ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ XIX. - 386 - ವದಿಲ್ಲ. ಆದ್ದರಿಂದ ಅತಿಸಂಕ್ಷೇಪವನ್ನಾಗಲಿ ಅತಿವಿಸ್ತಾರವನ್ನಾಗಲಿ ಮಾಡದೆ ಉದ್ದೇ ಶಿಸಲಾಯಿತು. ಇಷ್ಟರ ಮಟ್ಟಿಗೆ ಹೇಳೋಣಾದದ್ದು ಅಲ್ಪಬುದ್ದಿಯವರ ವ್ಯವಹಾರಕ್ಕೂ, ಸ್ವಲಕ್ಷಣಗಳನ್ನು ಗ್ರಹಿಸುವದರಲ್ಲಿಯೂ, ಊಹನೆ ಕ್ರಮದಲ್ಲಿಯೂ, ಜೋಡಣೆಯಲ್ಲಿಯೂ, ಪ್ರವೀಣರಾದ ಬುದ್ದಿವಂತರಿಗೆ ಸ್ಪಷ್ಟವಾಗಿ ಹೇಳಲ್ಪಡದ ಅರ್ಧವನ್ನು ತಿಳಿಸುವದಕ್ಕೂ ಉಪ ಯುಕ್ತವಾಗಿರುತ್ತದೆ. ಬದಲಾಯಿಸುವ ಸಂದರ್ಭ 89 (a) ತೇಷಾಂ ಕರ್ಮಸು ವಾಹೇಷು ಯೋಗಮಾಭ್ಯಂತರೇಷು ಚ | ಯೋಗಗಳನ್ನು ಸಂಯೋಗಂ ಚ ವಿಯೋಗಂ ಚ ಯೋ ವೇದ ಸ ಭಿಷಗ್ವರಃ || (ಚ. 25.) ಆ ಕಷಾಯಗಳನ್ನು ಸಾಧಿಸತಕ್ಕ ಕರ್ಮಗಳ ಸ್ಥಿತಿಭೇದಗಳ ಮೇಲೆ ಯೋಗಪ್ರಕಾರವೇ, ಅಧವಾ ಅವಶ್ಯವಾದ ಬೇರೆ ಔಷಧಗಳನ್ನು ಕೂಡಿಸಿಕೊಂಡು, ಅಧವಾ ಬೇಡದವುಗಳನ್ನು ಬಿಟ್ಟುಬಿಟ್ಟು, ಉಪಯೋಗಿಸಲಿಕ್ಕೆ ಯಾವನು ಒಲ್ಲನೋ ಅವನೇ ಶ್ರೇಷ್ಠನಾದ ವೈದ್ಯನಾಗಿರು ತಾನೆ. (0) ಸಮಿಾಕ್ಷ್ಯ ದೋಷಭೇದಾಂಶ್ಚ ಗಣಾನ್ ಭಿನ್ನಾನ್ ಪ್ರಯೋಜಯೇತ್ | ಪೃಧದ್ಮಶ್ರಾನ್ ಸಮಸ್ತಾನಾ ಗಣಂ ವಾ ವ್ಯಸ್ತಸಂಹತಂ || (ಸು. 145.) ದೋಷಭೇದಗಳನ್ನು ನೋಡಿಕೊಂಡು, ಬೇರೆ ಬೇರೆ ಗಣಗಳಲ್ಲಿ ಹೇಳಲ್ಪಟ್ಟ ಔಷಧ ಗಳನ್ನು ಪ್ರತ್ಯಪ್ರತ್ಯೇಕವಾಗಿಯೋ, ಮಿಶ್ರಮಾಡಿಯೋ, ಒಟ್ಟು ಕೂಡಿಸಿಯೋ, ಕೆಲವನ್ನು ಬಿಟ್ಟು ಭಿನ್ನಮಾಡಿಯೋ, ಅಥವಾ ಒಂದೇ ಗಣದ ಔಷಧಗಳನ್ನು ತೂಕದಲ್ಲಿ ಹೆಚ್ಚು ಕಡಿಮೆ ಮಾಡಿಯೋ, ಉಪಯೋಗಿಸತಕ್ಕದ್ದು (C) ವ್ಯಾಧೇರಯುಕ್ತಂ ಯದ್ಧದ್ರವ್ಯಂ ಗಣೋಕ್ತಮಪಿ ತತ್ಯಜೇತ್ | ಅನುಕ್ತಮಪಿ ಯದ್ಯುಕ್ತಂ ಯೋಜಯೇತ್ರ ತದ್ಭುಧಃ || (ಶಾ. 5.) ಗಣದಲ್ಲಿ ಹೇಳಲ್ಪಟ್ಟ ಔಷಧಗಳಲ್ಲಿ ಒಂದು ಆಗಿದ್ದರೂ, ಯಾವ ದ್ರವ್ಯವು ರೋಗಕ್ಕೆ ಯುಕ್ತವಲ್ಲವೋ ಅದನ್ನು ಬುದ್ದಿವಂತನು ಬಿಟ್ಟು ಬಿಡಬೇಕು; ಮತ್ತು ಯಾವದು ರೋಗಕ್ಕೆ ಯುಕ್ತವಾಗಿರುತ್ತದೋ, ಅದನ್ನು ಗಣದಲ್ಲಿ ಹೇಳದೆ ಇದ್ದಾಗ್ಯೂ, ಕೂಡಿಸಿಕೊಳ್ಳತಕ್ಕದ್ದು. 90. ಏಕಮಪ್ಯೌಷಧಂ ಯೋಗೇ ಯಸ್ಮಿನ್ ಯುತ್ಪುನರುಚ್ಯತೇ | ಮಾನತೋ ದ್ವಿಗುಣಂ ಪ್ರೋಕ್ತಂ ತದ್ರ ವ್ಯಂ ತತ್ವದರ್ಶಿಭಿಃ || ಪುನರುಕ್ತಿ ಯ ವ್ಯವಸ್ಥೆ (ಶಾ. 5.) ಯಾವದಾದರೊಂದು ಯೋಗದಲ್ಲಿ ಒಂದೇ ಔಷಧವು ಎರಡು ಸರ್ತಿ ಹೇಳಲ್ಪಟ್ಟರೆ, ಅದನ್ನು ತೂಕದಲ್ಲಿ ಎರಡು ಪಾಲಷ್ಟು ಕೂಡಿಸತಕ್ಕದ್ದೆಂತ ಬಲ್ಲವರು ಹೇಳಿರುತ್ತಾರೆ. ದಿ