂದ ಅಧವಾ ಹೆಚ್ಚಾದ್ದರಿಂದ ಯಾರಿಗೆ ಸ್ನೇಹವು ಜೀರ್ಣವಾಗುವದಿಲ್ಲವೋ, ಅಧವಾ ಹೊಟ್ಟೆಯಲ್ಲಿ ಸ್ತಬ್ದವಾಗಿ ನಿಂತು ಜೀರ್ಣವಾಗುತ್ತದೋ, ಅಂಧವನಿಗೆ ಬಿಸಿನೀರು ಕೊಟ್ಟು ವಾಂತಿಮಾಡಿಸತಕ್ಕದ್ದು. ಕುಡಿದ ಸ್ನೇಹವು ಜೀರ್ಣವಾಯಿತೋ ಇಲ್ಲವೋ, ಎಂಬ ಸಂಶಯ ಹುಟ್ಟಿದಾಗ್ಗೆ, ಬಿಸಿನೀರನ್ನು ಕುಡಿಯಬೇಕು; ಅದರಿಂದ ತೇಗು ಶುದ್ಧವಾಗಿ, ಊಟಕ್ಕೆ ರುಚಿ ಯುಂಟಾಗುತ್ತದೆ. ಸ್ನೇಹವ್ರ ಜೀರ್ಣವಾಗುವ ಕಾಲದಲ್ಲಿ ಬಾಯಾರಿಕೆ, ಉರಿ, ತಲೆತಿರುಕು, ಮೈಬಚ್ಚುವಿಕೆ, ಉತ್ಸಾಹವಿಲ್ಲದಿರುವದು ಮತ್ತು ನಿಶ್ಚೈತನ್ಯ ಕಾಣುವವು. ಷರಾ ಒಂದು ಅಹೋರಾತ್ರಿಕಾಲದಲ್ಲಿ ಜೀರ್ಣವಾಗುವ ಮಾತ್ರೆಯು ದೊಡ್ಡದು, ಒಂದು ಹಗಲಲ್ಲಿ ಜೀರ್ಣವಾಗು ವಂಥಾದ್ದು ಮಧ್ಯಮ, ಮಧ್ಯಾಹ್ನದಲ್ಲಿ ಜೀರ್ಣವಾಗುವಂಥಾದ್ದು ಹೀನ ಎಂತಲೂ, ಆ ಮಧ್ಯಮ ಮಾತ್ರೆಯಲ್ಲಿ ಭ್ರಮ ಹರ ಗುಣ ಇರುತ್ತದೆಂತಲೂ ಶಾ ( ಪು 137)
57. ದೋಷಾಣಾಮಲ್ಪ ಭೂಯಸ್ತ್ವಂ ಸಂಸರ್ಗ೦ ಸಮವೇಕ್ಷ್ಯ ಚ |
ಸ್ನೇಹದ ಔಷಧ ಯುಂಚ್ಯಾತ್ತ್ರಿಷಷ್ಟಿಧಾ ಭಿನ್ನೈಃ ಸಮಾಸವ್ಯಾಸತೋ ರಸೈಃ || (ಸು. 540.)
ಯೋಗಕಲ್ಪನ ದೋಷಗಳ ಹೆಚ್ಚು ಕಡಿಮೆಯನ್ನು ಮತ್ತು ಕೂಡುವಿಕೆಯನ್ನು ಚೆನ್ನಾಗಿ ಆಲೋಚಿಸಿ ಕೊಂಡು, ಆರು ರಸಗಳನ್ನು ಒಟ್ಟಾಗಿ ಮತ್ತು ಎರಡೆರಡಾಗಿ, ಮೂರುಮೂರಾಗಿ, ನಾಲ್ಕು
ನಾಲ್ಕಾಗಿ, ಅಧವಾ ಐದೈದಾಗಿ, ಕೂಡಿಸುವದರ ಭೇದದ ಮೇಲೆ 63 ವಿಧವಾಗಿರುವ ಯೋಗ
ವನ್ನು ತಕ್ಕವಾಗಿ ಕಲ್ಪಿಸಿ ಉಪಯೋಗಿಸತಕ್ಕದ್ದು. 58. ಸ್ನೇಹಸಾತ್ಮ್ಯಃ ಕ್ಲೇಶಸಹಃ ಕಾಲೇ ನಾತ್ಯುಷ್ಣ ಶೀತಲೇ |
ಅಚ್ಚೆಣ್ಣೆಯ ಪಾನ. ಅಚ್ಛ ಮೇವ ಪಿಬೇತ್ಸ್ನೇಹಮಚ್ಛಪಾನಂ ಹಿ ಪೂಜಿತಂ || (ಸು. 540.)
46*