ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೪೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅxx. -406-

  ಕಾಯಿಸಿದ ತೈಲದ ವೀರ್ಯವು ಆರು ತಿಂಗಳನಂತರ ಹೀನವಾಗುತ್ತದೆ; ಆದರೆ ಕಾಯಿ ಸಿದ ತುಪ್ಪ ಮತ್ತು ಗುಡಗಳ ವೀರ್ಯವು ಒಂದು ವರ್ಷದನಂತರ ಹೀನವಾಗುತ್ತದೆ. ಷರಾ ಲೇಹಗುಡಾದಿಗಳ ಪಾಕವು ಬಹಳ ಎಳೇದಾದರೆ ಔಷಧವು ಬೇಗನೇ ಕೆಡುವದು 
  48. ಘೃತಂ ತೈಲಂ ಚ ಪಾನೀಯಂ ಕಷಾಯಂ ವ್ಯಂಜನಾದಿಕಂ | ತಣ್ಣಗಾದ ಘೃತಾದಿ ಪಕ್ತ್ವಾ ಶೀತೀಕೃತಂ ತಪ್ತಂ ತತ್ಸರ್ವಂ ಸ್ಯಾದ್ವಿಷೋಪಮಂ| 

ಗಳನ್ನು ಪುನಃ ಬಿಸಿ ಮಾಡುವದರು ನಿಷೇಧ. (ನಿ.ರ.)

  ತುಪ್ಪ, ತೈಲ, ಕುಡಿಯುವ ನೀರು, ಕಷಾಯ, ಮತ್ತು ಮೇಲೋಗರ ಮುಂತಾದವುಗಳು ಪಾಕಮಾಡಲ್ಪಟ್ಟು ತಣಿದ ಮೇಲೆ, ಪುನಃ ಬಿಸಿಮಾಡಲ್ಪಟ್ಟರೆ, ಅವೆಲ್ಲಾ ವಿಷಕ್ಕೆ ಸಮಾನ ವಾಗುವವು.

ಅಸವಾರಿಷ್ಟಗಳ ಕ್ರಮ

49 (a) ದ್ರವೇಷು ಚಿರಕಾಲಸ್ಥಂ ದ್ರವ್ಯಂ ಯತ್ಸಂಧಿತಂ ಭವೇತ್|
      ಆಸವಾರಿಷ್ಟಭೇದೈಸ್ತು ಪ್ರೋಚ್ಯತೇ ಭೇಷಚೋಚಿತಂ ||
       ಯದಪಕ್ವೌಷಧಾಂಬುಭ್ಯಾಂ ಸಿದ್ಧಂ ಮದ್ಯಂ ಸ ಆಸವಃ|
       ಅರಿಷ್ಟಃ ಕ್ವಾಧಸಾಧ್ಯಃ ಸ್ಯಾತ್ ತಯೋರ್ಮಾನಂ                                 ಪಲೋನ್ಮಿತಂ|| (ಶಾ.99.) 
   ಔಷಧದ್ರವ್ಯವನ್ನು ದ್ರವಪದಾರ್ಧಗಳಲ್ಲಿ  ಹೆಚ್ಚು ಕಾಲ ಇಟ್ಟು, ಹುಳಿಸಿ, ಮಾಡಿದ ಆಸವ ಮತ್ತು ಅರಿಷ್ಟ ಎಂಬ ಎರಡು ವಿಧವಾದ ಮದ್ಯವು ಔಷಧಕ್ಕೆ ಉಚಿತವಾದದ್ದಾಗಿ ಹೇಳಲ್ಪಡು ತ್ತದೆ. ಅವುಗಳಲ್ಲಿ ಔಷಧವನ್ನು ಪಕ್ವಮಾಡದೆ ತಣ್ಣೀರು ಕೂಡಿಸಿ ಮಾಡಿದ ಮದ್ಯವು ಆಸವ ಎಂತಲೂ, ಔಷಧವನ್ನು ನೀರಲ್ಲಿ ಹಾಕಿ ಕುದಿಸಿದ ಕಷಾಯದಿಂದ ತಯಾರಿಸಿದ ಮದ್ಯವು ಅರಿಷ್ಟ ಎಂತಲೂ, ತಿಳಿಯಬೇಕು. ಅವೆರಡರ ಮಾತ್ರೆಯು ಒಂದು ಪಲತೂಕವಾಗಿರುತ್ತದೆ. 
 (b) ಅನುಕ್ತಮಾನಾರಿಷ್ಟೇಷು ದ್ರವೇ ದ್ರೋಣೀ ಗುಡಾತ್ತುಲಾಂ |
   ಕ್ಷೌದ್ರಂ ಕ್ಷಿಪೇದ್ಗುಡಾದರ್ಧಂ ಪ್ರಕ್ಷೇಪಂ ದಶಮಾಂಶಿಕಂ || (ಶಾ.100) 
  ಅರಿಷ್ಟಗಳಿಗೆ ತೂಕ ಹೇಳದ ಸಂಗತಿಯಲ್ಲಿ, 16 ಪ್ರಸ್ಥ ದ್ರವಕ್ಕೆ 100 ಪಲ ಬೆಲ್ಲ, ಅದರ ಅರ್ಧ ಜೇನು, ಮತ್ತು (ಬೆಲ್ಲದ) ಹತ್ತನೇ ಒಂದು ಅಂಶಪ್ರಕ್ಷೇಪ (ಮೇಲ್ಪುಡಿ), ಕೂಡಿಸಬೇಕು.
ಶುಕ್ತ ಮತ್ತು ಚುಕ್ರ 
      50. ಕಂದಮೂಲಫಲಾದೀನಿ ಸಸ್ನೇಹಲವಣಾನಿ ಚ |
       ಯತ್ರ ದ್ರವೇಽಭಿಸೊಯಂತೇ ತಚ್ಚುಕ್ತ*ಮಭಿಧೀಯತೇ ||
      ವಿನಷ್ಟಮಮ್ಲತಾಂ ಯಾತಂ ಮದ್ಯಂ ವಾ ಮಧುರದ್ರವಃ |                         ವಿನಷ್ಟಮಮ್ಲತಾಂ ಸಂಧಿತೋ ಯಸ್ತು ತಚ್ಚುಕ್ರಮಭಿಧೀಯತೇ || (ಶಾ. 100.) 
   ಗಡ್ಡೆ, ಬೇರು, ಫಲ ಮೊದಲಾದವುಗಳು ಸ್ನೇಹ ಮತ್ತು ಲವಣಗಳೊಂದಿಗೆ ದ್ರವದಲ್ಲಿ ಹೆಚ್ಚು ಕಾಲ ಇರಿಸಲ್ಪಟ್ಟಲ್ಲಿ, ಯಾವ ರಸಾಂತರವನ್ನು ಹುಟ್ಟಿಸುತ್ತವೋ, ಅದಕ್ಕೆ ಶುಕ್ತವೆಂದು ಹೆಸರು. ಮದ್ಯವು ರಸಾಂತರ ಪಡೆದು ಹುಳಿಯಾದದ್ದಕ್ಕೆ, ಅಧವಾ ಸೀಯಾದ ದ್ರವವೇ ಆ ರುಚಿ ಹೋಗಿ ಹುಳಿಯಾದದ್ದಕ್ಕೆ, ಚುಕ್ರವೆನ್ನುತ್ತಾರೆ.