ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 387 - ಅ XIX ವಿವರಿಸಲ್ಪಡದ ಕ ಅ oತ , 91. ರೋಗಾ ಯೇವ್ಯತ್ರ ನೋದ್ದಿ ಷ್ಟಾ ಬಹುತ್ವಾನ್ನಾಮರೂಪತಃ | ತೇಷಾಮಪೈತದೇವ ಸ್ಯಾದ್ದೋಪಾದೀನ್ ವೀಕ್ಷ ಭೇಷಜಂ || ದೋಷದಷ್ಯನಿದಾನಾನಾಂ ವಿಪರೀತಂ ಹಿತಂ ಧ್ರುವಂ | ರೋಗಗಳ ಚಿಕಿತ್ಸೆ ಉಕ್ತಾನುಲ್ತಾನ್ ಗದಾನೃರ್ವಾನ್ಸಮ್ಯಗ್ಯುಕ್ತಂ ನಿಯಚ್ಛತಿ | (ಚ. 827,) ರೋಗಗಳು ಹೆಸರಿನಿಂದಲೂ ರೂಪದಿಂದಲೂ ಬಹಳವಾಗಿರುವ ದೆಸೆಯಿಂದ ಇಲ್ಲಿ ಯಾವ ರೋಗಗಳು ವರ್ಣಿಸಲ್ಪಡಲಿಲ್ಲವೋ, ಅವುಗಳಿಗೆ ಇದೇ ಔಷಧವನ್ನು ದೋಷಾದಿ ಗಳಿಗೆ ಲಕ್ಷ್ಯವಿಟ್ಟು ಕೊಡತಕ್ಕದ್ದಾಗಿರುತ್ತದೆ. ಯಾವ ರೋಗವೇಯಾಗಲಿ, ದೋಷಗಳಿಗೂ, ವಿಕಾರದ ಲಕ್ಷಣಗಳಿಗೂ, ಅವುಗಳ ಕಾರಣಗಳಿಗೂ ವಿರುದ್ಧವಾದದ್ದು ರೋಗಿಗೆ ಹಿತಕರ ವಾಗುವದಕ್ಕೆ ಸಂದೇಹವಿಲ್ಲ ಅದನ್ನು ಒಳ್ಳೇದಾಗಿ ಯುಕ್ತಿಯಿಂದ ಉಪಯೋಗಿಸಿದರೆ, ಸರ್ವ ರೋಗಗಳು, ವರ್ಣಿಸಲ್ಪಟ್ಟವಾಗಲಿ, ವರ್ಣಿಸಲ್ಪಡದವಾಗಲಿ, ಪರಿಹಾರವಾಗುವವು. 92. ಆಸ್ಸಾದಾಮಾಶಯಸ್ಸಾನ್ ಹಿ ರೋಗಾನ್ನಸ್ತಃ ಶಿರೋಗತಾನ್ | ಔಷಧ ಸೇವನೆಗೆ ಗುದ್ದಾತ್ಸಾಶಯಸ್ಸಾಂಸ್ತ ಹತ್ಯಾಶು ದ್ರವಮೌಷಧಂ || ಮುಖಗಳು ಶರೀರಾವಯತೇಷು ವೀಸರ್ಪಪಿಡಕಾದಿಷು | ಯಧಾದೇಶಂ ಪ್ರದೇಹಾದಿ ಶಮನಂ ಸ್ಯಾದ್ವಿಶೇಷತಃ | (ಚ, 287.) ಆಮಾಶಯದ ರೋಗಗಳಿಗೆ ಪಾನರೂಪವಾಗಿ, ತಲೆರೋಗಗಳಿಗೆ ನಸ್ಯರೂಪವಾಗಿ, ಪಕ್ವಾಶಯದ ರೋಗಗಳಿಗೆ ಆಸನದ್ವಾರ (ನಿರೂಹಾದಿ ಕ್ರಮಗಳಿಂದ), ದ್ರವಯುಕ್ತವಾದ ಔಷಧವು ಉಪಯೋಗಿಸಲ್ಪಟ್ಟಲ್ಲಿ, ಆ ರೋಗಗಳು ಬೇಗನೆ ವಾಸಿಯಾಗುವವು. ಶರೀರದ ಯಾವದಾದರೊಂದು ಅವಯವದಲ್ಲಿ ಉತ್ಪನ್ನವಾದ ವಿಸರ್ಪ ಪಿಡಕಾದಿಗಳಲ್ಲಿ ಆಯಾ ಸ್ಥಳಕ್ಕೆ ಲೇಪಾದಿಗಳನ್ನು ಉಪಯೋಗಿಸುವದರಿಂದ ವಿಶೇಷ ಗುಣ ಸಿಕ್ಕುವದು.