ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XX.

                   _  396  _

ಹಸಿ ಔಷಧವನ್ನು, ಒಣಗಲಾದರೆ ಚೂರ್ಣಮಾಡಿ ನೀರು ಕೂಡಿಸಿಕೊಂಡು, ಕಲ್ಲಲ್ಲಿ ಅರೆದು, ಬೇಕಾದ ಪ್ರಕ್ಷೇಪ ಕೂಡಿಸಿಕೊಂಡು, ಕುಡಿಯುವದು. ಅದಕ್ಕೆ ಕಲ್ಕ ಕಷಾಯ ವೆಂತ ಹೆಸರು. ಕಲ್ಕಕ್ಕೆ ಜೇನನ್ನಾಗಲಿ, ತುಪ್ಪವನ್ನಾಗಲಿ, ತೈಲವನ್ನಾಗಲಿ, ಕೂಡಿಸುವ ದಾದರೆ, ಎರಡು ಪಾಲಷ್ಟು ಹಾಕಬೇಕು. ಸಕ್ಕರೆಯನ್ನು ಅಧವಾ ಬೆಲ್ಲವನ್ನು ಕೂಡಿಸುವ ಸಂಗತಿಯಲ್ಲಿ ಸರಿಪಾಲು ಮತ್ತು ದ್ರವಪದಾರ್ಧ ಸೇರಿಸುವಲ್ಲಿ ನಾಲ್ಕು ಪಾಲಷ್ಟು ಕೂಡಿಸ ತಕ್ಕದ್ದು. ಕಲ್ಕದ ಮಾತ್ರೆ ಕಾಲು ಪಲ. ಷರಾ ಚೂರ್ಣೋJಪ್ಲು ತಃ (ವಾ 431) - ಅಂದರೆ ನೀರು ಕೊಡಿಸದ ಪುಡಿಗೆ ಚೂರ್ಣವೆಂತ ಹೆಸರು ಪೇಷ್ಯಸ್ಯ ಕರ್ಷಮಾಲೋಡ್ಯಂ ತದ್ದ್ರವಸ್ಯ ಪಲತ್ರಯೇ | (ವಾ. 432.) ಕಾಲು ಪಲ ಔಷಧವನ್ನು ಅರೆದು ನುಣ್ಣಗೆ ಪುಡಿಮಾಡಿ ಮೂರು ಪಲ ದ್ರವಪದಾರ್ಧ ದಲ್ಲಿ ಕಲಸಿದ ಕಲ್ಕವು ಮಧ್ಯಮಾನ.

21. ಸದ್ಯಃಸಮುದ್ದೃತಾತ್ಕ್ಷಣ್ಣಾದ್ಯಂ ಪ್ರವತ್ಸಟಪೀಡಿತಾತ್ | ಸ್ರವೇತ್ಪಟಪೀಡಿತಾತ| ಸ್ವರಸಃ ಸ ಸಮುದ್ಧಿಷ್ಟಃ | (ವಾ 431.) ಕ್ರಮ ಮತ್ತು ಮಾತ್ರೆ ಆಗಲೇ ಸಂಗ್ರಹಿಸಿದ (ಹಸಿ) ಔಷಧವನ್ನು ಜಜ್ಜಿ, ವಸ್ತ್ರದ ತುಂಡಿನಲ್ಲಿ ಹಾಕಿ, ಹಿಂಡಿ ದರೆ ಬರುವ ರಸಕ್ಕೆ ಸ್ವರಸವನ್ನುತ್ತಾರೆ. ಸ್ವರಸಸ್ಯ ಗುರುತ್ವಾಚ್ಚ ಪಲಮರ್ಧ೦ ಪ್ರಯೋಜಯೇತ್ | (ಶಾ 37 ) ಸ್ವರಸವು ಗುರುವಾದ್ದರಿಂದ, ಸರ್ತಿಗೆ ಅದರಿಂದ ಅರ್ಧಪಲವನ್ನು ಪ್ರಯೋಗಿಸತಕ್ಕದ್ದು. ಷರಾ ವಾಗ್ಬಟನ ಪ್ರಕಾರ (ಪು 432) “ಮಧ್ಯಂ ತು ಮಾನಂ ನಿರ್ದಿಷ್ಟಂ ಸ್ವರಸಸ್ಯ ಚತುಃಪಲಂ' ಸ್ವರಸದ ಮಧ್ಯ ಮಾನ ನಾಲ್ಕು ಪಲ ಎಂತ ಕಾಣುತ್ತದೆ ಆ ಪ್ರಕಾರ ಕೆಲವು ವೈದ್ಯರು ಒಂದೊಂದು ಆ ಕುಡುತೆ ರಸವನ್ನು ವಿಚಾರವಿಲ್ಲದೆ ಕುಡಿಸುವದುಂಟೆಂತ ಕಾಣುತ್ತದೆ. ಕಬ್ಬಿನ ರಸ 1 ಕುಡುತೆ ಕುಡಿಯುವದರಿಂದ ಬಾಧಕ ಬರಲಾರದಾದರೂ, ಬೆಳ್ಳುಳ್ಳಿ ರಸ, ನುಗ್ಗೆ ರಸ, ಶುಂಠಿರಸ, ಇತ್ಯಾದಿ ತೀಕ್ಷವಾದ ಸ್ವರಸದಲ್ಲಿ ಒಂದು ಕುಡುತೆಯಷ್ಟು ಕುಡಿಯುವದಕ್ಕೆ ಶಕ್ತರಾದ ರೋಗಿಗಳು ಬಹು ಮಂದಿ ಇರಲಾರರು ಶಾ ನ ಅರ್ಧ ಪಲದ ಮಾತ್ರೆಯೇ ಬಾ ಪ್ರ ದಲ್ಲಿಯೂ ಆಧರಿಸಲ್ಪಟ್ಟದೆ

22. ಮಧುಶ್ವೇತಾಗುಡಕ್ಷಾರಾನ್ ಜೀರಕಂ ಲವಣಂ ತಧಾ | ಸ್ವರಸಕ್ಕೆ ಪ್ರಕ್ಷೇಪ ಘೃತಂ ತೈಲಂ ಚ ಚೂರ್ಣಾದೀನ್ ಕೋಲಮಾತ್ರಾನ್ ರಸೇ ಕ್ಷಿಪೇತ್ ||

                                        (ಶಾ. 38.)
                                             ಸ್ವರಸಕ್ಕೆ ಜೇನು, ಸಕ್ಕರ, ಬೆಲ್ಲ, ಕ್ಷಾರ, ಜೀರಿಗೆ ಪುಡಿ, ಸೈಂಧವಲವಣ, ತುಪ್ಪ, ತೈಲ, ಚೂರ್ಣ ಮುಂತಾದ್ದನ್ನು ಕೂಡಿಸುವದಾದರೆ, (ಒಂದೂವರೆ ಪಾವಲಿತೂಕ) ಅರ್ಧ ಕರ್ಷ ತೂಕ ಹಾಕಬೇಕು.

23. ಮಂಧೋSಪಿ ಫಾಂಟಭೇದಃ ಸ್ಯಾತ್ತೇನ ಚಾತ್ರೈವ ಕಧ್ಯತೇ | ಮಂಥದ ಕ್ರಮ ಜಲೇ ಚತುಷ್ಪಲೇ ಶೀತೇ ಕ್ಷುಣ್ಣಂ ದ್ರವ್ಯಪಲಂ ಕ್ಷಿಪೇತ್ || ಮತ್ತು ಮಾತ್ರೆ ಮೃತ್ಪಾತ್ರೇ ಮಂಧಯೇತ್ಸಮ್ಯಕ್ ತಸ್ಮಾಚ್ಚ ದ್ವಿಪಲಂ ಪಿಬೇತ್ |

                                      (ಶಾ. 56.)