ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ XLIX

ತಕ್ಕದ್ದೆಂಬ ನಿಯಮವನ್ನು ಕಲ್ಪಿಸಿಕೊಂಡು ಮಾಡುವ ಅನರ್ಥಗಳ ಒಂದು ದುಃಖಕರವಾದ ದೃಷ್ಟಾಂತವನ್ನು ನಮ್ಮ ವಾಚಕರ ತಿಳುವಳಿಕೆಗೆ ತರುವದು ಯುಕ್ತವಾಗಿ ಕಾಣುತ್ತದೆ. ಒಂದು ಕೂಸಿಗೆ ಸ್ವಲ್ಪ ನೆಗಡಿಯಾಗಿದೆ ಎಂಬದರಿಂದ ಒಂದು ಖಾರದ ಕಷಾಯವನ್ನು ಮಾಡಿ,ಅದರ ತಾಯಿಯು ಕೂಸನ್ನು ತನ್ನ ಕಾಲುಗಳ ಮೇಲೆ ಮಲಗಿಸಿ ,ಒಂದು ಸೌಟು ಕಷಾಯವನ್ನು ಅದರ ಬಾಯಿಯೊಳಗೆ ಹೊಯಿದಳು. ಅದರ ಖಾರಸ್ವಭಾವದ ದೆಸೆಯಿಂದ ಶಿಶು ಚೆನ್ನಾಗಿ ಬಾಯಿಯನ್ನು ಕಳೆಯಿತು. ಅದೇ ಸಂದರ್ಭ ಕಷಾಯವನ್ನು ಕುಡಿಸುವದಕ್ಕೆ ಅನುಕೂಲವೆಂತ ಭಾವಿಸಿ, ತಾಯಿಯು ಇನ್ನೊಂದು ಸೌಟು ಕಷಾಯವನ್ನು ಅದರ ಬಾಯಿ ಯೊಳಗೆ ಹಾಕಿದಳು ಅದರಿಂದ ಶ್ವಾಸಕಟ್ಟಿ ಹೋಗಿ ಕೂಸು ಆಗಲೇ ಪ್ರಾಣವನ್ನು ಬಿಟ್ಟಿತು! ಮೊಲೆಯುಣ್ಣುವ ಕೂಸಿನ ತಾಯಿಯು ತಕ್ಕವಾದ ಆಹಾರ-ಪಾನ-ವಿಹಾರಾದಿಗಳ ನಿಯಮ ಗಳನ್ನು ಇಟ್ಟು ಕೊಂಡು, ತನ್ನ ಆರೋಗ್ಯವನ್ನು ಕಾವಾಡಿಕೊಳ್ಳದಿರುವದರಿಂದ,ಮೊಲೆಹಾಲು ಸಾಲದೆಹೋಗಿ ಕೂಸು ಸಂಕಷ್ಟಪಡುವ ಸಂಗತಿಯಲ್ಲಿ ಆ ಕೂಸಿಗೆ ಅತಿಗುರುವಾದ ಅನ್ನ ಪಾನಾದಿಗಳನ್ನು ಕೊಟ್ಟು, ಅಥವಾ ತನ್ನ ಮೊಲೆಹಾಲಿನ ಗುಣವನ್ನು ಕಡಿಸಿಕೊಂಡು, ಆ ಕೂಸಿಗೆ ನಾನಾ ರೋಗಗಳನ್ನುಂಟುಮಾಡುತ್ತಾರೆ. ಬಾಣಂತಿ ಅಂತ ಮಾಡಿಕೊಡು ವದರ ಅನರ್ಧದ ಕುರಿತು ಒಂದು ಸಂಗತಿಯನ್ನು ಹೇಳಿದರೆ ಸಾಕು ಅಂಗಡಿ ಔಷಧಗಳ ಅಡಿಗೆ ಎಂತ 10-20 ಬಗೆ ಓಷಧಗಳನ್ನು ಅಂಗಡಿಯಿಂದ ತರಿಸಿ, ಅವುಗಳ ಸೇರಿಕೆಯಿಂದ ಒಂದು ಗುಡವನ್ನು ಮಾಡಿ ಬಾಣಂತಿಗೆ ಕೊಡುವ ವಾಡಿಕೆ ಉಂಟು ಒಂದೆರಡು ಕಡೆಗೆ ಳಿಂಗ ಆ ಜೀನಸುಗಳ ಪಟ್ಟಿಯನ್ನು ತರಿಸಿ ನೋಡಿ, ಆ ಔಷಧಗಳನ್ನೆಲ್ಲಾ ಎಷ್ಟೆಷ್ಟು ಹಾಕುತ್ತೀರಿ ಎಂತ ಕೇಳಿದ್ದಕ್ಕೆ, ಮೊದಲು ಒಂದೊಂದು ಸೈದು ಪ್ರಕಾರ ತರಿಸುವ ವಾಡಿಕೆಯಾದರೂ, ಈಗ ಜಿನಸುಗಳೆಲ್ಲಾ ಪ್ರಿಯವಾದ್ದರಿಂದ ಒಂದೊಂದು ಮುಕ್ಕಾಲಿನದಂತೆ ತರಿಸುತ್ತೇವ ಎಂಬ ಉತ್ತರ ಸಿಕ್ಕಿತು. ಆ ಪಟ್ಟಿಯಲ್ಲಿ ತೊಲೆಗೆ ಒಂದೆರಡು ರೂಪಾಯಿ ವರೆಗೆ ಕ್ರಯವಿರುವ ಗೋರೋಜನಾದಿಗಳೂ, ಒಂದೆರಡು ಮುಕ್ಕಾಲು ಕ್ರಯದ ಶುಂಠಿಚೀರಕಾದಿಗಳೂ ಸೇರಿರುವಾಗ್ಗೆ, ಸರಾಸರಿ ಒಂದು ಪೈದು ಅಥವಾ ಒಂದು ಮುಕ್ಕಾಲಿನದು ಎಂದರೆ ಆಯಾ ಔಷಧದ ಗುಣದೋಷಗಳ ವಿಚಾರ ಇಲ್ಲವೇ ಇಲ್ಲ ಎಂತ ಸ್ಪಷ್ಟವಾಗುತ್ತದೆ. ಬಾಣಂತಿಯಾಗುವ ದೊಂದು ರೋಗವಲ್ಲ. ಬಾಣಂತಿಯ ಆಯಾಸಪಟ್ಟ ಶರೀರವು ರೋಗಗಳಿಗೆ ಗುರಿಯಾಗ ದಂತೆ ಅವಳನ್ನು ಯುಕ್ತವಾದ ಆಹಾರವಿಹಾರಾದಿ ನಿಯಮಗಳಿಂದ ರಕ್ಷಿಸತಕ್ಕದ್ದೆಂತಲೂ, ಅವಳು ವ್ಯಾಯಾಮ, ಮೈದುನ, ಸಿಟ್ಟು, ಶೀತ ಸೇವನ, ಇವುಗಳನ್ನು ಬಿಟ್ಟಿರಬೇಕೆಂತಲೂ ಹೇಳಲ್ಪಟ್ಟಿದೆ. ಬಾಣಂತಿಗೆ ಯಾವ ರೋಗವುಂಟಾದರೂ ಅದನ್ನು ವಾಸಿಮಾಡುವದರಲ್ಲಿ ಅಧಿಕ ಪ್ರಯಾಸವಿರುತ್ತದೆಂಬದರಿಂದಲೂ ಈ ನಿಯಮಗಳು ಉಕ್ತವಾಗಿವೆ ಸುಶ್ರುತನ ಉಪ ದೇಶ ಪ್ರಕಾರ, ಬಾಣಂತಿಗೆ ಕಡೀರುಬೇರನ್ನು ಕೂಡಿಸಿ ಕಾಯಿಸಿದ ತೈಲವನ್ನು ಹಚ್ಚಿ, ವಾತ ಹರವಾದ ಔಷಧಗಳನ್ನು ಹಾಕಿ ಕಾಯಿಸಿದ ಬಿಸಿನೀರಿನಿಂದ ಸ್ನಾನ ಮಾಡಿಸಬೇಕು, ದೋಷ ಕರವಾದ ರಕ್ತ ಮುಂತಾದ್ದು ಹೊರಗೆ ಹೋಗಲಿಲ್ಲ ಎಂತಾದರೆ, ಬೆಲ್ಲದ ಕಷಾಯವನ್ನು, ಹಿಪ್ಪಲಿ, ಹಿಪ್ಪಲೀಮೂಲ, ಗಜಹಿಪ್ಪಲಿ, ಚಿತ್ರಮೂಲ, ಒಣಶುಂಠಿ, ಇವುಗಳ ಚೂರ್ಣವನ್ನು ಕೂಡಿಸಿಕೊಂಡು, 2-3 ದಿನ ಕುಡಿಯ ಕೊಡಬೇಕು, ದೇಹ ಶುದ್ಧವಾದ ಮೇಲೆ ಮೂರು ದಿನ ವಿದಾರಿಗಂಧಾದಿ ವರ್ಗದ ಔಷಧಗಳನ್ನು ಸೇರಿಸಿ ಮಾಡಿದ ಗಂಜಿಯೊಂದಿಗೆ ಹಾಲನ್ನಾ