ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- 379 - ಅ XIX ಉಪ್ಪು, ಕಾಳುಮೆಣಸು, ಕಳ್ಳಿ, ಕೆಮುಕಗಡ್ಡೆ, ವಾಯುವಿಳಂಗ, ಕರೀ ನೆಕ್ಕಿ, ಬಿಳೇ ಉತ್ತ ರಣೆ, ನೆಗ್ಗಿ ಲಮುಳ್ಳು, ವೃಷಪರ್ಣಿಕಾ (ಬಸ್ತಾನ್ತ್ರೀ), ಇಲಿಕಿವಿ, ಇವು ಹತ್ತು ಕ್ರಿಮಿನಾಶನಕಾರಿ.
16. ಹರಿದ್ರಾ - ಮಂಜಿಷ್ಣಾ - ಸುವಹಾ-ಸೂಕ್ಷ್ಮಲಾ-ಪಾಲಿಂದೀ-ಚಂದನ-ಕತ ಕ-ಶಿರೀಷ-ಸಿಂಧುವಾರ-ಶ್ಲೇಷ್ಮಾತಕಾ ಇತಿ ದಶೇಮಾನಿ ವಿಷಘ್ನಾನಿ ಭವಂತಿ | ಅರಸಿನ,ಮಂಜಿಷ್ಥಾ, ಈಶ್ವರೀ, ಸಣ್ಣಯಾಲಕ್ಕಿ, ಮೂವೆಲೆ, ಶ್ರೀಗಂಧ, ಚಿಲ್ಲಬೀಜ, ಬಾಗೆ ಮರ, ಬಿಳೇ ನೆಕ್ಕಿ, ಚಳ್ಳೆಮರ (ಮಣ್ಲಡ್ಕೆ), ಇವು ಹತ್ತು ನಿಷನಾಶನ ಮಾಡತಕ್ಕವು.
17. ವೀರಣ - ಶಾಲಿಷಷ್ತಿಕೇಕ್ಷು-ವಾಲಿಕಾ - ದರ್ಭ-ಕುಶ-ಕಾಶ-ಗುಂದ್ರೇತ್ಕಟ- ಕತ್ತೃ೯ಣ-ಮೂಲಾನೀತಿ ದಶೇಮಾನಿ ಸ್ತನ್ಯಜನನಾನಿ ಭವಂತಿ |
ಲಾವಂಚ, 60 ದಿನಗಳಲ್ಲಿ ಬೆಳೆಯುವ ಭತ್ತ, ಕಬ್ಬು, ಮುಡಿವಾಳ, ದರ್ಭೆ*, ಕುಶ ದರ್ಭೆ, ಕಾಶದರ್ಭೆ, ಶರದರ್ಭೆ, ಮೃದುದರ್ಭೆ, ಮಜ್ಜಿಗೆಹುಲ್ಲು, ಇವುಗಳ ಬೇರುಗಳು, ಇವು ಹತ್ತು ಮೊಲೆಹಾಲನ್ನುಂಟುಮಾಡತಕ್ಕವು
* ಷರಾ ಎಲೆಗಳು ಉದ್ದವಾಗಿಯೂ, ಧಾರೆಯುಳ್ಳವಾಗಿಯೂ ದೂಡ್ಡವಾಗಿಯೂ ಇರುವದು ದಭೆ೯, ಗಿಡ್ಡಾಗಿಯೂ, ಮೃದುವಾಗಿಯೂ ಕೊನೆ ಸೂಜಿಯಂತೆ ಮುಳ್ಳಾಗಿಯೂ ಇರುವದು ಕುಶ' ಎಲೆಗಳು ಚೌರಿಯ ಹಾಗಿರು ವದು 'ಕಾಶ'
18. ಪಾರಾ - ಮಹೌಷಧ-ಸುರದಾರು-ಮುಸ್ತ- ಮೂರ್ವಾ -ಗುಡೂಚೀ-ವತ್ಸ ಕಫಲ-ಕಿರಾತತಿಕ್ತ-ಕಟುರೋಹಿಣೀ-ಶಾರಿವಾ ಇತಿ ದಶೇವಾನಿ ಸ್ತನ್ಯ ಶೋಧನಾನಿ ಭವಂತಿ |
ಪಾಡಾವಳಿಗಡ್ಡೆ, (ಇನ್ನೊಂದು ಪಕ್ಷ, ಅಗಳು ಶುಂಠಿ), ಶುಂಠಿ, ದೇವದಾರು, ಭದ್ರ ಮುಷ್ಟಿ, ಕುರುಟಿಗೆ, ಅಮೃತಬಳ್ಳಿ, ಇಂದ್ರಜೀವಿ, ಕಿರಾತಕಡ್ಡಿ, ಕಟುಕರೋಹಿಣಿ, ನಾಮದ ಬೇರು (ಸುಗಂಧಿ), ಇವು ಹತ್ತು ಮೊಲೆಹಾಲನ್ನು ಶುದ್ಧ ಮಾಡತಕ್ಕವು.
19. ಜೀವಕರ್ಷಧಕ - ಕಾಕೋಲೀ - ಕ್ಷೀರಕಾಕೋಲೀ-ಮುದ್ಗಪಣೀ೯-ಮಾ ಷಪರ್ಣೀ- ಮೇದಾ-ವೃಕ್ಷರುಹಾ-ಜಟಿಲಾ- ಕುಲಿಂಗಾ ಇತಿ ದಶೇಮಾನಿ ಶುಕ್ರಜನನಾನಿ ಭವಂತಿ |
ಜೀವಕ, ಋಷಭಕ, ಕಾಕೋಲೀ, ಕ್ಷೀರಕಾಕೋಲೇ, ಕಾಡು ಹೆಸರು, ಕಾಡು ಉದ್ದು, ಮೇದೆ, ಬಂದಣಿಕೆ, ಜಟಾಮಾಂಸಿ, ಗುಬ್ಬಿ ಮಾಂಸ, ಇವು ಹತ್ತು ಶುಕ್ರವನ್ನುಂಟುಮಾಡ ತಕ್ಕವು.
20. ಕುಷ್ಠೈಲವಾಲುಕ-ಕಟ್ಛಲ- ಸಮುದ್ರಫೇನ ಕದಂಬನಿರ್ಯಾಸೇಕ್ಷು-ಕಾಂ ಡೇಕ್ಷಿಕ್ಷುರಕ-ವಸುಕೋಶೀರಾಣೀತಿ ದಶೇಮಾನಿ ಶುಕ್ರಶೋಧನಾನಿ ಭವಂತಿ | 48*