ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ XX - 394 - ಅಮೃತಬಳ್ಳಿ, ಕೊಡಸಿಗ, ಆಡುಸೋಗೆ, ಬೂದಿಕುಂಬಳ, ಶತಾವರಿ (ಹಲವುಮಕ್ಕಳ ತಾಯಿ), ಅಶ್ವಗಂಧ (ಹಿರೇಮದ್ದು), ಅರಸಿನ ಗೋರಟೆ, ಸಬ್ಬಸಿಗೆ (ಸತಾಪ), ಪಸಾರಿಣೀ ಇವು ಯಾವಾಗಲೂ ಹಸಿಯಾಗಿಯೇ ಉಪಯೋಗಿಸಲ್ಪಡತಕ್ಕವಾದ್ದರಿಂದ, ಅವುಗಳನ್ನು ಹಿಂದಿನ ಸೂತ್ರ ಪ್ರಕಾರ ದುಬಾರೆಯಾಗಿ ಕೂಡಿಸಬಾರದು. ವಾಸಾ-ನಿಂಬ - ಪಟೋಲ-ಕೇತಕಿ-ಬಲಾ-ಕೂಷ್ಮಾಂಡಕ್ಕೆಂದ್ರೀ-ವರೀವರ್ಷಾಭೂ-ಕುಟಚಾಶ್ವಗಂಧ-ಸಹಿತಾಸ್ತಾಃ ಪೂತಿಗಂಧಾಮೃತಾಃ | ಮಾಂಸಂ ನಾಗಬಲಾಕುರ೦ಟಕಪುರೋ ಹಿಂಗ್ಲಾದ್ರ್ರಕೇ ನಿತ್ಯಶೋ ಗ್ರಾಹ್ಯಾಸ್ತತ್ಕ್ಷಣಮೇವ ನ ದ್ವಿಗುಣಿತಾ ಯೇ ಚೇಕುಜಾತಾ ಘನಾಃ || ಆಡುಸೋಗೆ, ಕಹಿಬೇವು, ಕಹಿಪಡುವಲು, ಕೇದಗೆ, ಕಲ್ಲಂಗಡಲೆ (ಕಡೀರು), ಬೂದಿ ಕುಂಬಳಕಾಯಿ, ಹಾವುಮೆಕ್ಕೆ, ಶತಾವರಿ, ಪುನರ್ನವಿ, ಕೊಡಸಿಗ, ಅಶ್ವಗಂಧ, ಇಂಗಳದ ಮರ, ಅಮೃತಬಳ್ಳಿ, ಮಾಂಸ, ಆನೆಕಡೀರು, ಹಳದಿಗೋರಟೆ, ಗುಗ್ಗುಳ, ಹಿಂಗು, ಹಸೀ ಶುಂಠಿ, ಬೆಲ್ಲ, ಇವುಗಳು ಆಗಲೇ ಹಸಿಯಾಗಿಯೇ ಉಪಯೋಗಿಸಲ್ಪಡತಕ್ಕವ. ಅವುಗಳನ್ನು ದ್ವಿಗುಣ ಮಾಡಬಾರದು ಷರಾ ಈ ಶ್ಲೋಕವು ಮೂರು ಗ್ರಂಥಗಳಲ್ಲಿ ಮೂರು ವಿಧವಾಗಿ ಕಾಣುತ್ತದೆ ಒಂದು ಪಾರದಲ್ಲಿ ಅಶ್ವಗಂಧಿ ಬಿಟ್ಟು ಸುವರ್ಣಗಡ್ಡೆ, ಒಂದು ಪಾರದಲ್ಲಿ ಮಾಂಸದ ಬದಲಿಗೆ ಜಟಾಮಾಂಸಿ, ಇತ್ಯಾದಿ ಭೇದಗಳು ಕಾಣುತ್ತವೆ ಪೂತಿಗಂಧ ಎಂದರೆ ಗಂಧಪ್ರಸಾರಿಣೀ ಎಂತ ಭಾ ಪ್ರ ದ ವ್ಯಾಖ್ಯಾನ ಉಂಟು ಆ ಶಬ್ದವು ಗಂಧಕಕ್ಕೂ ಇಂಗುದೀ ವೃಕ್ಷ ಕ್ಕೂ ಬರುತ್ತದಾಗಿ ಶಾಲಿಗ್ರಾಮಷಧತಬ್ದಸಾಗರ ಹೇಳುತ್ತದೆ 16. ಚೂರ್ಣಸ್ನೇಹಾಸವಾಲೇಹಾಃ ಪ್ರಾಯಶಶ್ಚಂದನಾನ್ವಿತಾಃ | * ಚಂದನ' ಎಂಬದಕ್ಕೆ ಕಷಾಯಲೇಪಯೋಃ ಪ್ರಾಯೋ ಯುಜ್ಯತೇ ರಕ್ತಚಂದನಂ || ಅರ್ಥಭೇದ (ಶಾ. 5.) ಚೂರ್ಣ, ಸ್ನೇಹ, ಆಸನ, ಲೇಹ, ಇವುಗಳಲ್ಲಿ ಚಂದನವೆಂಬದು ಹೆಚ್ಚಾಗಿ ಶ್ರೀಗಂಧ; ಕಷಾಯ ಲೇಪಗಳಿಗೆ ಚಂದನ ಎಂಬಲ್ಲಿ ಹೆಚ್ಚಾಗಿ ರಕ್ತಚಂದನವು ಕೂಡಿಸಲ್ಪಡುತ್ತದೆ. (ಶಾ, 5 17. ಕ್ಲಾಧೆ ಕ್ಷಿಪೇತೃತಾಮಂಶೈಶ್ಚತುರ್ಧಾಷ್ಟಮಷೋಡಶೈಃ | ಕಷಾಯಕ್ಕೆ ವಾತಪಿತ್ತ ಕಫಾತಂಕೇ ವಿಪರೀತಂ ಮಧು ಸ್ಮೃತಂ || (ಶಾ. 41.) ಪ್ರಕ್ಷೇಪಗಳು ಕಷಾಯಕ್ಕೆ ಸಕ್ಕರೆಯನ್ನು ಮೇಲ್ನುಡಿಯಾಗಿ ಹಾಕುವದಾದರೆ, ವಾತದೋಷದಲ್ಲಿ (ಔಷಧದ) ಕಾಲಂಶ, ಪಿತ್ತದೋಷದಲ್ಲಿ ಎಂಟನೆ ಒಂದಂಶ, ಕಫದ ದೋಷದಲ್ಲಿ ಹದಿನಾರನೆ ಒಂದು ಅಂಶ ಪ್ರಕಾರ, ಕೂಡಿಸತಕ್ಕದ್ದು. ಜೇನು ಮೇಲ್ನುಡಿಯಾದರೆ, ವಾತದಲ್ಲಿ ಹದಿನಾ ರನೆ ಒಂದು ಅಂಶ, ಪಿತ್ತದಲ್ಲಿ ಎಂಟನೆ ಒಂದು ಅಂಶ, ಕಫದಲ್ಲಿ ಕಾಲಂಶ ಪ್ರಕಾರ ಕೂಡಿಸ ಬೇಕಾದ್ದಾಗಿರುತ್ತದೆ. ಜೀರಕಂ ಗುಗ್ಗು ಲುಂ ಕ್ಷಾರಂ ಲವಣಂ ಚ ಶಿಲಾಜತು | ಹಿಂಗು ಕಟುಕಂ ಚೈವ ಸ್ವಾಧೇ ಶಾಣೋನ್ನಿತಂ ಕ್ಷಿಪೇತ್ ||