ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 437 - ಆ XXII 29. ಅನಾಯಾಂತಂ ತ್ಯಹೋರಾತ್ರಾಹಂ ಸಂಶೋಧರ್ಜಯೇತ್ | ಅನುವಾಸನ ಸ್ನೇಹವಸ್ತಾವನಾಯಾತೇ ನಾನ್ಯ ಸ್ನೇಹೋ ವಿಧೀಯತೇ || ಹಿಂದೆ ಬಾರದ್ದ * ಪರಿಹಾರ (ಸು. 575.) ಒಂದು ಹಗಲೂರಾತ್ರಿಯೊಳಗೆ (ಒಂದು ದಿನದಲ್ಲಿ) ಸ್ನೇಹವು ಹಿಂದಕ್ಕೆ ಬಾರದಿದ್ದರೆ, ಅದನ್ನು ಸಂಶೋಧನ ವಸ್ತ್ರಗಳಿಂದ ಜಯಿಸಬೇಕು. ಕೊಟ್ಟ ಸ್ನೇಹವಸ್ತಿಯು ಹಿಂತಿರುಗಿ ಬಾರ ದ್ದಲ್ಲಿ, ಬೇರೆ ಸ್ನೇಹವನ್ನು ಕೊಡಕೂಡದು. 30. ಅನೇನ ವಿಧಿನಾ ಷಡ್ತಾ ಸಪ್ತ ವಾಷ್ ನವೈವ ವಾ || ಅನುವಾಸನಗಳ ವಿಧೇಯಾ ವಸ್ತ್ರಯಸ್ತೇಷಾಮಂತರಾ ತು ನಿರೂಹಣಂ || ಸಂಖ್ಯೆಯ ನಿಯಮ (ಸು. 573.) ಈ ಕ್ರಮದಿಂದ ಸ್ನೇಹವಸ್ತಿಯನ್ನು ಆರು, ಏಳು, ಎಂಟು, ಅಧವಾ ಒಂಭತ್ತು, ಸರ್ತಿ ಕೊಡಬಹುದು. ಮಧ್ಯದಲ್ಲಿ ನಿರೂಹಣ ವಸ್ತಿಯನ್ನು ಕೊಡಬೇಕು. ನಿರೂಹ-ಅನು ವಾಸನಗಳ ಶೀಲ 31. ಸ್ನೇಹವನ್ತಿಂ ನಿರೂಹಂ ವಾ ನೈಕಮೇವಾತಿಶೀಲಯೇತ್ | ಸ್ನೇಹಾದಗ್ನಿವಧೋಶ್‌ ನಿರೂಹಾತ್ಪವನಾದ್ದಯಂ || ವಾಸನಗಳ ಶೀಲ ತಸ್ಮಾನ್ನಿರೂರ್ಥೋನುವಾಸ್ಕೋ ನಿರೂಹ್ಯಶ್ಚಾನುವಾಸಿತಃ | ನೈವಂ ಪಿತ್ತ ಕಫೋಶೌ ಪ್ಯಾತಾಂ ನ ಪವನಾಯಂ | (ಸು. 573.) ಸ್ನೇಹವಸ್ತಿಯನ್ನು ಅಥವಾ ನಿರೂಹವಸ್ತಿಯನ್ನು ಒಂದನ್ನಾಗಿಯೇ ಅತಿಯಾಗಿ ಶೀಲ ಮಾಡಬಾರದು. ಸ್ನೇಹದಿಂದ ಅಗ್ನಿನಾಶ ಮತ್ತು ಉತ್ತೈಶ (ವಾಂತಿಯಾಗುವ ಸಂಕಟ) ಉಂಟಾಗುತ್ತವೆ, ಮತ್ತು ನಿರೂಹದಿಂದ ವಾಯುವಿನ ಭಯ ಸಂಭವಿಸುತ್ತದೆ. ಆದ್ದರಿಂದ ನಿರೂಹ ಸೇವಿಸಿದವನು ಅನುವಾಸನವನ್ನೂ, ಅನುವಾಸನ ಸೇವಿಸಿದವನು ನಿರೂಹವನ್ನೂ ಉಪಯೋಗಿಸಿದ್ದಲ್ಲಿ, ಪಿತ್ತ ಕಫದ ದೋಷವಾಗಲಿ, ಉ ಶವಾಗಲಿ, ವಾಯುವಿನ ಭಯ ವಾಗಲಿ ಉಂಟಾಗುವದಿಲ್ಲ u ನಿರೂಹದ 32. ತತೋ ನೇತ್ರಮಹನೀಯ ತ್ರಿಂಶನ್ಮಾತ್ರಾ ಪೀಡನಕಾಲಾದುಪೇಕ್ಷೆ ಷೇತ್ಯಾತುರಂ ಬ್ರೂಯಾತ್ | ಆತುರಮಪವೇಶಯೇದುತ್ಕಟುಕಂ ಪಶ್ಚಾತ್ಕರ್ಮ ವಸ್ತ್ರಾಗಮನಾರ್ಧಂ | ನಿರೂಹಪ್ರತ್ಯಾಗಮನಕಾಲಸ್ತು ಮುಹೂ ರ್ತೋ ಭವತಿ | (ಸು. 578.) ನಿರೂಹವಸ್ತಿಯನ್ನು ಕೊಟ್ಟು ನಳಿಗೆಯನ್ನು ಹಿಂದೆ ತೆಗೆದ ಮೇಲೆ, ವಸ್ತಿಯನ್ನು ಹಿಂಡಿದ ಕ್ಷಣದಿಂದ ಮೂವತ್ತು ಮಾತ್ರಾಕಾಲ ಸುಮ್ಮಗಿದ್ದು, ಅನಂತರ ರೋಗಿಯನ್ನು ಏಳು ಎಂದು ಹೇಳಿ, ವಸ್ತಿಯು ಹಿಂದಕ್ಕೆ ಬರುವದಕ್ಕೋಸ್ಕರ ಉತ್ಕಟವಾಗಿ (ಮುಕುಳಿಯನ್ನು ಆಧರಿಸಿ) ಕೂತುಕೊಳ್ಳಿಸಬೇಕು. ನಿರೂಹ ತಿರುಗಿ ಬರುವದಕ್ಕೆ ಬೇಕಾದ ಕಾಲವು ಒಂದು ಮುಹೂರ್ತ (48 ಮಿನಿಟು) ವಾಗಿರುತ್ತದೆ.