ಅ XXIV. - 464 - ಋತುಗಳಲ್ಲಿ ಪೂರ್ವಾಹ್ನ ಮತ್ತು ಅಪರಾಹ್ಮ, ವರ್ಷ ಋತುವಿನಲ್ಲಿ ಮೊಡವಿಲ್ಲದ ಮತ್ತು ಅತ್ಯುಷ್ಣವಲ್ಲದ ಕಾಲ ಮತ್ತು ವಸಂತ ಋತುವಿನಲ್ಲಿ ಸದಾಕಾಲ, ಅಂಜನಕ್ಕೆ ಪ್ರಶಸ್ತವೆಂತ ಶಾ (ಪು 186 ) . 17. ಗುಟಿಕಾರಸಚೂರ್ಣಾನಿ ತ್ರಿವಿಧಾನ್ಯಂಜನಾನಿ ತು || ಗುಟಿಕಾ ರಸ ಚೂರ್ಣ ಯಧಾಪೂರ್ವಂ ಬಲಂ ತೇಷಾಂ ಶ್ರೇಷ್ಠ ಮಾಹುರ್ವನೀಷಿಣಃ || ಎಂಬ ಅಂಜನಭೇದ (ಸು. 710.) ಗುಳಿಗೆ, ರಸ, ಚೂರ್ಣ, ಎಂತ ಅಂಜನವು ಮೂರು ವಿಧ. ಅವುಗಳೊಳಗೆ ಚೂರ್ಣ ಕ್ಕಿಂತ ರಸ, ಮತ್ತು ರಸಕ್ಕಿಂತ ಗುಳಿಗೆ ಹೆಚ್ಚು ಬಲವುಳ್ಳದ್ದು ಮತ್ತು ಶ್ರೇಷ್ಠ ಎಂತ ಬುದ್ದಿ ನಂತರ ಮತವಾಗಿರುತ್ತದೆ. 18. ಹರೇಣುಮಾತ್ರಾ ವರ್ತಿಃ ಸ್ಯಾಲ್ಲೇಖನಸ್ಯ ಪ್ರಮಾಣತಃ | ಅಂಜನದ ಪ್ರಮಾ ಪ್ರಸಾದನಸ್ಯ ಚಾಧ್ಯರ್ಧಾ ದ್ವಿಗುಣಾ ರೋಪಣಸ್ಯ ಚ || ಣಗಳು ರಸಾಂಜನಸ್ಯ ಮಾತ್ರಾ ತು ಪಿಷ್ಟವರ್ತಿಮಿತಾ ಮತಾ | ದ್ವಿಚತುಃಶಲಾಕಾಶ್ಚ ಚೂರ್ಣಸ್ಯಾನುಪೂರ್ವಶಃ || (ಸು, 710.) ಲೇಖನಕ್ಕೆ ಗುಳಿಗೆಯ ಪ್ರಮಾಣ ಪುಟಾಣಿಕಡಲೆಯಷ್ಟು, ಪ್ರಸಾದನಕ್ಕೆ ಅದರ ಒಂದೂ ವರೆ ಪಾಲಷ್ಟು, ರೋಪಣಕ್ಕೆ ಎರಡು ಪಾಲಷ್ಟು ಆಗಿರುತ್ತದೆ. ರಸರೂಪವಾದ ಅಂಜನದ ಮಾತ್ರೆಯು ಚೂರ್ಣದ ಅಂಜನದಂತೆಯೇ, ಚೂರ್ಣದ ಮಾತ್ರೆ ಲೇಖನಕ್ಕೆ ಎರಡು, ರೋಪ ಣಕ್ಕೆ ಮೂರು, ಮತ್ತು ಪ್ರಸಾದನಕ್ಕೆ ನಾಲ್ಕು ಕಡ್ಡಿಗಳಾಗಿರುತ್ತವೆ. ಷರಾ ವಾಗ್ಧಟನ ಪ್ರಕಾರ ಗುಳಿಗೆ ರೇಣಿಕೆಬೀಜದಷ್ಟು, ರಸ ವಾಯುವಿಳಂಗದಷ್ಟು ತೀಕ್ಷವಿರದೆ ಮೃದುವಾ ದರೆ, ಇದಕ್ಕೆ ದ್ವಿಗುಣ, ಚೂರ್ಣವು ತೀಕ್ಷವಾದರೆ ಎರಡು ತಲಾಕೆ ಮತ್ತು ಮೃದುವಾದರೆ ಮೂರು ಶಲಾಕೆ, ಹೀಗೆ ಪ್ರಮಾಣಗಳಾಗಿರುತ್ತವೆ ಶಾ -ನ ಪ್ರಕಾರ ರಸದ ಮಾತ್ರೆಯು ಉತ್ತಮಪಕ್ಷ ಮೂರು, ಮಧ್ಯಮಪಕ್ಷ ಎರಡು, ಹೀನಪಕ್ಷ ಒಂದು, ವಾಯುವಿಳಂಗದಷ್ಟು ಆಗಿರುತ್ತದೆ 19 ತೇಷಾಂ ತುಲ್ಯಗುಣಾನೈವ ವಿದಧ್ಯಾದ್ಘಾಜನಾನ್ಯಪಿ | ಸೌವಣ್ಯfo ರಾಜತಂ ಶಾರ್ಙ್ಗ೦ ತಾಮ್ರಂ ವೈಡೂರ್ಯಕಾಂಸ್ಯಜಂ || ಅಂಜನಕಡಿ ಯ ಆಯಸಾನಿ ಚ ಜ್ಞಾನಿ ಶಲಾಕಾಶ ಯಧಾಕ್ರಮಂ | ತಯಾರಿಸುವಿಕ ತಯಾರಿಸುವಿಕೆ ವಯೋರ್ಮುಕುಲಾಕಾರಾ ಕಲಾಯಪರಿಮಂಡಲಾ || ಅಷ್ಟಾಂಗುಲಾ ತನುರ್ಮಧೈ ಸುಕೃತಾ ಸಾಧುನಿಗ್ರಹಾ | ಔಡುಂಬರ್ಯ್ಯಹ್ಮಚಾತಾಪಿ ಶಾರೀರೀ ವಾ ಹಿತಾ ಭವೇತ್ || (ಸು. 711) ಅಂಜನಕ್ಕೆ ಸದೃಶವಾದ (ಲೇಖನಾದಿ) ಗುಣವುಳ್ಳ ಪಾತ್ರಗಳನ್ನೇ ಉಪಯೋಗಿಸಬೇಕು. ಕಡ್ಡಿಯನ್ನು ಭಂಗಾರದಿಂದ, ಬೆಳ್ಳಿಯಿಂದ, ಕೊಂಬಿನಿಂದ, ತಾಮ್ರದಿಂದ, ವೈಡೂರ್ಯದಿಂದ, ಕಂಚಿನಿಂದ ಮತ್ತು ಕಬ್ಬಿಣಗಳಿಂದ ಉಕ್ರಕ್ರಮದಲ್ಲಿ ತಯಾರಿಸಿ ಉಪಯೋಗಿಸತಕ್ಕದ್ದು. ಅದರ ಎರಡು ತುದಿಗಳು ಮೊಗ್ಗೆಯ ಆಕಾರವಾಗಿಯೂ, ಕಲಾಯ ಧಾನ್ಯದಂತೆ ಉರುಟಾಗಿ ಯೂ, ನಡು ಸಪೂರವಾಗಿಯೂ, (ದೊರಗು ಮುಂತಾದ ದೋಷವಿಲ್ಲದೆ) ಒಳ್ಳೆ ರೀತಿ ಯಿಂದ ಮಾಡಲ್ಪಟ್ಟಿದ್ದಾಗಿಯೂ, ಹಿಡಿಯಲಿಕ್ಕೆ ಅನುಕೂಲವಾಗಿಯೂ, ಇರಬೇಕು; ಮತ್ತು ತುಂಡ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೫೪
ಗೋಚರ