ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

449 - ಆ XXII. ಈ ವಸ್ತಿ ಕ್ರಮಕ್ಕೆ ನಮ್ಮ ಪೂರ್ವಿಕ ವೈದ್ಯ ಶಿರೋಮಣಿಗಳು ಮಹತ್ವವನ್ನು ಕೊಟ್ಟು, ಅದನ್ನು ಯುಕ್ತಿ ವಿಶೇಷ ದಿಂದ ಉಪಯೋಗಿಸಿ ಯಾವ ರೋಗದಲ್ಲಿಯಾದರೂ ಎಶೇಷವಾದ ಪ್ರಯೋಜನ ಪಡೆಯಬಹುವಾಗಿ ಸೂಚಿಸಿ, ಆ ವಿಷಯ ಬಹು ವಿಸ್ತಾರವಾಗಿ ತಮ್ಮ ಗ್ರಂಥಗಳಲ್ಲಿ ಬರೆದಿದ್ದಾರೆ ಚರಕ ಸಂಹಿತೆಯಲ್ಲಿಯೂ, ಸುಶ್ರುತಸಂಹಿತೆಯಲ್ಲಿ ಯೂ, ಐದೈದು ದೊಡ್ಡ ಅಧ್ಯಾಯಗಳು ಈ ಭಾಗವನ್ನೇ ಹೇಳುತ್ತವೆ ಆದರೆ ಅದನ್ನು ಗುರೂಪದೇಶ ವಿನಾ ಪೂರ್ಣ ವಾಗಿ ತಿಳಿದು ವಸ್ತಿಕರ್ಮವನ್ನು ಸರಿಯಾಗಿ ನಡಿಸುವದು ಸಾಮಾನ್ಯ ಜನರಿಗೆ ಪ್ರಯಾಸ, ಅದಲ್ಲದೆ ಪಾತ್ತಾತ ವೈದ್ಯಶಾಲೆಗಳಲ್ಲಿ ಕಲಿಯದ ಆಯುರ್ವೇದಪಂಡಿತರಿಗೆ ಅಂಥಾ ಕ್ರಮಗಳನ್ನು ನಡಿಸಲಿಕ್ಕೆ ಈಗಿನ ಕಾಲದಲ್ಲಿ ರೋಗಿ ಗಳು ಒಪ್ಪುವದು ಕಷ್ಟ ಇದನ್ನೆಲ್ಲಾ ಆಲೋಚಿಸಿ ಅತಿ ಸಂಕ್ಷೇಪವನ್ನಾಗಲಿ, ಅತಿ ವಿಸ್ತಾರವನ್ನಾಗಲಿ ಮಾಡದೆ ವಸ್ತಿ ವಿಧಿಯ ಸಾರಾಂಶವನ್ನು ಈ ಅಧ್ಯಾಯದಲ್ಲಿ ಸಂಗ್ರಹಿಸಿಯದೆ 57