ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 403- ಆ XX ಸ್ನೇಹಪಾಕದ ಲಕ್ಷಣಗಳು / ಯದಾ ಫೇನೋದ್ಗ ಮಸ್ತೈಲೇ ಫೇನಶಾಂತಿ‍ಶ್ಚ್ ಸರ್ಪಷಿ |

ವರ್ಣಗಂಧರಸೋತ್ಪತ್ತಿಃ ಸ್ನೇಹಃ ಸಿದ್ದೋ ಭವೇತ್ರದಾ || (ಭಾ, ಪ್ರ 197.)

ಸ್ನೇಹದ ಕಲ್ಕವನ್ನು ಬೆರಳುಗಳಿಂದ ಉರುಳಿಸಿದಾಗ ನೆಣೆ ಬರುವದು, ಬೆಂಕಿಯಲ್ಲಿ ಹಾಕಿದರೆ ಶಬ್ದ ಹುಟ್ಟದಿರುವದು, ತೈಲವಾದರೆ ಅದರಲ್ಲಿ (ಬಿಳೇ) ನೊರೆ ಬರುವದು, ತುಪ್ಪ ವಾದರೆ ನೊರೆ ಶಾಂತವಾಗುವದು, ಮತ್ತು ವರ್ಣ, ಪರಿಮಳ ಮತ್ತು ರಸ ಉತ್ಪನ್ನವಾಗು ವದು, ಇವು ಸ್ನೇಹಪಾಕಸಿದ್ಧವಾದ ಲಕ್ಷಣಗಳು.

ಷರಾ ಮಡ್ಡನ್ನು ಬೆಂಕಿಕೆಂಡದಲ್ಲಿ ಹಾಕಿದಾಗ ಏನೂ ಶಬ್ದ ಹುಟ್ಟದಿರುವ ವರೆಗೆ ಒಲೆಯ ಮೇಲಿರಿಸಿದರೆ, ಕಾದದ್ದು ಹೆಚ್ಚಾಗುವ ಸಂಭವವಿದೆಯಾದ್ದರಿಂದ , ಸ್ವಲ್ಪ ಮೊದಲೇ ಒಲೆಯಿಂದ ಕಂಚನ್ನು ಕೆಳಗೆ ಇಳಿಸಿ, ಮಗಚುತ್ತಾ ಇರಬೇಕು

 44 (a) ಸ್ನೇಹಪಾಕಸ್ತ್ರಿದಾ ಪ್ರೋಕ್ತೋ ಮೃದುರ್ಮಧ್ಯಃ ಖರಸ್ತಧಾ |

ಈಷತ್ಸಕಲ್ಕಸ್ತು ಸ್ನೇಹಪಾಕೋ ಮೃದುರ್ಭವೇತ್ || ಮೂರು ವಿಧವಾದ ಪಾಕ ಮಧ್ಯಪಾಕಸ್ಯ ಸಿದ್ದಿಶ್ಚ ಕಲ್ಕೇ ನೀರಸಕೋಮಲೇ | ಈಷತ್ಕರಿನಕಲ್ಕಶ್ಚ ಸ್ನೇಹಪಾಕೋ ಭವೇತ್ಖರ‌ಃ || ತದೂರ್ಧ್ವಂ ದಗ್ಗಪ: ಕಃ ಸ್ಯಾದ್ದಾ ಹಕೃನ್ನಿಷ್ಟ್ರ ಯೋಜನಃ | ಆಮಪಾಕಶ್ಚ ನಿರ್ವೀರ್ಯೋ ವಹ್ನಮಾಂದ್ಯಕರೋ ಗುರುಃ ||

                                            (ಭಾ. ಪ್ರ. 147.) 

ಸ್ನೇಹಪಾಕದಲ್ಲಿ ಮೃದು, ಮಧ್ಯ, ಖರ ಎಂಬ ಮೂರು ವಿಧಗಳಿವೆ. ಕಲ್ಕದಲ್ಲಿ ಅಲ್ಪ ವಾಗಿ ರಸ ಇರುವಾಗ ಇಳಿಸಿದ ಸ್ನೇಹದ ಪಾಕವು ಮೃದುಪಾಕ; ರಸ ಪೂರಾ ಬತ್ತಿ ಕಲ್ಕ ಮೆತ್ತಗೆ ಇರುವಾಗ ತೆಗೆದದ್ದು ಮಧ್ಯಪಾಕ, ಕಲ್ಕವು ಸ್ವಲ್ಪ ಗಟ್ಟಿಯಾದಾಗ್ಗಿನ ಸ್ನೇಹ ಪಾಕವು ಖರಪಾಕ, ಅದಕ್ಕೂ ಮೇಲೆ ಕಾಯಿಸಿದ್ದು ದಗ್ಧ ಪಾಕ (ಸುಟ್ಟದ್ದು), ಅಂಧಾ ದಗ್ಥ ಪಾಕವು ಉರಿಯುಂಟುಮಾಡತಕ್ಕದ್ದು ಮತ್ತು ನಿಷ್ಟ್ರಯೋಜನವಾದದ್ದು. (ಮೃದುಪಾಕ ಕ್ಕೂ ಮೊದಲೇ ಇಳಿಸಿದ) ಆಮ (ಹಸಿ) ಪಾಕವು ಗುರು, ವೀರ್ಯವಿಲ್ಲದ್ದು ಮತ್ತು ಅಗ್ನಿ) ಮಾಂದ್ಯವನ್ನುಂಟುಮಾಡತಕ್ಕಂಧಾದ್ದು.

( b) ಖರೋ ಮಣಿರವಃ ಕಾಂಸ್ಯೇ ಮೃದು: ಪಿಚುನಿವರ್ತಕಃ | ಚಿಕ್ಕಣಃ ಸ್ಪರ್ಶಮಾತ್ರೇಣ ನಿಮ್ಮಭಾವಂ ಪ್ರಪದ್ಯತೇ |

     ‌                                   (ವೈ ಸಾ ಸಂ. 119 ) 

ಖರಪಾಕಕ್ಕೆ ಕಿಟ್ಟವಂ ತೆಗೆದು ಉಂಡೆಮಾಡಿ ಕಂಚಿನ ತಳಿಗೆ ಮೇಲೆ ಹೊಡೆಯಲು, ಕಲ್ಲ ಹರಳುಗಳಿಂದ ಹೊಡೆದ ಹಾಗೆ ಧ್ವನಿಯಾಗುವದು. ಮೃದು ಪಾಕಕ್ಕೆ, ಕಿಟ್ಟವಂ ತೆಗೆದು ನೋಡಲು, ಹತ್ತಿಯಂತೆ ಮೆತ್ತಗಿರುವದು. ಚಿಕ್ಕಣಪಾಕಕ್ಕೆ ಕಿಟ್ಟವಂ ತೆಗೆದು, ಬೆರಳಿಂದ ಮುಟ್ಟಿದ ಮಾತ್ರದಿಂದ ತಗ್ಗುವದು, ಅಂದರೆ ಹೊಂಡ ಬೀಳುವದು

ಷರಾ ಮೇಲಿನ ವಿವರಣದಲ್ಲಿ 'ಚಿಕ್ಕಣ' ಎಂಬದು ಮಧ್ಯ ಪಾಕವಾಗಿರುತ್ತದೆ 'ಚಿಕ್ಕಣ' ಎಂದರೆ ಮೇಣ ದೊರಗು ಹುಟ್ಟಿದ ಮೇಣವೇ 'ಖರ'

                                                                   51 *