ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆ XIX - 372 - 82. ಪಂಚ ಕಷಾಯಶತಾನಿ | ಪಂಚ ಕಷಾಯಯೋನಯಃ | ಪಂಚವಿಧಂ ನಾನಾ ವಿಧದ ಕಷಾಯಕಲ್ಪನಂ | ಸಂಚಾಶನ್ಮಹಾಕಷಾಯಾ ಇತಿ ಸಂಗ್ರಹಃ | ಕಷಾಯಗಳು ಕಷಾಯಗಳು 500, ಕಷಾಯಗಳಿಗೆ ಯೋನಿಗಳು ಐದು, ಕಷಾಯಕ್ರಮಗಳು ಐದು, ಮಹಾಕಷಾಯಗಳು 50, ಹೀಗೆ ಸಂಗ್ರಹ. 83. ಪಂಚ ಕಷಾಯಯೋನಯ ಇತಿ | ಮಧುರಕಷಾಯೋSಮ್ಮ ಕಷಾ ಮಧುರಾದಿ ಕಷಾ ಯಃ ಕಟುಕಷಾಯಸ್ತಿಕ್ತಕಷಾಯಃ ಕಷಾಯಕಷಾಯಶ್ಚಿತಿ ಯಯೋನಿಗಳು ತಂತ್ರೆ ಸಂಜ್ಞಾ | (ಚ. 18.) ಐದು ಕಷಾಯ ಯೋನಿಗಳೆಂದರೆ ಸೀ ಕಷಾಯ, ಹುಳಿ ಕಷಾಯ, ಖಾರ ಕಷಾಯ, ಕಹಿ ಕಷಾಯ, ಚೊಗರು ಕಷಾಯ ಎಂಬ ಸಂಜ್ಞೆಯುಳ್ಳವು

84. ಪಂಚವಿಧಂ ಕಷಾಯಕಲ್ಪನಮಿತಿ | ತದ್ಯಧಾ | ಸ್ವರಸಃ ಕಲ್ಕಃ ಸ್ವರಸಾದಿ ಐದು ಶೃತಃ ಶೀತಃ ಫಾಂಟಃ ಕಷಾಯ ಇತಿ | (ಚ. 18.) ಕಷಾಯಕಲ್ಪನಗಳು ಕಷಾಯಕ್ರಮಗಳು ಐದು ಎಂಬವು ಹ್ಯಾಗಂದರೆ 1. (ಜಜ್ಜೆ ವಸ್ತ್ರದಲ್ಲಿ ಹಾಕಿ ಹಿಂಡಿ ತೆಗೆದದ್ದು) ಸ್ವರಸ, 2. (ನುಣ್ಣಗೆ ಪುಡಿಮಾಡಿ ರಸದಲ್ಲಿ ಕದಡಿದ ಮುದ್ದೆ) ಕಲ್ಕ; 3. (ಬೆಂಕಿಯಲ್ಲಿ ಕುದಿಸಿ ಬತ್ತಿಸಿದ್ದು) ಶೃತ, 4, (ದ್ರವ್ಯವನ್ನು ಪುಡಿಮಾಡಿ, ನೀರಲ್ಲಿ ನೆನೆಸಿ ರಾತ್ರಿಕಾಲ ಇಟ್ಟು, ಬೆಳಿಗ್ಗೆ ಹಿಂಡಿ ತೆಗೆದದ್ದು) ಶೀತ, ಮತ್ತು 5, (ಪುಡಿಮಾಡಿ ಬಿಸಿ ನೀರಲ್ಲಿ ಹಾಕಿ, ಹಿಸಕಿ ಹಿಂಡಿ ತೆಗೆದದ್ದು) ಫಾಂಟ.

85. ತೇಷಾಂ ಯಧಾಪೂರ್ವ೦ ಒಲಾಧಿಕ್ಯಂ | ಅತಃ ಕಷಾಯಕಲ್ಪನಾ

ಪಂಚವಿಧ ಕಷಾಯ ವ್ಯಾಧ್ಯಾತುರಬಲಾಪೇಕ್ಷಿಣೀ | ನತ್ವೇಂ ಖಲು ಸರ್ವಾಣಿ ಸರ್ವ ಗಳೊಳಗೆ | ಬಲಭೇದ ತ್ರೋಪಯೋಗೀನಿ ಭವಂತಿ | (ಚ. 18.)

ಆ ಐದು ವಿಧವಾದ ಕಷಾಯಕಲ್ಪನಗಳಲ್ಲಿ ಯಧಾಪೂರ್ವ ಬಲಾಧಿಕ್ಯ; ಅಂದರೆ, ಕಷಾಯಗಳಲ್ಲಿ ಫಾಂಟಕ್ಕಿಂತ ಶೀತ, ಅದಕ್ಕಿಂತ ಶೃತ, ಅದಕ್ಕಿಂತ ಕಲ್ಕ, ಅದಕ್ಕಿಂತ ಸ್ವರಸ, ಹೆಚ್ಚು ಒಲವುಳ್ಳದ್ದು. ಆದ್ದರಿಂದ ಕಷಾಯಕಲ್ಪನೆಯು ರೋಗದ ಮತ್ತು ರೋಗಿಯ ಬಲ ನೋಡಿ ನಿಶ್ಚಯಿಸಲ್ಪಡಬೇಕಾದದ್ದು ; ಮತ್ತು ಹೀಗೆ ಯಾವ ಔಷಧವಾದರೂ ಎಲ್ಲಾ ಸಂಗತಿ ಯಲ್ಲಿಯೂ ಉಪಯೋಗಕ್ಕೆ ಬೀಳುವದಿಲ್ಲ. 86. ಪಂಚಾಶನ್ಮಹಾಕಷಾಯಾ ಇತಿ ಯದುಕ್ತಂ ತದನುವ್ಯಾಖ್ಯಾಸ್ಯಾ ಮಃ | ತದ್ಧಾಧಾ |

ಜೀವನೀಯೋ ಬೃಂಹಣೀಯೋ ಲೇಖನೀಯೋ ಭೇದನೀಯಃ ಸಂಧಾ

ನೀಯೋ ದೀಪನೀಯ ಇತಿ ಷಟ್ಕಃ ಕಷಾಯ ವರ್ಗಃ | ಬಲ್ಯೊೇ ವರ್ಣಃ ಕ೦ರ್‍ಯೂ ಹೃದ್ಯ ಇತಿ ಚತುಷ್ಕತಃ ಕಷಾಯ ವರ್ಗಃ |