ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XXI - 410 -

    7.ವಮನಾನಂತರದಲ್ಲಿ ಧೂಮಪಾನ

ಸಮ್ಯಗ್ವಾಂತಂ ಚೈನಮಭಿಸಮಿಾಕ್ಷ್ಯ ಸ್ನೇಹನವಿರೇಚನಶಮನಾನಾಂ ಧೂಮಾನಾಮನ್ಯತಮಂ ಸಾಮರ್ಧ್ಯತಃ ಪಾಯಯಿತ್ವಾಚಾರಿಕ ಮಾದಿಶೇತ್ | (ಸು. 548.) ಅವನು ಒಳ್ಳೇದಾಗಿ ವಾಂತಿ ಮಾಡಿದ್ದನ್ನು ತಿಳಿದು, ಸ್ನೇಹನ ಹೊಗೆ, ವಿರೇಚನ ಹೊಗೆ ಮತ್ತು ಶಮನ ಹೊಗೆ, ಇವುಗಳೊಳಗೆ ಒಂದನ್ನು (ದೋಷಕ್ಕೆ ಲಕ್ಷ್ಯವಿಟ್ಟು) ಅವನ ಸಾಮರ್ಧ್ಯಕ್ಕೆ ತಕ್ಕವಾಗಿ ಪಾನಮಾಡಿಸಿ, ಆಹಾರವಿಹಾರಾದಿಗಳ ಪಧ್ಯ ವಿಧಿಸಬೇಕು.

          8.ವಮನಾನಂತರದ ಪಥ್ಯ

ತತೋsಪರಾಹ್ಣೇ ಶುಚಿಶುದ್ಧದೇಹಮುಷ್ಣಾಭಿರದ್ಭಿಃ ಪರಿಷಿಕ್ತಗಾತ್ರಂ | ಕುಲತ್ಧಮುದ್ಗಾಢಕಿಜಾಂಗಲಾನಾಂ ಯೂಷೈ ರಸೈರ್ವಾಪ್ಯುಪಭೋಜ ಯೇತ್ತು || (ಸು. 548 ) ಆಮೇಲೆ ಅಪರಾಹ್ಣದಲ್ಲಿ ಅವನನ್ನು ಬಿಸಿನೀರಿನಿಂದ ಸ್ನಾನಮಾಡಿಸಿ, ಅವನ ದೇಹವು ಶುದ್ದವೂ, ಶುಚಿಯೂ ಆದ ಮೇಲೆ, ಹುರುಳೀಸಾರು, ಹೆಸರುಬೇಳೆ ಸಾರು, ತೊಗರಿಬೇಳೆ ಸಾರು, ಅಧವಾ ಚಾಂಗಲ ಮಾಂಸದ ರಸ, ಇವುಗಳಿಂದ ಸಹ ಯಧಾಯುಕ್ತವಾಗಿ ಉಣ್ಣಿಸಬೇಕು. ಷರಾ ಆಗ್ನಿ ಮಂದವಾಗಿರುವದಾದರೆ, ಅಥವಾ ಕಫ ಬಹಳ ಕಡಿಮೆಯಾಗಿದ್ದರೆ ಗಂಜಿಯನ್ನು ಕೊಡಬೇಕು ಎಂತ ತಾತ್ಪರ್ಯ

         9.  ವಮನದ ಗುಣ  

ಛಿನ್ನೇ ತರೌ ಪುಷ್ಪಫಲಪ್ರರೋಹಾ ಯಧಾ ವಿನಾಶಂ ಸಹಸಾ ವ್ರಜಂತಿ | ತಧಾಹೃತೇ ಶ್ಲೇಷ್ಮಣಿ ಶೋಧನೇನ ತಜ್ಜಾ ವಿಕಾರಾಃ ಪ್ರಶಮಂ ಪ್ರಯಾಂತಿ || (ಸು. 548.) ಮರವನ್ನು ಕಡಿದರೆ ಅದರ ಹೂವು, ಫಲ ಮತ್ತು ಚಿಗುರುಗಳು ಹ್ಯಾಗೆ ಬೇಗನೇ ನಾಶ ಹೊಂದುತ್ತವೋ, ಹಾಗೆ ಶೋಧನದಿಂದ ಕಫವನ್ನು ತೆಗೆದುಬಿಟ್ಟರೆ, ಆ ಕಫದಿಂದ ಹುಟ್ಟಿದ ರೋಗಗಳೆಲ್ಲಾ ಶಾಂತವಾಗುತ್ತವೆ.

       10.ವಮನಕ್ಕೆ ಅಯೋಗ್ಯರು 

ನ ವಾಮಯೇತ್ ತೈಮಿರಿಕೋರ್ಧ್ವವಾತ ಗುಲ್ಮೋದರಪ್ಲೀಹಕೃಮಿಶ್ರಮಾರ್ತಾನ್ | ಸ್ಧೂಲಕ್ಷತಕ್ಷೀಣಕೃಶಾತಿವೃದ್ಧ ಮೂತ್ರಾತುರಾನ್ ಕೇವಲವಾತರೋಗಾನ್ || ಸ್ವರೋಪಘಾತಾಧ್ಯಯನಪ್ರಸಕ್ತ ದುಶ್ಛರ್ದಿದುಃಕೋಷ್ಠತೃಡಾರ್ತಬಾಲಾನ್ | ಊರ್ಧ್ವಾಸ್ರಪಿತ್ತಿಕ್ಷುಧಿತಾತಿರೂಕ್ಷ ಗರ್ಭಿಣ್ಯುದಾವರ್ತಿನಿರೂಹಿತಾಂಶ್ಚ || (ಸು. 548.) ತಿಮಿರ, ಊರ್ಧ್ವವಾಯು, ಗುಲ್ಮ, ಉದರವ್ಯಾಧಿ, ಪ್ಲೀಹವೃದ್ಧಿ, ಕೃಮಿ, ಶ್ರಮ, ಇವುಗಳಿಂದ ಪೀಡಿತರಾದವರೂ, ಸ್ಥೂಲರೂ, ಕ್ಷತರೂ, ಕ್ಷೀಣರೂ, ಕೃಶರೂ, ಅತಿವೃದ್ಧರೂ,