ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ, XIX - 376 - 49. ಪ್ರಜ್ಞಾ ಸ್ಥಾಪನ-ಬುದ್ಧಿಯನ್ನು ಸರಿಪಡಿಸುವಂಧಾದ್ದು. 50. ವಯಃಸ್ಥಾಪನ- ಪ್ರಾಯವನ್ನು ಕಾಪಾಡುವಂಧಾದ್ದು. ಹೀಗೆ ಐದು ಒಂದು ಕಷಾಯವರ್ಗ, ಇವು ಐವತ್ತು ಮಹಾಕಷಾಯಗಳ ಲಕ್ಷಣಗಳು. 87. ತೇಷಾಮೇಕೈಕಸ್ಮಿನ್ ಮಹಾಕಷಾಯೇ ದಶದಶಾವಯವಿಕಾನ್ ಹತ್ತು ಬಗೆ ಔಷಧ ಕಷಾಯಾನನುವ್ಯಾಖ್ಯಾಸ್ಯಾಮಃ | ತಾನ್ಯೇವ ಪಂಚ ಕಷಾ ಗಳುಳ್ಳ 50 ಮಹಾ ಕಷಾಯಯೋಗಗಳು ಯಶತಾನಿ ಭವಂತಿ | (ಚ. 19.) ಆ ಐವತ್ತು ಮಹಾ ಕಷಾಯಗಳೊಳಗೆ ಒಂದೊಂದರಲ್ಲಿ ಹತ್ತು ಹತ್ತು ಅವಯವ (ದ್ರವ್ಯ) ಗಳಿರುವ ಕಷಾಯಗಳನ್ನು ಇನ್ನು ಹೇಳುತ್ತೇವೆ. ಅವುಗಳೇ ಐನೂರು ಕಪಾಯಗಳಾಗುತ್ತವೆ. ತದ್ಯಧಾ | ಹ್ಯಾಗಂದರೆ - 1. ಜೀವಕರ್ಷಭಕೌ ಮೇದಾ ಮಹಾಮೇದಾ ಕಾಕೋಲೀ ಕ್ಷೀರಕಾಕೋಲೀ ಮುದ್ಗಮಾಷಪರ್ಣ್ಯೌ ಜೀವಂತೀ ಮಧುಕಮಿತಿ ದಶೇಮಾನಿ ಜೀವನೀ ಯಾನಿ ಭವಂತಿ || ಜೀವಕ, ಋಷಭಕ, ಮೇದೆ, ಮಹಾಮೇದೆ, ಕಾಕೋಲ, ಕ್ಷೀರಕಾಕೋಲಿ*, ಕಾಡು ಹೆಸರು, ಕಾಡು ಉದ್ದು, ಜೀವಂತೀ, ಜ್ಯೇಷ್ಠಮಧು, ಇವು ಹತ್ತು ಜೀವನೀಯಗಳು.

  • ಷರಾ ಇವು ಆರೂ ಸಾಧಾರಣವಾಗಿ ಈಗ ಸಿಕ್ಕತಕ್ಕವಲ್ಲ ಮೂರು ದ್ವಂದ್ವಗಳಾದ ಅವುಗಳ ಸ್ಥಾನಗಳಲ್ಲಿ ಕ್ರಮವಾಗಿ ನೆಲಕುಂಬಳಗಡ್ಡೆ, ಶತಾವರಿ, ಅಶ್ವಗಂಧಿ ಇವುಗಳನ್ನು ಸೇರಿಸಿಕೊಳ್ಳಬೇಕಾಗಿ ವಿಧಿಯಿರುತ್ತದೆ

2. ಕ್ಷೀರಿಣೀ ರಾಜಕ್ಷವಕಂ ಬಲಾ ಕಾಕೋಲೀ ಕ್ಷೀರಕಾಕೋಲೀ ವಾಟ್ಯಾ ಯನೀ ಭದ್ರೌದನೀ ಭಾರದ್ವಾಜೀ ಪಯಸ್ಯರ್ಷ್ಯಾಗಂಧಾ ಇತಿ ದಶೇಮಾ ನಿ ಬೃಂಹಣೀಯಾನಿ ಭವಂತಿ | ಕ್ಷೀರಿಣೀ, ಕರೀಸಾಸಿವೆ, ಕಡೀರು (ಕಲ್ಲಂಗಡಲೆ), ಕಾಕೋಲಿ, ಕ್ಷೀರಕಾಕೋಲಿ, ಸಹ ದೇವಿ, ಉರ್ಕಿ, ಕಾಡುಹತ್ತಿ, ಪಯಸ್ಯಾ, ಋಷ್ಯಗಂಧಾ, ಇವು ಹತ್ತು ಬೃಂಹಣೀಯ. 3. ಮುಸ್ತ- ಕುಷ್ರ-ಹರಿದ್ರಾ-ದಾರುಹರಿದ್ರಾ- ವಚಾತಿವಿಷಾ-ಕಟುರೋಹಿಣೀ- ಚಿತ್ರಕ-ಚಿರಬಿಲ್ವ-ಹೈಮವತ್ಯ ಇತಿ ದಶೇಮಾನಿ ಲೇಖನೀಯಾನಿ ಭವಂತಿ | ಭದ್ರಮುಷ್ಟಿ, ಚಂಗಲಕೋಷ್ಠ (ಇಲ್ಲಿ ಇದಕ್ಕೆ ಕಂಕುಷ್ರ ಅನ್ನುತಾರೆ, ಮಲ ಕೊಟ್ಟಂ), ಅರಸಿನ, ಮರದರಸಿನ, ಬಜೆ, ಅತಿವಿಡೆಯ, ಕಟುಕರೋಹಿಣಿ, ಚಿತ್ರಮೂಲ, ಹೊಂಗೆ (ಕೊರುಂಗುಮರ), ಅಣಿಲೆಕಾಯಿ, ಇವು ಹತ್ತು ಲೇಖನೀಯ.

  • ಷರಾ ಮಲಯಾಳ ವೈದ್ಯಗ್ರಂಥಗಳಲ್ಲಿ 'ಚಿರಬಿಲ್ವ'ಕ್ಕೆ ಆವಿಲ್' ಎಂತ ಅರ್ಥ ಬರೆದದ್ದು ಕಾಣುತ್ತದೆ ಸ ವೃ ವ ಯಲ್ಲಿಯೂ ಇದೇ ಅರ್ಥವನ್ನನುಸರಿಸಿ ಕನ್ನಡ ಹೆಸರು 'ಗುಡ್ಡೆರೆಂಜೆ', 'ಬೀಗದ ಮರ' ಮತ್ತು ತುಳು ರಾಹುಬೀಜ' ಎಂತ ಬರೆಯಲ್ಪಟ್ಟಿದೆ ಧ ಸಿ, ರಾ ಸಿ , ಭಾ – ಸಹ ಚಿರಬಿಲ್ವ', ಅಥವಾ ಚಿರಿಬಿಲ್ವ' ಎಂಬದು (ಕರಂಜ'ವೇ ಎಂತ ಹೇಳುತ್ತವೆ