ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



                            ಉಪೋದ್ಘಾತ                   XIIV11
                                             

'ಕಾರ್ಯಂ ಕರ್ಮ ಸಮಾಚರ' ಅಂದರೆ 'ಮಾಡಬೇಕಾದ ಕೆಲಸವನ್ನು ಶ್ರಮದ ಅಧವಾ ಫಲದ ವಿಚಾರವಿಲ್ಲದೆ ಮಾಡು' ಎಂಬ ಸೂತ್ರವನ್ನು ಮರೆತು, ಆಲಸ್ಯಾತ್ಮಕ ಕಲಿದೇವತೆಯ ಪ್ರೇರಣೆಯಿಂದ ಕ್ಷಣಿಕ ಲಕ್ಷ್ಮೀಯ ಆರಾಧನದಲ್ಲಿ ಪ್ರೀತಿ ಪಡುವದಾಯಿತು. ಇಂಧಾ ಸಂದರ್ಭದಲ್ಲಿ ಜನರು ಆಸ್ಪತ್ರಿಗಳಿಗೆ ಹೋಗದೆ, ಪಂಡಿತರನ್ನು ಹುಡುಕಿ, ಅವರು ಕೇಳಿದಷ್ಟು ದುಡ್ಡು ಕೊಟ್ಟು, ಊರೆಲ್ಲ ಸುತ್ತಿ ಔಷಧಗಳನ್ನು ಸಂಗ್ರಹಿಸಿಕೊಂಡು. ಕಷಾಯ,ತೈಲ,ಗಂಜಿ,ಮುಂತಾದವುಗಳನ್ನು ಮಾಡುವ ಶ್ರಮವನ್ನೂ ನಷ್ಟವನ್ನೂ ಯಾಕೆ ಪಡದಾರು? ಸಹಜ ವಾಗಿ ಸಾಧ್ಯವಿರುವಲ್ಲೆಲ್ಲಾ ಜನರು ಪ್ರಥಮತಃ ಆಸ್ಪತ್ರಿಗಳಿಗೆನೇ ಹೋಗುವದಾಗಿ, ಆಯುರ್ವೇದದ ಮೌಲ್ಯ ಇಳಿಯುತ್ತಾ ಬರುವದಾಯಿತು

    10.  ಸಾಮಾನ್ಯ ಜನರಲ್ಲಿ ಆಯುರ್ವೇದದ ಪರಿಚಯ ಕಡಿಮೆಯಾದ ಹಾಗೆ, ಆಯುರ್ವೇದೀಯ ಚಿಕಿತ್ಸಕರ ಪಾಂಡಿತ್ಯವು ಹೀನವಾಗುತ್ತಾ ಬಂತು 'ವಿದ್ಯಾನೇವ ಬಾನಾತಿ ವಿದ್ವಜ್ಜನಪರಿಶ್ರಮಂ' ಯಾವದಾದರೊಂದು ವಿದ್ಯೆಯು ಅಭಿವೃದ್ಧಿಯಾಗುವದಕ್ಕೆ ಆ ವಿದ್ಯೆಯನ್ನು ಸಂಪಾದಿಸಿಕೊಂಡವನ ಪಾಂಡಿತ್ಯವನ್ನು ಪೋಷಕರು ಪರೀಕ್ಷಿಸಿ, ತಾರತಮ್ಯದಿಂದ ಅವನನ್ನು ಸಂತೋಷಪಡಿಸಿ, ಪ್ರೋತ್ಸಾಹಿಸುವದು ಅಗತ್ಯ. ವೈದಿಕನು ವೇದವನ್ನು ಹೇಳುತ್ತಾನೋ, ವಾಯುಸ್ತುತಿಯನ್ನು ಹೇಳುತ್ತಾನೋ ಎಂಬದನ್ನು ಗೊತ್ತುಮಾಡುವಷ್ಟು ತಿಳಿವಳಿಕೆ ಗೃಹಸ್ಥರಿಗೆ ಇಲ್ಲದಿದ್ದರೆ,ವೈದಿಕರು ಸಿವಣತ್ವಕ್ಕೆ ಯಾಕೆ ಶ್ರಮ ಪಟ್ಟಾರು? ಫಿಟಿಲಿನಲ್ಲಿ ಚಾಲ್ ಬಾರಿಸುವ ಭಿಕ್ಷುಕನಿಗೂ, ಬಹುಕಾಲ ಶ್ರಮಪಟ್ಟು ಶಾಸ್ತ್ರರೀತ್ಯಾ ಕ್ರಮೇಣ ಕಲಿತ ಇಟೆಲ್ ವಿದ್ವಾಂಸನಿಗೂ ಏಕರೀತಿಯಾಗಿ ಸನ್ಮಾನ ಸಿಕ್ಕುವದಾದರೆ, ಭರತಶಾಸ್ತ್ರದ ಕುಶಲತೆಯು ಅಭಿವೃದ್ಧಿಯಾಗುವದಕ್ಕೆ ಪ್ರೋತ್ಸಾಹ ಎಲ್ಲಿಂದ ಚರಕಾಚಾರ್ಯನಿಂದ ಯಮನ ಅನುಚರರೆಂತ ವರ್ಣಿಸಲ್ಪಟ್ಟ ವ್ಯದ್ವೇಷಧಾರಿಗಳು ಅವನ ಕಾಲದಲ್ಲಿಯೇ ಬಹಳವಾಗಿ ಇದ್ದರೆಂದ ಮೇಲೆ, ಅರಸುಗಳ ಸಹಾಯವಿಲ್ಲದ ಈ ಕಾಲದಲ್ಲಿ ಬಹುಶಃ ಅಂಧವರೇ ಇರುತ್ತಾರೆಂದರೆ ಆಶ್ಚರ್ಯವೇನು? ಉದರಪೋಷಣಕ್ಕಲ್ಲದೆ ವೈದ್ಯ ನಡಿಸುವ ಪಂಡಿತರು ಈ ಕಾಲದಲ್ಲಿ ಬಹಳ ಅಪರೂಪ ಎಂಬದು ಸರ್ವರಿಗೂ ವಿದಿತವಾದ್ದೇ ಉದರಪೋಷಣದ ಉದ್ದೇಶವನ್ನು ಪೂರೈಸುವದಕ್ಕೆ ಹೆಚ್ಚಿನ ಪಾಂಡಿತ್ಯವು ಅವಶ್ಯಕವಲ್ಲ ಸಾಧಾರಣವಾಗಿ ರೋಗಿಗಳು ಕೇಳುವ ಪ್ರಶ್ನೆಗಳು ಮೂರೇ 1 ತಮ್ಮ ರೋಗ ಯಾವದು? 2.ಆ ರೋಗಕ್ಕೆ ಮದ್ದೇನು? ಮತ್ತು 3 ಆ ಮದ್ದಿಗೆ ಎಷ್ಟು ಖರ್ಚು ಬಿದ್ದೀತು? ಈಗ, ರೋಗಗಳ ಪ್ರಧಾನ ವರ್ಗಗಳು ಒಂದು ನೂರ ಹದಿಮೂರೇ ಅವುಗಳೊಳಗೊಂದರ ಹೆಸರನ್ನು ರೋಗಿಗೆ ಸಮಾಧಾನವಾಗುವಂತೆ ಅವನ ಸಂಕಷ್ಟಕ್ಕೆ ಇಡುವದರಲ್ಲಿ ಪ್ರಯಾಸವಿಲ್ಲ ಜ್ವರ, ಅತಿಸಾರ, ಜ್ವರಾತಿಸಾರ, ಮೂಲವ್ಯಾಧಿ, ವಾಂತಿ, ಬಾಯಾರಿಕೆ, ಬಿಕ್ಕಟ್ಟು, ಉದರವ್ಯಾಧಿ, ಅರಸಿನ ಮುಂಡಿಗೆ, ಶೂಲೆ, ಮೇಹ, ಮೂತ್ರಕೃಚ್ಚ್ರ, ಅಶ್ಮರೀ, ಉಬ್ಬಸ, ಕೆಮ್ಮು, ಪಾಂಡು, ಕ್ಷಯ, ನೇತ್ರರೋಗ, ಕರ್ಣರೋಗ, ನಾಸಾರೋಗ, ಮುಖರೋಗ ಮುಂತಾದ ಬಹಳ ವ್ಯಾಧಿಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದ್ದವೇ ಔಷಧಗಳನ್ನು ತಯಾರಿಸಿ ವಿಕ್ರಯಿಸುವ ಪ್ರಸಿದ್ದ ಆಯುರ್ವೇದೀಯ ವೈದ್ಯಾಲಯಗಳು ಈಗ ಅನೇಕ ಇವೆ. ಆ ವೈದ್ಯಾಲಯಗಳಲ್ಲಿ ವಿಕ್ರಿತವಾಗುವ ಔಷಧಗಳ ಪಟ್ಟಿಗಳೊಂದಿಗೆ ಅನೇಕ ರೋಗಗಳ ಕಲವು ಲಕ್ಷಣಗಳು ಮತ್ತು ಆ ರೋಗಗಳನ್ನು ತಮ್ಮಲ್ಲಿರುವ ಯಾವ ಔಷಧಗಳು ವಾಸಿಮಾಡುತ್ತವೆ ಎಂಬ ವಿವರಗಳು