ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XXX – 375 - 28, ಛರ್ದಿನಿಗ್ರಹಣ - ವಾಂತಿ ನಿಲ್ಲಿಸತಕ್ಕಂಧಾದ್ದು. 29. ತೃಷ್ಣಾ ನಿಗ್ರಹಣ- ಬಾಯಾರಿಕೆಯನ್ನು ನಿಗ್ರಹಮಾಡತಕ್ಕಂಧಾದ್ದು 30, ಹಿಕ್ಕಾನಿಗ್ರಹ – ಬಿಕ್ಕಟ್ಟನ್ನು ನಿಲ್ಲಿಸತಕ್ಕಂಧಾದ್ದು ಹೀಗೆ ಮೂರು ಒಂದು ಕಷಾಯವರ್ಗ, 31, ಪುರೀಷಸಂಗ್ರಹಣೀಯ- ಮಲಸಂಗ್ರಹ ಮಾಡ(ಕಟ್ಟಿಸ) ತಕ್ಕಂಧಾದ್ದು. 32. ಪುರೀಷವಿರಜನೀಯ- ಮಲವನ್ನು ಸ್ವಚ್ಛ ಮಾಡತಕ್ಕಂಧಾದ್ದು 33, ಮೂತ್ರ ಸಂಗ್ರಹಣೀಯ- ಮೂತ್ರ ಸಂಗ್ರಹಮಾಡ(ಕಟ್ಟಿಸತಕ್ಕಂಧಾದ್ದು 34. ಮೂತ್ರವಿರಚನೀಯ – ಮೂತ್ರವನ್ನು ಸ್ವಚ್ಛಮಾಡತಕ್ಕಂಧಾದ್ದು 35, ಮೂತ್ರವಿರೇಚನೀಯ- ಮೂತ್ರವನ್ನು ವಿರೇಚನಮಾಡಿಸತಕ್ಕಂಧಾದ್ದು. - ಹೀಗೆ ಐದು ಒಂದು ಕಷಾಯವರ್ಗ. 36. ಕಾಸಹರ - ಕೆಮ್ಮು ವಾಸಿ ಮಾಡತಕ್ಕಂಧಾದ್ದು. 37. ಶ್ವಾಸಹರ– ಉಬ್ಬಸ ವಾಸಿಮಾಡತಕ್ಕಂಧಾದ್ದು 38. ಶೋಧಹರ- ಶೋಭೆ(ಬಾಕು) ವಾಸಿಮಾಡತಕ್ಕಂಧಾದ್ದು 39. ಜ್ವರಹರ - ಜ್ವರಹರವಾದಂಥಾದ್ದು 40. ಶ್ರಮಹರ- ಶ್ರಮವನ್ನು ಪರಿಹರಿಸತಕ್ಕಂಧಾದ್ದು. - ಹೀಗೆ ಐದು ಒಂದು ಕಷಾಯವರ್ಗ 41, ದಾಹಪ್ರಶಮನ - ಉರಿಯನ್ನು ಶಾಂತಮಾಡತಕ್ಕಂಧಾದ್ದು 42. ಶೀತಪ್ರಶಮನ – ಶೀತವನ್ನು ವಾಸಿಮಾಡತಕ್ಕಂಧಾದ್ದು. 43, ಉದರ್ದಪ್ರಶಮನ - ಉದರ್ದರೋಗ (ಸೀರುಕೋಟಲೆಛೇದ) ಶಮನವಾಡ ತಕ್ಕಂಧಾದ್ದು 44 ಅಂಗಮರ್ದಪ್ರಶಮನ- ಅಂಗಗಳ ಸೆಳತ ಶಮನಮಾಡತಕ್ಕಂಧಾದ್ದು 45. ಶೂಲಪ್ರಶಮನ - ಶೂಲ ಶಮನಮಾಡತಕ್ಕಂಧಾದ್ದು. ಹೀಗೆ ಐದು ಒಂದು ಕಷಾಯವರ್ಗ, 46. ಶೋಣಿತಾಸ್ಥಾಪನ-ರಕ್ಕೆ ನಿಲ್ಲಿಸಿಡುವಂಥಾದ್ದು. 47, ವೇದನಾಸ್ಟಾಪನ- ನೋವು ನಿಲ್ಲಿಸುವಂಥಾದ್ದು. 48, ಸಂಜ್ಞಾಸ್ಥಾಪನ - ಎಚ್ಚರಿಕೆಯನ್ನು ಸರಿಪಡಿಸುವಂಧಾದ್ದು .