ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

XLV111 ಉಪೋದ್ಘಾತ

ಪ್ರಕಟವಾಗುತ್ತಾ ಇವೆ ಆ ಔಷಧಗಳೊಳಗೆ ಒಂದರನಂತರ ಒಂದನ್ನು ರೋಗಿಗಳಿಗೆ ಕೊಟ್ಟು ನೋಡುವದರಲ್ಲಿಯೇ ಈಗಿನ ಸಾಮಾನ್ಯ ವೈದ್ಯದ ಸಮಾಪ್ತಿಯಾಗಿರುತ್ತದೆ. ಈ ಕ್ರಮದಿಂದ ಅನೇಕರು ಪ್ರಯೋಜನವನ್ನು ಪಡೆಯುವದುಂಟಾದರೂ, ಅಂಧಾ ಚಿಕಿತ್ಸಕರಿ ಗೆಲ್ಲಾ ಆಯುರ್ವೇದಪಂಡಿತರೆನ್ನುವದು ಸಮರ್ಪಕವಲ್ಲ

  11. ಹೀಗೆ  ನಮ್ಮ  ಜನರಲ್ಲಿ  ಆಯುರ್ವೇದಪರಿಜ್ಞಾನವು  ನಷ್ಟವಾಗುತ್ತಾ  ಬಂದದ್ದೇ

ಹಿಂದೆ ಪ್ರಸ್ತಾಪಿಸಿದ ಅತ್ಯಧಿಕ ಬಾಲ್ಯಮರಣಗಳಿಗೆ ಮುಖ್ಯ ಕಾರಣವಾಗಿರುತ್ತದೆ. ಒಂದು ಹೆಂಗಸು ಬಸುರ ಎಂಬ ಅನುಮಾನ ಹುಟ್ಟಿದೊಡನೆ ದ್ರವ್ಯಗುಣಪರಿಜ್ಞಾನವಿಲ್ಲದೆ ಮತ್ತು ಪರಿ ಮಾಣಕ್ಕೆ ಲಕ್ಷ್ಯವಿಡದೆ ಯಾವ ಗ್ರಂಧಗಳಲ್ಲಿಯೂ ಹೇಳಲ್ಪಡದ ಸ್ವರಸಾದಿ ಔಷಧಗಳನ್ನು ಕೂಡಿಸಿ, ತುಪ್ಪವನ್ನ ತಯಾರಿಸಿಕೊಡುತ್ತಾರೆ, ಮತ್ತು ಗರ್ಭಿಣಿಯರ ಬಯಕೆಗಳನ್ನು ಪೂರೈಸದೆ ಬಿಡಬಾರದೆಂಬದರಿಂದ ಅವರ ಇಚ್ಛಾನುಸಾರ, ಬೇಡಿಕಾಡಿಯಾದರೂ, ಭಕ್ಷ್ಯ- ಭೋಜ್ಯ-ಪಾನಾದಿಗಳನ್ನು ಒದಗಿಸಿಕೊಡುತ್ತಾರೆ ಗೀತೆಯಲ್ಲಿ ತಾಮಸ ಜನಪ್ರಿಯವಾಗಿ ಉದಾಹರಿಸಲ್ಪಟ್ಟ 'ಕಟ್ಟಮ್ಲಲವಣಾತ್ಯುಷ್ಣತೀಕ್ಚರೂಕ್ಷವುದಾಹೀನಃ' ಎಂಬ ವರ್ಗಗಳ ಆಹಾ ರಾದಿಗಳೇ ಸಾಮಾನ್ಯವಾಗಿ ನಮ್ಮ ಸ್ತ್ರೀಯರಿಗೆ ಪ್ರಿಯವಾದ್ದರಿಂದ, ಅಂಧಾಹಾರಾದಿಗಳನ್ನು ಧಾರಾಳವಾಗಿ ಅವರು ಸೇವಿಸುವದಾಯಿತು. ಈ ಸಂಪ್ರದಾಯದ ದೆಸೆಯಿಂದ ಆ ಗರ್ಭಿಣಿ ಯರು ಇನ್ನಷ್ಟು ಬಲಹೀನರಾಗಿ, ಅವರಲ್ಲಿ ಅನೇಕರು ಹೆರಲಾರದೆ ಸಾಯುತ್ತಾರೆ, ಅಥವಾ ಕೂಸು ಹೊಟ್ಟೆಯಲ್ಲಿಯೇ ಮೃತವಾಗುತ್ತದೆ, ಅಧವಾ ಜನಿಸಿದ ಶಿಶುಗಳು ಸರಿಯಾದ ಬೆಳಿಕೆ ಯಿಲ್ಲದೆ ನಾನಾ ಉಪದ್ರವಗಳಿಗೊಳಗಾಗಿ ಬೇಗನೇ ಸಾಯುತ್ತವೆ ಹೆಂಗಸು ಅಶಕ್ತಳಾಗಿ ಹೆರುವ ಪ್ರಯಾಸವನ್ನು ಸಹಿಸಲಾರದೆ, ಅಧವಾ ಅತಿಯಾದ ರಕ್ತಸ್ರಾವದಿಂದ ಮೂರ್ಛ ಹೋಗುವ ಲಕ್ಷಣ ಕಂಡ ಕೂಡಲೇ, ಅವಳಿಗೆ ಬಾಣಂತಿನಂಜು ಉಂಟಾಯಿತೆಂತ ಭಾವಿಸಿ,

    ಹೊಟ್ಟೆಗೆ  ಹಾಲು  ಮುಂತಾದ  ಸಂಶಮನಕರವಾದ ದ್ರವ್ಯಗಳನ್ನು  ಕೊಟ್ಟು  ಉಪಚಾರ
    ಮಾಡುವದಕ್ಕೆ ಒದಲಾಗಿ, ಶುಂಠೀರಸದಲ್ಲಿಯೋ, ಬೆಳ್ಳುಳ್ಳಿರಸದಲ್ಲಿಯೋ ಸನ್ನಿಪಾತಕ್ಕೆ ಉಕ್ತ
    ವಾದ ಗೋರೋಜನಾದಿ ಮಾತ್ರೆಗಳನ್ನು  ಕೊಡುವದು, ಕಣ್ಣುಗಳಿಗೆ  ತೀಕ್ಷ್ಣವಾದ ಅಂಜನ
    ಗಳನ್ನು ಹಚ್ಚುವದು, ಮಲಗದ ಹಾಗೆ ಜುಟ್ಟಿಗೆ ಹಗ್ಗ ಹಾಕಿ ಮೇಲೆ ಕಟ್ಟಿಯೋ, ಹತ್ತಿರದವರು
    ಹಿಡದೋ, ಕೂತುಕೊಳ್ಳಿಸುವದು ಮುಂತಾದ  ಅನೇಕ  ವಿಚಾರಹೀನವಾದ ಮತ್ತು  ಕ್ರೂರ
    ವಾದ ಅವಚಾರಗಳನ್ನು ಉಪಚಾರವೆಂಬ ಹೆಸರಿನಿಂದ ಮಾಡುತ್ತಾರೆ. ಈ ಅಪಚಾರಗಳಿಂದ
    ಅಂಧಾ ಯಾವ ಸ್ತ್ರೀಯಾದರೂ ಸಾಯದೆ ಉಳಿದರೆ, ಅವಳು ಭಾಗ್ಯವಂತಳೆನ್ನಬೇಕು. ಇದ
    ಲ್ಲದೆ ಬಾಣಂತಿಗೆ ಹಾಲು ಮುಂತಾದ  ತಂಪಾದ  ಪದಾರ್ಥಗಳು  ಯಾವಾಗಲೂ  ಬಹಳ
    ದೋಷಕರ ಎಂಬ ಮಧ್ಯಾಜ್ಞಾನವು ಇನ್ನೂ ಹೋಗದೆ ಇರುವದರಿಂದ  ಬಹಳ  ಅನರ್ಧಗಳು     
    ಉಂಟಾಗುತ್ತವೆ. ಜನಿಸಿದ ಶಿಶುವು, ಅದರ ಕಂರದ ಕಫವನ್ನು ತೆಗೆಯದರಿಂದಲೋ, ಒರೇ    
    ಬಲಹೀನತೆಯಿಂದಲೋ, ಸರಿಯಾಗಿ ಕೂಗಲಿಲ್ಲ ಎಂದರೆ, ಅಥವಾ  ಅದನ್ನು ಕ್ರಮಪ್ರಕಾರ    
    ಹೊದಿಸದರಿಂದ ತಣ್ಣಗಿನ ಗಾಳಿ ತಾಗಿ ಅದರ ಯಾವ ಅಂಗವಾದರೂ ಸ್ವಲ್ಪ ತಣ್ಣಗೆ ಕಂಡರೆ,
    ಅದಕ್ಕೆ ಶೀತವೇರಿತೆಂತ ಭಾವಿಸಿ, ಅದರ ಶರೀರದ ಅನೇಕ ಕಡೆಗಳಲ್ಲಿ ಕ್ರೂರವಾಗಿ ಸುಟ್ಟಿಡು
    ತ್ತಾರೆ  ಬಾಲವೃದ್ಧರಿಗೆ  ಅಗ್ನಿ -ಕ್ಷಾರ-ವಿರೇಕಗಳು ವಜ್ಯ‌ ಎಂತ   ಆಯುರ್ವೇದದಲ್ಲಿ
    ವಿಶೇಷ ವಿಧಿ ಇರುತ್ತದೆ (ಪು.191ನೋಡಿ).ಚಿಕ್ಕ ಕೂಸುಗಳಿಗೆ ಆಗಿಂದಾಗ್ಗೆ ಖಾರ ಕೊಡ