ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 - 411 - ಆ XXI ಮೂತ್ರರೋಗಿಗಳೂ, ಬರೇ ವಾತರೋಗದವರೂ, ಸ್ವರೋಪಘಾತದವರೂ, ಅಧ್ಯಯನದ ವ್ಯಾಸಂಗದವರೂ, ಕಷ್ಟದಿಂದ ವಾಂತಿಮಾಡತಕ್ಕವರೂ, ಹೊಟ್ಟೆ ಕೆಟ್ಟವರೂ, ಬಾಯಾರಿಕೆಯಿಂದ ಪೀಡಿತರಾದವರೂ, ಬಾಲರೂ, ಊರ್ಧ್ವರಕ್ತಪಿತ್ತದವರೂ, ಹಸಿದವರೂ, ಅತಿರೂಕ್ಷರೂ, ಗರ್ಭಿಣಿಯರೂ, ಉದಾವರ್ತ ರೋಗದವರೂ, ನಿರೂಹವಸ್ತಿ ಸೇವಿಸಿದವರೂ, ಇವರನ್ನು ವಾಂತಿಮಾಡಿಸಬಾರದು.

     11.ಅನುಚಿತವಾದವಮನದ ದೋಷ

ಅವಮ್ಯವಮನಾದ್ರೋಗಾಃ ಕೃಛ್ರತಾಂ ಯಾಂತಿ ದೇಹಿನಾಂ | ಅಸಾಧ್ಯತಾಂ ವಾ ಗಚ್ಛಂತಿ ನೈತೇ ವಾಮ್ಯಾಸ್ತತಃ ಸ್ಮೃತಾಃ || (ಸು. 548 ) ವಮನಕ್ಕೆ ಅಯೋಗ್ಯರಾದವರಿಗೆ ಮದ್ದುಕೊಟ್ಟು ವಾಂತಿಮಾಡಿಸುವದರಿಂದ ಅವರ ರೋಗಗಳು ವಾಸಿಯಾಗುವದಕ್ಕೆ ಕಷ್ಟದ ಸ್ಥಿತಿಯನ್ನು, ಅಧವಾ ಅಸಾಧ್ಯತೆಯನ್ನು, ಹೊಂದುವವು. ಆದ್ದರಿಂದ ಇಂಧವರನ್ನು ವಾಂತಿಮಾಡಿಸಬಾರದಾಗಿ ಹೇಳೋಣಾಗಿದೆ.

   12.ವಿರೇಚನಕ್ಕೆ ಹಿಂದಣ ದಿನದ ಕರ್ತವ್ಯ

ವಿರೇಚನಮಪಿ ಸ್ನಿಗ್ದಸ್ವಿನ್ನಾಯ ವಾಂತಾಯಚ ದೇಯಂ | ಅಧಾತುರಂ ಶ್ವೋ ವಿರೇಚನಂ ಪಾಯಯಿತಾಸ್ಮೀತಿ ಲಘು ಭೋಜಯೇತ್ | ಫಲಾ ಮ್ಲಮುಷ್ಣೋದಕಂ ಚೈನಮನುಪಾಯಯೇತ್ | ಅಧಾsಪರೇsಹನಿ ವಿಗತಶ್ಲೇಷ್ಮಾಣಮಾತುರೋಪಕ್ರಮಣೀಯಾದವೇಕ್ಷ್ಯಾತುರಮಧಾಸ್ಮೈ ಔಷಧಮಾತ್ರಾಂ ಪಾತುಂ ಪ್ರಯಚ್ಛೇತ್ | (ಸು. 549.) ವಿರೇಚನವನ್ನು ಸಹ ಸ್ನೇಹನ ಮತ್ತು ಸ್ವೇದನಮಾಡಿಸಿಕೊಂಡವನಿಗೆ ಮತ್ತು ವಮನ ಕ್ರಮ ನಡಿಸಿದ ಮೇಲೆ ಕೊಡತಕ್ಕದ್ದಾಗಿರುತ್ತದೆ. ಅದರಲ್ಲಿ ರೋಗಿಗೆ ನಾಳೆ ವಿರೇಚನದ ಔಷಧವನ್ನು ಕುಡಿಸುತ್ತೇನೆಂತ (ಹಿಂದಿನ ದಿನದಲ್ಲಿ) ಲಘುವಾದ ಭೋಜನ ಮಾಡಿಸಿ, (ಮಾದಳ ಮುಂತಾದ) ಹಣ್ಣುಗಳ ಹುಳಿಯನ್ನು ಕೊಟ್ಟು, ಬಿಸಿನೀರನ್ನು ಕುಡಿಸಬೇಕು. ಅನಂತರ ಮಾರಣೆ ದಿನ ರೋಗಿಯು ಕಫವನ್ನು ತೆಗೆದುಬಿಟ್ಟ ಮೇಲೆ, ಅವನನ್ನು ಚಿಕಿತ್ಸೋಪಕ್ರಮಕ್ಕೆ ಹೇಳಿರುವ ರೀತಿಯಿಂದ ಪರೀಕ್ಷಿಸಿ, ಆ ಮೇಲೆ ಅವನಿಗೆ ಕುಡಿಯುವದಕ್ಕೆ ತಕ್ಕ ಪ್ರಮಾಣದಲ್ಲಿ ಔಷಧವನ್ನು ಕೊಡತಕ್ಕದ್ದು. ಷರಾ ಹಿಂದಿನ ದಿನದ ಊಟ ಎಂಬದು ಪೂರ್ವಾಹ್ನದಲ್ಲಿ ಎಂತಲೂ ಆ ದಿನ ರಾತ್ರಿ ಊಟ ನಿಷಿದ್ಧವೆಂತಲೂ ಸಿ ಸಂ ವ್ಯಾ


  13.ಕೋಷ್ಠ ಭೇದದ ಮೇಲೆ ವಿರೇಚನ ಮಾತ್ರಾಭೇದ

ತತ್ರ ಮೃದುಃ ಕ್ರೂರೋ ಮಧ್ಯ ಇತಿ ತ್ರಿವಿಧಃ ಕೋಷ್ಠೋ ಭವತಿ | ತತ್ರ ಬಹುಪಿತ್ತೋ ಮೃದುಃ ಸ ದುಗ್ಧೇನಾಪಿ ವಿರಿಚ್ಯತೇ | ಬಹುವಾತಶ್ಲೇ ಪ್ಮಾ ಕ್ರೂರಃ ಸ ದುರ್ವಿರೇಚ್ಯಃ | ಸಮದೋಷೋ ಮಧ್ಯಮಃ ಸ ಸಾ ಧಾರಣ ಇತಿ | ತತ್ರ ಮೃದೌ ಮಾತ್ರಾ ಮೃದ್ವೀ ತೀಕ್ಷ್ಞಾ ಕ್ರೋರೇ ಮಧ್ಯೇ ಮಧ್ಯಾ ಕರ್ತವ್ಯೇತಿ | (ಸು. 549.) ಮಾತ್ರೆ ನಿಶ್ಚಯಿಸುವಾಗ್ಗೆ ಹೊಟ್ಟೆಯು ಮೃದು, ಕ್ರೂರ, ಮತ್ತು ಮಧ್ಯ ಎಂಬ ಮೂರು ವಿಧವಾಗಿರುತ್ತದೆಂಬದನ್ನು ತಿಳಿದಿರಬೇಕು. ಅವುಗಳೊಳಗೆ ಬಹು ಪಿತ್ತವುಳ್ಳದ್ದು ಮೃದು;

                                    52*