ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

e XX

                  - 393 -
                                               ಧಕ್ಕೆ ಹದಿನಾರು ಪಾಲು ನೀರು ಇಟ್ಟು, ಕಾಲಂಶಕ್ಕೆ ಬತ್ತಿಸಿ, ಶೋಧಿಸಿದ ನಾಲ್ಕು ಪಲವನ್ನು ಅಗ್ನಿ ಚುರುಕುಳ್ಳ ಮತ್ತು ದೊಡ್ಡ ಶರೀರವುಳ್ಳ ರೋಗಿಗೆ ಕೊಡತಕ್ಕದ್ದು, ಇತರರಿಗೆ ಅರ್ಧ ವನ್ನು ಉಳಿಸಿ ಅರ್ಧ ಕುಡುತೆಯನ್ನೇ ಕೊಡಬೇಕು. ಕಷಾಯಕ್ಕೆ ಅಸಹ್ಯ ಪಡುವ ರೋಗಿಗೆ ಕಷಾಯವನ್ನು ಅಷ್ಟಾವಶೇಷವಾಗಿ ಬತ್ತಿಸಿ, ಅರ್ಧ ಕುಡುತೆಯನ್ನು ವೃದ್ಧ ವೈದ್ಯರು, ಪಾರಂಪ ರ್ಯೋಪದೇಶ ಪ್ರಕಾರ ಕೊಡುತ್ತಾರೆ.

13. ನವಾನ್ಯೇವ ಹಿ ಯೋಜ್ಯಾನಿ ದ್ರವ್ಯಾಣ್ಯಖಿಲಕರ್ಮಸು | ದ್ರವ್ಯಗಳಲ್ಲಿ ಯಾವದು ವಿನಾ ವಿಡಂಗಕೃಷ್ಣಾಭ್ಯಾಂ ಗುಡಧಾನ್ಯಾಜ್ಯಮಾಕ್ಷಿಕೈಃ || ಹಳೇದು ಯಾವದು ಹೊಸ ತು ಆಗಬೇಕಂಬದು

                                (ಭಾ ಪ್ರ. 69.)                                    ಎಲ್ಲಾ ಕೆಲಸಗಳಲ್ಲಿಯೂ ಔಷಧಗಳು ಹೊಸದಾದವುಗಳೇ ಉಪಯೋಗಿಸಲ್ಪಡಬೇಕು. ಆದರೆ ವಾಯುವಿಳಂಗ, ಹಿಪ್ಪಲಿ, ಬೆಲ್ಲ, ಆಹಾರಧಾನ್ಯ, ತುಪ್ಪ, ಮತ್ತು ಜೇನು ಹೊಸದಾ ಗಿರಬಾರದು.

ಪುರಾಣಂ ತು ಪ್ರಶಸ್ತಂ ಸ್ಯಾತ್ತಾಂಬೂಲಂ ಕಾಂಜಿಕಂ ತಧಾ ||

                               (ಭಾ. ಪ್ರ. 69.)                               ವೀಳ್ಯದೆಲೆಯು ಹಳೇ ಬಳ್ಳಿದು ಪ್ರಶಸ್ತ, ಹಾಗೆಯೇ ಹುಳಿಗಂಜಿ (ಅನ್ನ ಬಸಿದ ನೀರು) ಹಳೇದು ಒಳ್ಳೇದು.

ಪುರಾಣಾಃ ಸ್ಯುರ್ಗುಣೈರ್ಯುಕ್ತಾ ಆಸವಾ ಧಾತವೋ ರಸಾಃ | (ನಿ. ರ.) ಆಸವಗಳು, ಲೋಹಗಳು ಮತ್ತು (ಪಾದರಸಾದಿ) ರಸಗಳು ಹಳೇಯವಾದರೆ, ಅವುಗ ಳಲ್ಲಿ ಗುಣಗಳು ಹೆಚ್ಚಿರುವವು.

14. ಶುಷ್ಕಂ ನವೀನಂ ಯದ್ದ್ರ ವ್ಯಂ ಯೋಜ್ಯಂ ಸಕಲಕರ್ಮಸು | ದ್ರವ್ಯಗಳು ಹಸಿಯಾದಲ್ಲಿ ಆದ್ರರ್ದಂ ಚ ದ್ವಿಗುಣಂ ಯುಂಜ್ಯಾತ್ ಏಷ ಸರ್ವತ್ರ ನಿಶ್ಚಯಃ || ದ್ವಿಗುಣ ಮಾಡಬೇಕಾದ್ದು

                                      (ಶಾ. 4.)                                              ಎಲ್ಲಾ ಕೆಲಸಗಳಲ್ಲಿ ಹೊಸತಾಗಿಯೂ ಒಣಗಿದ್ದಾಗಿಯೂ ಇರುವ ಔಷಧವು ಉಪ ಯೋಗಿಸಲ್ಪಡಬೇಕು, ಅದು ಒಣಗದೆ ಹಸಿಯಾಗಿದ್ದರೆ, ಅದನ್ನು ತೂಕದಲ್ಲಿ ಎರಡು ಪಾಲಷ್ಟು ಕೂಡಿಸಿಕೊಳ್ಳಬೇಕು. ಇದು ಸರ್ವತ್ರ ನಿಶ್ಚಯ.

15. ಗುಡೂಚೀ ಕುಟಜೋ ವಾಸಾ ಕೂಷ್ಮಾಂಡಶ್ವ ಶತಾವರೀ || ಅಶ್ವಗಂಧಾ ಸಹಚರೀ ಶತಪುಷ್ಪಾ ಪ್ರಸಾರಿಣೀ || ಹಸಿಯಾಗಿಯೇ ಉಪ ಪ್ರಯೋಕ್ತವ್ಯಾ ಸದೈವಾದ್ರಾ ದ್ವಿಗುಣಾ ನೈವ ಕಾರಯೇತ್ | ಯೋಗಿಸಬೇಕಾದ ಯೋಗಿಸಬೇಕಾದ ಆಿ

ದ್ರವ್ಯಗಳು
                                     (ಶಾ. 4.)
                                            50