- 447 - ಅ. XXII ವಾಯೋಃ ಪರಂ ಜನ್ಮನಿ ಹೇತುರಸ್ತಿ || ವಿಣ್ಯತ್ರಪಿತ್ತಾದಿಮಲಾಶಯಾನಾಂ ವಿಕ್ಷೇಪಸಂಹಾರಕರಃ ಸ ಯಸ್ಮಾತ್ | ವಸ್ತಿ ಪ್ರಶಂಸೆ ತಸ್ಯಾತಿವೃದ್ದ ಶಮಾಯ ನಾನ್ಯದ್ ವಸ್ತೆರ್ವಿನಾ ಭೇಷಜಮಸ್ತಿ ಕಿಂಚಿತ್ || ತಸ್ಮಾಚ್ಚಿಕಿತ್ಸಾ ರ್ಧಮಿತಿ ಬ್ರುವಂತಿ ಸರ್ವಾ೦ ಚಿಕಿತ್ಸಾಮಪಿ ವಸ್ತಿಮೇಕೇ | (ಚ. 867-68.) ಶಾಖೆಗಳನ್ನು ಅವಲಂಬಿಸಿರುವ, ಹೊಟ್ಟೆಯೊಳಗಿನ, ಮರ್ಮಗಳಲ್ಲಿ, ಊರ್ಧ್ವಭಾಗದಲ್ಲಿ, ಸರ್ವ ಅವಯವಗಳಲ್ಲಿ, ಅಧವಾ ಇಡೀ ಶರೀರದಲ್ಲಿ, ಹುಟ್ಟಿದ ರೋಗಗಳು ಯಾವವು ಇರು ತವೋ, ಅವುಗಳ ಜನ್ಮಕ್ಕೆ ವಾಯು ವಿನಾ ಬೇರೆಯಾದ ಕಾರಣ ಮುಖ್ಯ ಯಾವದೂ ಇರುವ ದಿಲ್ಲ. ಹೇಲು, ಮೂತ್ರ, ಪಿತ್ತ, ಮೊದಲಾದ ಮಲಾಶಯಗಳ ಕೆಲಸಗಳನ್ನು ಸರಿಯಾಗಿ ನಡಿ ಸುವದು ಮತ್ತು ನಿಲ್ಲಿಸುವದು ಆ ವಾಯುವೇ ಆಗಿರುವದರಿಂದಲೂ, ಅಂಧಾ ವಾಯುವಿನ ಅತಿವೃದ್ಧಿಯನ್ನು ಶಮನಮಾಡುವದಕ್ಕೆ ವಸ್ತ್ರ ವಿನಾ ಬೇರೆ ಯಾವ ಔಷಧವೂ ಇಲ್ಲದಿರುವದ ರಿಂದಲೂ, ವಸ್ತಿಯು ಚಿಕಿತ್ಸೆಯ ಅರ್ಧ ಎಂತ ಹೇಳುತ್ತಾರೆ. ಕೆಲವರು ವಸ್ತಿಯೇ ಸರ್ವ ಚಿಕಿತ್ಸೆಯೆಂತ ಹೇಳುವವರಿದ್ದಾರ. 62. ನೃಪಾಣಾಂ ತತ್ಸಮಾನಾನಾಂ ತಧಾ ಸುಮಹತಾಮಪಿ | ನಾರೀಣಾಂ ಸುಕುಮಾರಾಣಾಂ ಶಿಶುಸ್ಥವಿರಯೋರಪಿ || ದೋಷನಿರ್ಹರಣಾರ್ಧಾಯ ಬಲವರ್ಣೋದಯಾಯ ಚ | ಸಮಾಸೇನೋಪದೇಕ್ಷಾಮಿ ವಿಧಾನಂ ಮಾಧುಲಿಕಂ || ಯಾನಭೋಜ್ಯಪಾನೇಷು ನಿಯಮಶ್ಚಾತ ನೋಚ್ಯತೇ | ಫಲಂ ಚ ವಿಪುಲಂ ದೃಷ್ಟಂ ವ್ಯಾ ಪದಾಂ ಚಾಪ್‌ಸಂಭವಃ || ಮಾಧುತ್ಯಲಿಕ ಯೋಜ್ಯಸ್ತ್ರತಃ ಸುಖೇನೈವ ನಿರೂಹಕ್ರಮಮಿಚ್ಚತಾ || ಯೋಗ ಮತ್ತು ಅದರ ಗುಣ ಯದೇಚ್ಛತಿ ತದೈವೈಷ ಪ್ರಯೋಕ್ತ ವಿಪಶ್ಚಿತಾ | ಮಧುತೈಲೇ ಸಮೇ ಕ್ಯಾತಾಂ ಕ್ವಾಧಶ್ಚರಂಡಮೂಲಜಃ | ಪಲಾರ್ಧಂ ಶತಪುಷ್ಪಾಯಾಸ್ತತೋಂರ್ಧ ಸೈಂಧವಸ್ಯ ಚ | ಫಲೇನೈಕೇನ ಸಂಯುಕ್ತ ಖಜೇನ ಚ ವಿಲೋಡಿತಃ | ದೇಯಃ ಸುಖೋಷ್ಟೋ ಭಿಷಜಾ ಮಾಧುಲಿಕಸಂಸ್ಥೆತಃ || (ಸು. 586.) ಅರಸುಗಳಿಗೂ, ಅವರಿಗೆ ಸಮಾನರಾದ ಬೇರೆ ಮಹಾನುಭಾವರಿಗೂ, ಸ್ತ್ರೀಯರಿಗೂ, ನೂ ತನ ಶರೀರದವರಿಗೂ, ಶಿಶುಗಳಿಗೂ, ವೃದ್ದರಿಗೂ, ದೋಷಗಳನ್ನು ಹೊರಗೆ ತೆಗೆದುಬಿಟ್ಟು, ಬಲ ಮತ್ತು ವರ್ಣ ಉಂಟುಮಾಡುವದಕ್ಕೆ 'ಮಾಧುಲಿಕ' ಎಂಬ ವಿಧಾನವನ್ನು ಸಂಕ್ಷೇಪದಿಂದ ಉಪದೇಶಮಾಡೋಣಾಗುತ್ತದೆ. ಅದನ್ನು ಉಪಯೋಗಿಸಿದಾಗ್ಗೆ, ಯಾನ, ಸ್ತ್ರೀಸಂಭೋಗ, ಅನ್ನಪಾನಗಳಲ್ಲಿ ನಿಯಮವು ಅವಶ್ಯವಿಲ್ಲ. ಅದರ ಮಹತ್ತಾದ ಫಲ ನೋಡಿಯದೆ, ಅದನ್ನು
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೩೭
ಗೋಚರ