ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                   _  395  _
                                          ಆ XX

ಕ್ಷೀರಂ ಘೃತಂ ಗುಡಂ ತೈಲಂ ಮೂತ್ರಂ ಚಾನ್ಯದ್ರವಂ ತಧಾ | ಕಲ್ಕಂ ಚೂರ್ಣಾದಿಕ೦ ಕ್ವಾಧೇ ನಿಕ್ಷಿಪೇತ್ಕರ್ಷಸಮ್ಮಿತಂ || (ಶಾ. 41.) ಕಷಾಯಕ್ಕೆ ಜೀರಿಗೆ, ಗುಗ್ಗುಳ, ಕ್ಷಾರ, ಉಪ್ಪು, ಶಿಲಾಜಿತು, ಹಿಂಗು, ತ್ರಿಕಟು, ಇವು ಗಳ ಚೂರ್ಣವನ್ನು ಮೇಲ್ಪುಡಿಯಾಗಿ ಕೂಡಿಸುವ ಸಂಗತಿಯಲ್ಲಿ, ಅದಕ್ಕೆ ಪರಿಮಾಣ ಒಂದು ಶಾಣ (ಅರ್ಧಕಳಂಜ). ಹಾಲನ್ನಾಗಲಿ, ತುಪ್ಪವನ್ನಾಗಲಿ, ಬೆಲ್ಲವನ್ನಾಗಲಿ, ತೈಲವನ್ನಾಗಲಿ, ಮೂತ್ರವನ್ನಾಗಲಿ, ಬೇರೆ ದ್ರವಪದಾರ್ಧವನ್ನಾಗಲಿ, ಕಲ್ಕವನ್ನಾಗಲಿ, ಚೂರ್ಣಾದಿ ಗಳನ್ನಾಗಲಿ, ಕೂಡಿಸುವದಾದರೆ, ಕಾಲು ಪಲದಷ್ಟು ಹಾಕತಕ್ಕದ್ದು.

18. ಕ್ಷುಣ್ಣ ದ್ರವ್ಯಪಲೇ ಸಮ್ಯಕ್ ಜಲಮುಷ್ಣಂ ವಿನಿಕ್ಷಿಪೇತ್ | ಫಾಂಟ ಕಷಾಯದ ಮೃತ್ಪಾತ್ರೇ ಕುಡವೋನ್ಮಾನಂ ತತಸ್ತು ಸ್ರಾವಯೇತ್ಪಟಾತ್ || ಕ್ರಮ ಸಃ ಸ್ಯಾಚ್ಚೂರ್ಣದ್ರವಃ ಫಾಂಟಸ್ತನ್ಮಾನಂ ದ್ವಿಪಲೋನ್ಮಿತಂ | ಮಧುಸಿತಾಗುಡಾದೀಂಶ್ಚ ಕ್ವಾಧವತ್ತತ್ರ ನಿಕ್ಷಿಪೇತ್ || (ಶಾ. 55.)

 ಒಂದು ಪಲ ದ್ರವ್ಯವನ್ನು ಕುಟ್ಟಿ, ಚೂರ್ಣಮಾಡಿ, ಮಣ್ಣಿನ ಪಾತ್ರೆಯಲ್ಲಿಟ್ಟು, ಅದಕ್ಕೆ ಒಂದು ಕುಡುತೆ ಕುದಿಯುವ ನೀರನ್ನು ಹಾಕಿ, ಸ್ವಲ್ಪ ಹೊತ್ತು ಇಟ್ಟು, ವಸ್ತ್ರದಿಂದ ಶೋಧಿಸಿ ತೆಗೆದ ಚೂರ್ಣದ ರಸಕ್ಕೆ ಫಾಂಟ ಎನ್ನುತ್ತಾರೆ. ಅದರ ಮಾತ್ರೆ ಅರ್ಧ ಕುಡುತೆ. ಅದಕ್ಕೆ ಜೇನು, ಸಕ್ಕರೆ, ಬೆಲ್ಲ, ಮುಂತಾದ ಪ್ರಕ್ಷೇಪವನ್ನು ಶೃತಕಷಾಯಕ್ಕೆ ಹೇಳಿದ ಕ್ರಮದಲ್ಲಿ ಕೂಡಿಸತಕ್ಕದ್ದು.

19. ಕ್ಷುಣ್ಣಂ ದ್ರವ್ಯಪಲಂ ಸಮ್ಯಕ್ ಷಡ್ಬಿರ್ನೀರಪಲೈ಼ಃ ಪ್ಲುತಂ | ತೀತ ಕಷಾಯದ ನಿಶೋಷಿತಂ ಹಿಮಃ ಸಃ ಸ್ಯಾತ್ತಧಾ ಶೀತಕಷಾಯಕಃ || ಕ್ರಮ ತನ್ಮಾನಂ ಫಾಂಟವಜ್ಜೇಯಂ ಸರ್ವತ್ರೈವೈಷ ನಿಶ್ಚಯಃ | (ಶಾ. 56.)

ಒಂದು ಸಲ ದ್ರವ್ಯವನ್ನು ಚೂರ್ಣಮಾಡಿ, ಅದಕ್ಕೆ ಆರು ಪಲ (ಒಂದೂವರೆ ಕುಡುತೆ) ನೀರು ಹಾಕಿ, ಕದಡಿ, ಒಂದು ರಾತ್ರಿಕಾಲ (ಅಥವಾ ಒಂದು ಹಗಲು) ಇರಿಸಿ, ಬೆಳಿಗ್ಗೆ ಶೋಧಿಸಿ ತೆಗೆದ ರಸವು ಹಿಮ ಎನ್ನಿಸಿಕೊಳ್ಳುತ್ತದೆ. ಅದಕ್ಕ ಶೀತಕಷಾಯವೆಂತಲೂ ಹೇಳು ತ್ತಾರೆ. ಅದರ ಮಾತ್ರೆಯು ಯಾವಾಗಲೂ ಫಾಂಟಕಷಾಯದಂತೆಯೇ ಆಗಿರುತ್ತದೆಂಬದು ನಿಶ್ಚಯ. 20. ದ್ರವ್ಯಮಾದ್ರ೦ ಶಿಲಾಪಿಷ್ಟಂ ಶುಷ್ಕಂ ವಾ ಸಜಲಂ ಪಿಬೇತ್ || ಪ್ರಕ್ಷೇಪಾಶ್ಚಾಪಿ ಕಲ್ಕಾಸ್ತೇ ತನ್ಮಾನಂ ಕರ್ಷಸಮ್ಮಿತಂ || ಕಲ್ಕ ಕಷಾಯದ ಕಲ್ಕೇ ಮಧು ಘೃತಂ ತೈಲಂ ದೇಯಂ ದ್ವಿಗುಣಮಾತ್ರಯಾ | ಕ್ರಮ ಮತ್ತು ಅದಕ್ಕೆ ಪ್ರಕ್ಷೇಪ ಸಿತಾಂ ಗುಡಂ ಸಮಂ ದದ್ಯಾದ್ದ್ರವಾ ದೇಯಾಶ್ಚತುರ್ಗುಣಾಃ || (ಶಾ. 57.) 50*