ಆ XIX. - 374 -
7. ಬಲ್ಯ – ಬಲ ಕೊಡುವಂಧಾದ್ದು. 8. ವರ್ಣ್ಯ - ವರ್ಣ ಕೊಡುವಂಧಾದ್ದು. 9. ಕಂರ – ಕಂರವನ್ನು ಶೋಧನೆಮಾಡುವಂಥಾದ್ದು ಅಥವಾ ಕಂರಕ್ಕೆ ಹಿತವಾದದ್ದು. 10. ಹೃದ್ಯ- ಹೃದಯಕ್ಕೆ ಹಿತವಾದದ್ದು.
ಹೀಗೆ ನಾಲ್ಕು ಒಂದು ಕಷಾಯವರ್ಗ.
11. ತೃಪ್ತಿಘ್ನ - ತೃಪ್ತಿಯನ್ನು ನಾಶಮಾಡುವಂಥಾದ್ದು (ಅಂದರೆ ಹಸಿವುಬಾಯಾರಿಕೆ
ಗಳನ್ನುಂಟುಮಾಡುವಂಧಾದ್ದು)
12. ಅರ್ಶೋಘ್ನ – ಮೂಲವ್ಯಾಧಿಹರವಾದದ್ದು. 13. ಕುಷ್ಠಘ್ನ – ಕುಷ್ಠವ್ಯಾಧಿಯನ್ನು ನಾಶಮಾಡುವಂಧಾದ್ದು. 14. ಕಂಡೂಘ್ನ - ತುರಿಗಜ್ಜಿಯನ್ನು ನಾಶಮಾಡುವಂಧಾದ್ದು. 15. ಕೃಮಿಸಘ್ನ - ಕ್ರಿಮಿಗಳನ್ನು ಕೊಲ್ಲುವಂಧಾದ್ದು 16. ವಿಷಪ್ಪ - ವಿಷವನ್ನು ಪರಿಹರಿಸುವಂಧಾದ್ದು
ಹೀಗೆ ಆರು ಒಂದು ಕಷಾಯವರ್ಗ
17. ಸ್ತನ್ಯಜನನ - ಮೊಲೆಹಾಲನ್ನು ವೃದ್ಧಿಮಾಡುವಂಧಾದ್ದು. 18. ಸ್ತನ್ಯಶೋಧನ - ಮೊಲೆಹಾಲನ್ನು ಶುದ್ಧಮಾಡುವಂಥಾದ್ದು 19. ಶುಕ್ರಜನನ - ಶುಕ್ರವನ್ನುಂಟುಮಾಡುವಂಥಾದ್ದು 20. ಶುಕ್ರಶೋಧನ - ಶುಕ್ರವನ್ನು ಶುದ್ಧಮಾಡುವಂಧಾದ್ದು.
ಹೀಗೆ ನಾಲ್ಕು ಒಂದು ಕಷಾಯವರ್ಗ.
21. ಸ್ನೇಹೋಪಗ - ಸ್ನೇಹವನ್ನು(ಜಿಡ್ಡನ್ನು )ಂಟುಮಾಡುವಂಧಾದ್ದು 22. ಸ್ವೇದೋಪಗ - ಬೆವರನ್ನುಂಟುಮಾಡುವಂಥಾದ್ದು 23. ವಮನೋಪಗ - ವಾಂತಿಯನ್ನುಂಟುಮಾಡುವಂಧಾದ್ದು. 24. ವಿರೇಚನೋಪಗ - ಎರೇಚನಮಾಡಿಸುವಂಥಾದ್ದು. 25. ಆಸ್ದಾಪನೋಪಗ - ದೋಷಧಾತುಗಳನ್ನು ತಮ್ಮತಮ್ಮ ಸ್ಥಾನಗಳಲ್ಲಿ ಸ್ಥಾಪಿಸ
ತಕ್ಕಂಧಾದ್ದು (ನಿರೂಹವಸ್ತಿಗೆ ತಕ್ಕದ್ದು)
26. ಅನುವಾಸನೋಪಗ - ಅನುವಾಸನವಸ್ತಿಗೆ ಯೋಗ್ಯವಾದಂಧಾದ್ದು. 27. ಶಿರೋವಿರೇಚನೋಪಗ - ಶಿರೋವಿರೇಚನಕ್ಕೆ ತಕ್ಕವಾದಂಧಾದ್ದು.
ಹೀಗೆ ಏಳು ಒಂದು ಕಷಾಯವರ್ಗ.