ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-- 383 - ಅ XIX. 36. 3 ದ್ರಾಕ್ಷಾಭಯಾಮಲಕ - ಪಿಪ್ಪಲೀ -ದುರಾಲಭಾ -ಶೃಂಗೀ-ಕಂಟಕಾರಿಕಾ-ವೃಶ್ಚೀರ-ಪುನರ್ನವಾ-*ವಾತಾಮಲಕ್ಯ ಇತಿ ದಶೇಮಾನಿ ಕಾಸಹರಾಣಿ ಭವಂತಿ | * ಈ ವಾ' ಅಧಿಕವಾಗಿರಬೇಕು 'ವಾತಾಮಲಕೀ' ಎಂಬ ಶಬ್ದ ಬೇರ ಎಲ್ಲಿಯೂ ಕುವದಿಲ್ಲ ದ್ರಾಕ್ಷೆ, ಅಣಿಲೆಕಾಯಿ, ನೆಲ್ಲಿಕಾಯಿ, ಹಿಪ್ಪಲ, ಒಳ್ಳಿತುರುಚ, ಕರ್ಕಟಶೃಂಗೀ, ಕಲ್ಲಂಟೆ, ಬಿಳೇ ಪುನರ್ನವ, ಪುನರ್ನವ, ನೆಲನೆಲ್ಲಿ, ಇವು ಹತ್ತು ಕೆಮ್ಮು ಪರಿಹರಿಸತಕ್ಕವು 37. ಶಟೀ- ಪುಷ್ಕರಮೂಲಾಮ್ಲವೇತಸೈಲಾ-ಹಿಂಗ್ವಗುರು-ಸುರಸಾ-ತಾಮಲ ಕೀ-ಜೀವಂತೀ-ಚಂಡಾ ಇತಿ ದಶೇಮಾನಿ ಶ್ವಾಸಹರಾಣಿ ಭವಂತಿ | ಕಚ್ಚೂರ, ಪುಷ್ಕರಮೂಲ, ಅಮ್ಲವೇತಸ, ಯಾಲಕ್ಕಿ, ಹಿಂಗು, ಅಗಿಲುಗಂಧ, ತುಳಸೀ, ನೆಲನೆಲ್ಲಿ, ಜೀವಂತೀ, ನಸುಗುನ್ನಿ (ನಾಯಿಸೊಣಗು), ಇವು ಹತ್ತು ಉಬ್ಬಸವನ್ನು ಪರಿಹರಿಸು ವಂಧವು. 38. ಪಾಟಲಾಗ್ನಿಮಂಧ-ಬಿಲ್ವ-ಶ್ಯೋಣಾಕ-ಕಾಶ್ಮಯ-ಕಂಟಕಾರಿಕಾ-ಬೃಹ ತೀ-ಶಾಲಿಪರ್ಣೀ-ಪೃಶ್ನಿವರ್ಣೀ-ಗೋಕ್ಷುರಕಾ ಇತಿ ದಶೇಮಾನಿ ಶೋಧ ಹರಾಣಿ ಭವಂತಿ | ಪಾದರಿ, ನರುವಲು, ಬಿಲ್ವಪತ್ರೆ, ಆನಮುಂಗು, ಶಿವನಿ, ಕಲ್ಲಂಟಿ, ಗುಳ್ಳ, ಓರೆಲೆ, ಮೂ ವೆಲೆ, ನೆಗ್ಗಿಲು, ಇವು ಹತ್ತು ಶೋಷವನ್ನು ಪರಿಹರಿಸತಕ್ಕಂಧವು. 39. ಶಾರಿವಾ - ಶರ್ಕರಾ - ಪಾರಾ- ಮಂಜಿಷ್ಠ-ದ್ರಾಕ್ಷಾ-ಪೀಲು-ಪರೂಷಕಾ ಭಯಾಮಲಕ-ವಿಭೀತಕಾನೀತಿ ದಶೇಮಾನಿ ಜ್ವರಹರಾಣಿ ಭವಂತಿ| ನಾಮದ ಬೇರು, ಸಕ್ಕರೆ, ಪಾಡಾವಳಿಗಡ್ಡೆ, ಮಂಜಿಷ್ಠ, ದ್ರಾಕ್ಷಿ, ಪೀಲು (ಗೋಣಿಮರ), ಪರೂಷಕ, ಅಣಿಲೆಕಾಯಿ, ನೆಲ್ಲಿಕಾಯಿ, ಶಾಂತಿಕಾಯಿ, ಇವ್ರ ಹತ್ತು ಜ್ವರಹರವಾದಂಥವು. 40, ದ್ರಾಕ್ಷಾ-ಖರ್ಜೂರ-ಪಿಯಾಲ-ಬದರ-ದಾಡಿಮ-ಫಲ್ಗು-ಪರುಷಕೇಕ್ಶು- ಯವ-ಯಷ್ಟಿಕಾ ಇತಿ ದಶೇಮಾನಿ ಶ್ರಮಹರಾಣಿ ಭವಂತಿ| ದ್ರಾಕ್ಷಿ, ಖರ್ಜೂರ, ಮೋರಂಟಿ (ಮಲ, ಮುರಳ್), ಬೊಗರಿ, ದಾಳಿಂಬ, ಕಾಡು ಅತ್ತಿ, ಪರೂಷಕ, ಕಬ್ಬು, ಯವೆಗೋದಿ, ಜೇಷ್ಠಮಧು, ಇವು ಹತ್ತು ಶ್ರಮಪರಿಹರಿಸತಕ್ಕವು 41, ಲಾಬಾ - ಚಂದನ-ಕಾಶ್ಮರ್ಯಾಫಲ- ಮಧುಕ-ಶರ್ಕರಾ-ನೀಲೋತ್ಪಲೋಮ್ಮ ಶೀರ-ಶಾರಿವಾ-ಗುಡೂಚೀ-ಹ್ರೀವೇರಾಣೀತಿ ದಶೇಮಾನಿ ದಾಹಪ್ರಶಮ ನಾನಿ ಭವಂತಿ | ಅರಳು, ರಕ್ತಚಂದನ, ಶಿವನೀಹಣ್ಣು, ಬ್ಯೇಷ್ರ ಮಧು, ಸಕ್ಕರೆ, ನೈದಿಲು, ಲಾವಂಚ, ನಾಮದ ಬೇರು, ಅಮೃತಬಳ್ಳಿ, ಕರಿಮುಡಿವಾಳ, ಇವು ಹತ್ತು ಉರಿ ಶಮನಮಾಡತಕ್ಕವು.