ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                                  - 397-                                            ಅXX             'ಮಂಧ' ಎಂಬದು ಫಾಂಟ ಕಷಾಯದ ಭೇದವಾಗಿರುತ್ತದೆ. ಒಂದು ಪಲ ಔಷಧ ದ್ರವ್ಯವನ್ನು ನುಣ್ಣಗೆ ಚೂರ್ಣಮಾಡಿ, ಅದಕ್ಕೆ ನಾಲ್ಕು ಪಲ ತಣ್ಣೀರು ಕೂಡಿಸಿ, ಮಣ್ಣಿನ ಗಡಿಗೆಯಲ್ಲಿ ಚೆನ್ನಾಗಿ ಕಡದದ್ದು ಮಂಧ ಅದರಿಂದ ಎರಡು ಪಲ ಕುಡಿಯುವದು (ಇದು ಮಾತ್ರೆ).

24. ಅತ್ಯಂತಶುಷ್ಕಂ ಯದ್ದ್ರ ವ್ಯಂ ಸುಪಿಷ್ಟಂ ವಸ್ತ್ರಗಾಲಿತಂ | ಚೂರ್ಣದ ಕ್ರಮ ತತ್ಸ್ಯಾತ್ ಚೂರ್ಣರಜಃ ಕ್ಷೋದಸ್ತನ್ಮಾತ್ರಾ ಕರ್ಷಸಮ್ಮಿತ || ಮತ್ತು ಮಾತ್ರೆ (ಭಾ. ಪ್ರ. 194.) ಅತ್ಯಂತ ಒಣಗಲಾದ ದ್ರವ್ಯಗಳನ್ನು ಚೆನ್ನಾಗಿ ಕುಟ್ಟಿ, ವಸ್ತ್ರಗಾಲಿತ ಮಾಡಿದ್ದಲ್ಲಿ, ಸಿಕ್ಕುವ ನುಣ್ಣಗಿನ ಚೂರ್ಣದ ದೂಳು ಚೂರ್ಣವೆನ್ನಿಸಿಕೊಳ್ಳುತ್ತದೆ. ಅದರ ಮಾತ್ರೆ ಒಂದು ಕರ್ಷ (ಮುಕ್ಕಾಲು ತೊಲೆ) ತೂಕ ಚೂರ್ಣಸೇವನ ವಿಧಿ 25. ಚೂರ್ಣೇ ಗುಡಃ ಸಮೋ ದೇಯಃ ಶರ್ಕರಾ ದ್ವಿಗುಣಾ ಭವೇತ್ | ಚೂರ್ಣೇಷು ಭರ್ಜಿತಂ ಹಿಂಗು ದೇಯಂ ನೋತ್ಕ್ಲೇದಕೃದ್ಭವೇತ್|| ಲಿಹೇಚ್ಚೂರ್ಣಂ ದ್ರವೈಃ ಸರ್ವೈರ್ಘೃತಾದ್ಯೈರ್ದ್ವಿಗುಣೋನ್ಮಿತೈಃ |

ಪಿಬೇಚ್ಚ ತುರ್ಗುಣೈರೇವ ಚೂರ್ಣಮಾಲೋಡಿತಂ  ದ್ರವೈಃ || (ಶಾ 59.) ಚೂರ್ಣಕ್ಕೆ ಬೆಲ್ಲ ಕೂಡಿಸಿಕೊಳ್ಳುವಲ್ಲಿ ಸರಿಪಾಲು, ಸಕ್ಕರೆ ಕೂಡಿಸಿಕೊಳ್ಳುವಲ್ಲಿ ಎರಡ ರಷ್ಟು ಸೇರಿಸತಕ್ಕದ್ದು. ಹಿಂಗು ಕೂಡಿಸುವ ಸಂಗತಿಯಲ್ಲಿ ತುಪ್ಪ ಕೂಡಿಸಿ ಹುರಿದು ಪುಡಿ ಮಾಡಿ ಸೇರಿಸಬೇಕು, ಆಗ್ಗೆ ಅದರಿಂದ ಉತ್ಕ್ಲೇದ (ಹೇಸಿ, ವಾಂತಿ ಬಂದ ಹಾಗೆ ಆಗುವದು) ಉಂಟಾಗುವದಿಲ್ಲ. ತುಪ್ಪ ಮೊದಲಾದ ದ್ರವಪದಾರ್ಧಗಳಿಂದ ನೆಕ್ಕುವ ಸಂಗತಿಯಲ್ಲಿ, ಅಂಧಾ ದ್ರವವನ್ನು ಎರಡು ಪಾಲಷ್ಟು ಕೂಡಿಸಿಕೊಳ್ಳ ಬೇಕು. ಇತರ ದ್ರವಗಳಲ್ಲಿ ಕದಡಿ ಕುಡಿಯುವದಾದರೆ, ಅಂಧಾ ದ್ರವವನ್ನು ನಾಲ್ಕು ಪಾಲಷ್ಟು ಉಪಯೋಗಿಸಬೇಕು.                       
    ಚೂರ್ಣಾದಿಗಳಿಗೆ  ಅನುಪಾನಗಳು

26. ಚೂರ್ಣಾವಲೇಹಗುಟಿಕಾಕಲ್ಕಾನಾಮನುಪಾನಕಂ | ಪಿತ್ತವಾತಕ ಫಾತಂಕ ತ್ರಿದ್ವ್ಯೇಕಪಲಮಾಹರೇತ್ || ಯಧಾ ತೈಲಂ ಜಲೇ ಪ್ರಾಪ್ತಂ ಕ್ಷಣೇನೈವ ಎಸರ್ಪತಿ | ಅನುಪಾನಬಲಾದಂಗೇ ತಧಾ ಸರ್ಪತಿ ಭೇಷಜಂ | (ಭಾ ಪ್ರ 194-99.)

 ಚೂರ್ಣ, ಲೇಹ, ಗುಳಿಗೆ, ಅಧವಾ ಕಲ್ಕ ಸೇವಿಸಿದ ಕೂಡಲೇ (ಕಷಾಯ, ನೀರು ಮುಂತಾದ) ಅನುಪಾನವನ್ನು ಪಿತ್ತದೋಷದಲ್ಲಿ ಮೂರು          ಪಲದಷ್ಟು, ವಾತದೋಷದಲ್ಲಿ ಎರಡು ಪಲದಷ್ಟು, ಮತ್ತು ಕಫದ ದೋಷದಲ್ಲಿ ಒಂದು ಪಲದಷ್ಟು ಕುಡಿಯಬೇಕು. ನೀರಲ್ಲಿ ಬಿದ್ದ ತೈಲವು ಹ್ಯಾಗೆ ಕ್ಷಣದಲ್ಲಿ ಪಸರಿಸುತ್ತದೋ, ಹಾಗೆ ಔಷಧವು ಅನುಪಾನದ ಬಲದಿಂದ ದೇಹದೊಳಗೆ ವ್ಯಾಪಿಸುತ್ತದೆ.