ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅ. XXII - 448 - ಸೇವಿಸಿದನಂತರ ರೋಗಗಳು ಸಂಭವಿಸುವದಿಲ್ಲ. ಆದ್ದರಿಂದ ನಿರೂಹಕ್ರಮವನ್ನ ಪೇಕ್ಷಿಸು ವವರು ಅದನ್ನು ಸುಖವಾಗಿ ಉಪಯೋಗಿಸಬಹುದು; ಮತ್ತು ಯಾವಾಗ ರೋಗಿಯು ಅಪೇಕ್ಷಿಸುತ್ತಾನೋ, ಆಗಲೇ ವೈದ್ಯನು ಅದನ್ನು ಪ್ರಯೋಗಿಸಬಹುದು. ಜೇನು ಮತ್ತು ತೈಲ ಸರಿಪಾಲು, ಹರಳುಬೇರಿನ ಕಷಾಯ (ಜೇನು ತೈಲಗಳ ಒಟ್ಟು ಮಾನಕ್ಕೆ ಸರಿ ಪಾಲು), ಸತಾಸೆ ಅರ್ಧ ಪಲ, ಸೈಂಧವ ಉಪ್ಪು ಕಾಲುಪಲ, ಮತ್ತು ಒಂದು ಫಲ, ಇವುಗಳನ್ನು ಕೂಡಿಸಿ ಮಂತಿನಿಂದ ಕಡೆದು, ಸುಖೋಷ್ಣವಾಗಿ ವೈದ್ಯನು ಕೊಡತಕ್ಕದ್ದು. ಅದು ಮಾಧು ತೈಲಿಕ ಎಂಬ ಹೆಸರುಳ್ಳದ್ದು. ಷರಾ ಒಂದು ಫಲ ಎಂಬದು ಮಾಯಿಫಲವಂತ ಕಾಣುತ್ತದೆ ನಿ ಸಂ ವ್ಯಾ ಪ್ರಕಾರ ಇದು ಮತ್ತು ಯುಕ್ತ ರಥ, ಸಿದ್ದ ವಸ್ತಿ, ದೋಷಹರವ, ಪಾಂಡಮೂಲಿಕವಸ್ತಿ, ಈ ಐದು ಮಾಧುತೈಲಿಕ ವಸ್ತಿಗಳಲ್ಲಿ ಜೇನು, ತೈಲ, ಕಷಾಯ ಮುಂತಾದ್ದು ಸೇರಿ 18 ಪಲವಾಗುವ ಹಾಗೆ ತಯಾರಿಸಿ, ಅದಕ್ಕೆ ಮೃದುವಾದ ಮಾ೦ಸರಸ, ಹುಳಿ ಗಂಜಿ ನೀರು, ಮುಂತಾದ್ದನ್ನು ಸರಿಪಾಲು, ಅಂದರೆ 18 ಪಲ, ಸೇರಿಸತಕ್ಕದ್ದು ಚಿ ಸಾ ಸಂ ದಲ್ಲಿ ಫಲೇನೈಕೇನ' ಎಂಬಲ್ಲಿ (ಪಲೇನೈಕೇನ' ಎಂತ ಕಾಣುತ್ತದೆ ಆ ಪಾರ ಸರಿಯಾದರೆ ಯಾವದರ ಒಂದು ಪಲ ಎಂಬದು ಸಂದೇಹಾಸ್ಪದ 63. ವಚಾ ಮಧುಕಲಂ ಚ ಕ್ಯಾಧಃ ಸರಸಸೈಂಧವಃ | ಯುಕ್ತರಥಯೋಗ ಪಿಪ್ಪಲೀಫಲಸಂಯುಕ್ಕೊ ವಸ್ತಿರ್ಯುಕ್ತರಧಃ ಸ್ಮೃತಃ || - (ಸು. 586-87.) ಬಜೆ, ಜೇನು ಮತ್ತು ತೈಲಕ್ಕೆ ಕಷಾಯ, ರಸ, ಸೈಂಧವಲವಣ, ಹಿಪ್ಪಲಿ ಮತ್ತು ಫಲ ಕೂಡಿಸಿ, ತಯಾರಿಸಿದ ವಸ್ತಿಯು ಯುಕ್ತರಧ ಎನ್ನಿಸಿಕೊಳ್ಳುತ್ತದೆ ಷರಾ ಇದರಲ್ಲಿ ಕಷಾಯ ಎಂಬದು ಹರಳು ಬೇರಿನದೇ ರಸ ಎಂಬದು ಶಾ ನ ಯೋಗದಲ್ಲಿ ಕಾಣುವದಿಲ್ಲ ಫಲ ಶಬ್ದ ಎಲ್ಲಾ ಪುಸ್ತಕಗಳಲ್ಲಿಯೂ ಉಂಟು ನಿ ಸಂ ವ್ಯಾ ದಲ್ಲಿ ಪಿಪ್ಪಲೀಫಲ ಎಂಬದಕ್ಕೆ ಪಿಪ್ಪಲೀಮೂಲ ಎಂತ ಅರ್ಥ ಬರೆದು, ಬಜೆ, ಸೈಂಧವ, ಹಿಪ್ಪಲೀಮಲ ಸಹ ಕಾಲು ಪಲ ಪ್ರಕಾರ, ಮಧುತೈಲಗಳು 88 ಪಲ, ಅಷ್ಟೇ ಕಷಾಯ ಸೇರಿಸಬೇಕಾದ್ದೆಂತ ಉಕ್ತವಾಗಿದೆ 64. ಯವಕೋಲಕುಲತ್ತಾನಾಂ ಕ್ಯಾರೋ ಮಾಗಧಿಕಾ ಮಧು | ಸಿದ್ಧವಸ್ತಿಯೋಗ ಸಸೈಂಧವಃ ಸಮಧುಕಃ ಸಿದ್ದ ವಸ್ತಿರಿತಿ ಸ್ಮೃತಃ || ಯವೆಗೋದಿ, ಬೊಗರಿ, ಹುರುಳಿ, ಇವುಗಳ ಕಷಾಯ, ಹಿಪ್ಪಲಿ, ಜೇಷ್ಠಮಧು, ಸೈಂಧವಲವಣ, ಜೇನು, ಇವುಗಳಿಂದ ಕೂಡಿದ ವಸ್ತಿಗೆ ಸಿದ್ದ ವಸ್ತಿ ಎನ್ನುತ್ತಾರೆ. ಷರಾ ಈ ಸಿದ್ಧವಸ್ತಿಯ ಯೋಗವು ಬೇರೆ ಎರಡು ವಿಧವಾಗಿ ಎರಡು ಪುಸ್ತಕಗಳಲ್ಲಿ ಕಾಣುತ್ತದೆ. ನಿ ಸಂ ವ್ಯಾ ಯವಾದಿಗಳ ಕಷಾಯ 83 ಪಲ್ಯ, ಮಧುತ್ವಲಗಳು ಸೇರಿ 84 ಪಲ, ಸೈಂಧವಾದಿಗಳು ಒಂದು ಪಲ, ಸೇರಿಸಿ ಬೇಕಾದ್ದು ಸುತ್ತುತದಲ್ಲಿ, ಮಾಧುತ್ಯಲಕ, ಯುಕ್ತರಥ, ದೋಷಹರ, ಪಾಂಚಮೂಲಿಕ, ಸಿದ್ದ ಮತ್ತು ಮುಸ್ತಾದಿಕ್ ಎಂಬ ವಸ್ತಿಗಳ ಯೋಗಗಳನ್ನು ಹೇಳಿದನಂತರ, 4ರೋಗವನ್ನೂ, ಔಷಧವನ್ನೂ ತಿಳಿದು ಈ ಬೀಜದಿಂದ ಬುದ್ದಿಶಾಲಿ ಯು ತನ್ನ ಬುದ್ದಿಯಿಂದ ನೂರು ಕಟ್ಟಳೆ ವಸ್ತ್ರಗಳನ್ನು ಕಲ್ಪಿಸಬೇಕು, ಅಜೀರ್ಣದಲ್ಲಿ ವಸ್ತಿಯನ್ನು ಉಪಯೋಗಿಸ ಬಾರದು, ಹಗಲು ನಿದ್ರೆಯನ್ನು ವರ್ಜಿಸಬೇಕು, ಉಳಿದ ಆಹಾರ ಆಚಾರಗಳಲ್ಲಿ ಯುಕ್ತ ಕಂಡಂತೆ ಮಾಡಬಹುದು, ಈ ವಸ್ತಿಯಲ್ಲಿ ಜೇನು ಮತ್ತು ತೈಲ ಪ್ರಧಾನವಾಗಿ ಉಪಯೋಗಿಸಲ್ಪಡುವದರಿಂದ, ಮಾಧುತೈಲಕ ಎಂತ ಅದಕ್ಕೆ ವೈದ್ಯರು ಹೇಳುತ್ತಾರೆ. ಸುಖಿಗಳಾಗಿಯೂ, ಅಲ್ಲ ದೋಷವುಳ್ಳವರಾಗಿಯೂ, ನಿತ್ಯದಲ್ಲಿಯೂ ಸಿದ್ದರಾಗಿಯೂ, ಮೃದುವಾದ ಹೊಟ್ಟೆಯುಳ್ಳವರಾಗಿಯೂ, ಯಾರು ಇದ್ದಾರೆ, ಅವರಿಗೆ ಮಾಧುತೌಲಿಕಗಳನ್ನು ವಿಧಿಸಬೇಕು ” ಎಂಬ ಅರ್ಥವುಳ್ಳ ವಚನಗಳು ಕಾಣುತ್ತವೆ (ಪ್ರ 587-588 )