ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಆ XIX - 380 -

   ಚಂಗಲಕೋಷ್ಠ, ಏಲವಾಲುಕ, ಕಟ್ಫಲ, ಸಮುದ್ರನಾಲಿಗೆ, ಕಡಹದಮರದ ಮೇಣ, 

ಕಬ್ಬು, ಕಾಶದರ್ಭೆ, ಕೊಳವಳಿಕೆ, ವೃದ್ಧಿ (ಅಧವಾ ಕೃಷ್ಣಾಗರು), ಲಾವಂಚ, ಇವು ಹತ್ತು ಶುಕ್ರಶೋಧನಮಾಡತಕ್ಕವು.

   21.   ಮೃದ್ವೀಕಾ - ಮಧುಕ-ಮಧುಪಣೀ೯-ಮೇದಾ-ವಿದಾರೀ-ಕಾಕೋಲೀ-
         ಕ್ಷೀರಕಾಕೋಲೀ-ಜೀವಕ-ಜೀವಂತೀ-ಶಾಲಪಣಣ್ಯ೯ ಇತಿ ದಶೇಮಾನಿ
         ಸ್ನೇಹೋಪಯೋಗಾನಿ ಭವಂತಿ | 
   ದ್ರಾಕ್ಷೇ, ಜೇಷ್ಠಮಧು, ಶಿವನಿ, ಮೇದೇ, ನೆಲಕುಂಬಳ, ಕಾಕೋಲೀ, ಕ್ಷೀರಕಾಕೋ 

ಲೀ, ಜೀವಕ, ಜೀವಂತೀ, ಮೂವೆಲೆ, ಇವು ಹತ್ತು ಸ್ನೇಹನಕರ್ಮಕ್ಕೆ ಉಪಯೋಗವುಳ್ಳವು.

   22.   ಶೋಭಾಂಜನ-ಕೈರಂಡಾರ್ಕ-ವೃಶ್ಚೀರ-ಪುನರ್ನವಾ-ಯವ-ತಿಲ-ಕುಲತ್ದ-
         ಮಾಷ-ಬದರಾಣೀತಿ ದಶೇಮಾನಿ ಸ್ವೇದೋಪಗಾನಿ ಭವಂತಿ | 
   ನುಗ್ಗೆ, ಹರಳು, ಎಕ್ಕೆ, ಬಿಳೇ ಪುನರ್ನವ, ಕೆಂಪು ಪುನರ್ನವ, ಯವೆಗೋದಿ, ಎಳ್ಳು, ಹುರುಳಿ, ಉದ್ದು, ಬೊಗರಿ, ಇವು ಹತ್ತು ಬೆವರಿಸುವದಕ್ಕೆ ಉಪಯೋಗವಾದಂಥವು.
   23.   ಮಧು - ಮಧುಕ - ಕೋವಿದಾರ -ಕರ್ಬುದಾರ-ನೀಪ-ವಿದುಲ-ಬಿಂಬೀ-
         ಶಣಪುಷ್ಟೀ-ಸದಾಪುಷ್ಟೀ-ಪ್ರತ್ಯಕ್ಪುಷ್ಪ್ಯ, ಇತಿ ದಶೇಮಾನಿ ವಮನೋಪ
         ಗಾನಿ ಭವಂತಿ | 
   ಜೇನು, ಜ್ಯೇಷ್ಠಮಧು, ಕೆಂಪು ಮಂದಾರ, ಬಿಳೇ ಮಂದಾರ, ಕಡಹದಮರ, ಬೆತ್ತ, ಕಹಿತೊಂಡೆ, ಗಿಲಿಗಿಜಿ, ಎಕ್ಕೆ, ಉತ್ತರಣೆ, ಇವು ಹತ್ತು ವಮನಕ್ಕೆ ಉಪಯೋಗವಾದಂಥವು.
   24.   ದ್ರಾಕ್ಷಾ-ಕಾಶ್ಮಯ೯ -ಪರುಷಕಾಧಯಾಮಲಕ-ವಿಭೀತಕ-ಕುವಲ-ವದ
         ರ-ಕರ್ಕಂಧೂ-ಪೀಲೂನೀತಿ ದಶೇಮಾನಿ ವಿರೇಚನೋಪಗಾನಿ ಭವಂತಿ | 
   ದ್ರಾಕ್ಷೆ, ಶಿವನಿ, ಪರೂಷಕ, ಅಣಿಲೆಕಾಯಿ, ನೆಲ್ಲಿಕಾಯಿ, ತಾರೆಕಾಯಿ, ರಾಜಬೊಗರಿ, ಬೊಗರಿ, ಚಿಕ್ಕ ಬೊಗರಿ, ಪೀಲು (ಗೋಣಿಮರ), ಇವು ಹತ್ತು ವಿರೇಚನಕ್ಕೆ ಉಪಯೋಗ ವಾದಂಥವು.
   25.   ತ್ರಿವೃದ್ಬಲ್ವ - ಪಿಪ್ಪಲೀ- ಕುಷ್ಟ - ಸರ್ಷಪ-ವಚಾ-ವತ್ಸಕಫಲ-ಶತಪುಷ್ಪಾ-
         ಮಧುಕ-ಮದನಫಲಾನೀತಿ ದಶೇಮಾನ್ಯಾಸ್ಥಾಪನೋಪಗಾನಿ ಭವಂತಿ | 
   ತಿಗಡೆ, ಬಿಲ್ವಪತ್ರೆ, ಹಿಪ್ಪಲಿ, ಚಂಗಲಕೋಷ್ಠ, ಸಾಸಿವೆ, ಬಜೆ, ಇಂದ್ರಜೀವಿ, ಸಬ್ಬಸಿಗೆ, ಜೇಷ್ಠಮಧು, ಮಾಯಿಫಲ, ಇವು ಹತ್ತು ಆಸ್ಥಾಪನ (ಬಸ್ತಿ ವಿಶೇಷ) ಕರ್ಮಕ್ಕೆ ಉಪ ಯೋಗವಾದಂಥವು.