ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XIX - 382 - 31. ಪ್ರಿಯಂಗ್ವನಂತಾಮ್ರಾಸ್ಥಿ - ಕಟ್ವಂಗ- ಲೋಧ್ರ - ಮೋಚರಸ - ಸಮಂಗಾ ಧಾತಕೀಪುಷ್ಪ -ಪದ್ಮಾ-ಪದ್ಮಕೇಶರಾಣೀತಿ ದಶೇಮಾನಿ ಪುರೀಷಸಂಗ್ರಹ ಣಾನಿ ಭವಂತಿ | ಪ್ರಿಯಂಗು, ಬಳ್ಳಿ ತುರುಚ, ಮಾವಿನ ಬೀಜದ ತಿರುಳು, ಆನೆಮುಂಗು, ಲೋಧ್ರ, ಬೂರುಗದ ಮೇಣ, ಮಂಜಿಷ್ಠ,* ಧಾತಕೀಪುಷ್ಪ , ಪುರುಷರತ್ನ, ಪದ್ಮಕೇಸರ, ಇವು ಹತ್ತು ಮಲವನ್ನು ಸಂಗ್ರಹಮಾಡತಕ್ಕವು. ಅಥವಾ ನಾಚಿಕೆ ಗಿಡದ ಬೇರು ಮಲಯಾಳ ಗ್ರಂಥದಲ್ಲಿ ವರಚುಂಡವೇರು' ಎಂತ ಬರೆದದ್ದು ಕಾಣುತ್ತದೆ 32. ಜಂಬು-ಶಲ್ಲ ಕೀತ್ವಕ್-ಕಚುರಾ - ಮಧುಕ-ಶಾಲ್ಮಲೀ-ಶ್ರೀವೇಷ್ಟಕ-ಭ್ರಷ್ಟ ಮೃತ್ವಯಸ್ಯೋತ್ಸಲ-ತಿಲಕಣಾ ಇತಿ ದಶೇಮಾನಿ ಪುರೀಷವಿರಜನೀ ಯಾನಿ ಭವಂತಿ | ನೇರಳು, ಬೇಲದ ಚಕ್ಕೆ, ಬಳ್ಳಿತುರುಚ, ಇಪ್ಪೆ, ಬೂರುಗ, ಸರಳ ಧೂಪ (ಚಂಚಲ್ಯ), ಸುಟ್ಟ ಮಣ್ಣು, ಪಯಸ್ಯಾ, ನೈದಿಲೆ, ಎಳ್ಳುಕಾಳು, ಇವು ಹತ್ತು ಮಲವನ್ನು ಸ್ವಚ್ಛಮಾಡ ತಕ್ಕಂಧವು. 33. ಜಂಬ್ವಾಮ್ರ-ಪ್ಲಕ್ಷ - ವಟಕ- ಪೀತನೋದುಂಬರಾಶ್ವತ್ಧ-ಭಲ್ಲಾತಕಾಂತಕ ಸೋಮವಲ್ಕಾ ಇತಿ ದಶೇಮಾನಿ ಮೂತ್ರಸಂಗ್ರಹಣಾನಿ ಭವಂತಿ | ನೇರಳು, ಮಾವು, ಬಸುರಿ (ಇತ್ತಿ), ಗೋಳಿ (ಆಲ), ಕಿರುಗೋಳಿ (ಗೋಣಿ), ಅತ್ತಿ, ಅಶ್ವತ್ದ, ಗೇರು, ಕಲ್ಲತ್ತಿ, ಬಳೇ ಕಾಚು, ಇವು ಹತ್ತು ಮೂತ್ರವನ್ನು ಸಂಗ್ರಹಮಾಡ ತಕ್ಕಂಧವು. 34, ವೃಕ್ಷಾದನೀ -ಶ್ವದಂಷ್ಟ್ರಾ -ವಸುಕ-ವಶಿರ-ಪಾಷಾಣಭೇದ-ದರ್ಭ-ಕುಶ ಕಾಶ-ಗುಂದ್ರೇತ್ಕಟ-ಮೂಲಾನೀತಿ ದಶೇಮಾನಿ ಮೂತ್ರವಿರೇಚನೀಯಾ ನಿ ಭವಂತಿ | ನೆಲಕುಂಬಳದಡ್ಡೆ, ನೆಗ್ಗಿಲು, ವಾಸ್ತುಕಶಾಕ, ಬಜೆ, ಪಾಷಾಣಭೇದಿ, ದರ್ಭೆ, ಕುಶ, ಕಾಶ, ಶರ, ಮೃದುದರ್ಭೆ, ಇವುಗಳ ಮೂಲಗಳು, ಇವು ಹತ್ತು ಮೂತ್ರವಿರೇಚನ ಮಾಡಿಸತಕ್ಕವು. 35. ಪದ್ಮೋತ್ಪಲ-ನಲಿನ-ಕುಮುದ-ಸೌಗಂಧಿಕ-ಪುಂಡರೀಕ-ಶತಪತ್ರ-ಮಧು ಕ-ಪ್ರಿಯಂಗು-ಧಾತಕೀಪುಷ್ಪಾಣೀತಿ ದಶೇಮಾನಿ ಮೂತ್ರವಿರಜನೀ ಯಾನಿ ಭವಂತಿ | ತಾವರೆ, ಬಿಳೇ ತಾವರೆ, ನೀಲತಾವರೆ, ಕೆಂದಾವರೆ, ನೈದಿಲೆ, ಬಿಳೇ ನೈದಿಲೆ, ಕೆಂಪು ನೈದಿಲೆ, ಇಪ್ಪೆ, ಪ್ರಿಯಂಗು, ಧಾತಕೀ, ಇವುಗಳ ಪುಷ್ಟಗಳು, ಇವು ಹತ್ತು ಮೂತ್ರವನ್ನು ಸ್ವಚ್ಛ ಮಾಡತಕ್ಕವು.