ಆ XXV. - 472 - ಮತ್ತು ಮಾಸೆ ಬಲವಾಗುವವು, ಮತ್ತು ಬಾಯಿಯು ಸುವಾಸನೆಯುಳ್ಳದ್ದೂ, ನಿರ್ಮಲವೂ ಆಗುತ್ತದೆ. 15. ಅಕಾಲಪೀತಃ ಕುರುತೇ ಭ್ರಮಮೋರ್ಚಾಶಿರೋರುಜಃ | ಅಕಾಲ ಧೂಮ ಪ್ರಾಣಸ್ತೋತ್ರಾಕ್ಸಿಜಿಹ್ವಾನಾಮುಪಘಾತಂ ಚ ದಾರುಣಮ್ || (ಸು. 593.) ಪಾನದ ದೋಷ | ಅಕಾಲದಲ್ಲಿ ಧೂಮಪಾನ ಮಾಡುವದರಿಂದ ಭ್ರಮೆ, ಮೂರ್ಚೆ ಮತ್ತು ತಲೆನೋವು ಉಂಟಾಗುವದಲ್ಲದೆ, ಮೂಗು, ಕಿವಿ, ಕಣ್ಣು ಮತ್ತು ನಾಲಿಗೆಗಳಲ್ಲಿ ಕರಿನವಾದ ರೋಗ ಗಳು ಸಂಭವಿಸುವವು. ಷರಾ ಅಕಾಲದಲ್ಲಿ ಅಥವಾ ಅತಿಯಾಗಿ ಧೂಮಪಾನ ಮಾಡುವದರಿಂದ ಕಿವುಡುತನ, ಕುರುಡುತನ, ಮೂಕತ್ವ, ರಕ್ತಪಿತ್ತ, ತಲೆತಿರುಕು, ಈ ರೋಗಗಳು ಉಂಟಾಗುತ್ತವೆಂತಲೂ, ಆಗ್ಗೆ ಮೃತಪಾನ, ವಿರೇಚನ ಮತ್ತು ರಕ್ತಮೋಕ್ಷಣ ಹಿತಕರವಾಗುತ್ತವೆಂತಲೂ ಚಿ ಸಾ ಸಂ (ಪು 953 ) ಧೂಮಪಾನದ ದೋಷಕ್ಕೆ ನಾವನ-ಅಂಜನ-ತರ್ಪಣಗಳು ಸಹ ಹಿತವೆಂತಲೂ, ತುಪ್ಪ, ಕಬ್ಬಿನ ರಸ, ದ್ರಾಕ್ಷಿ, ಹಾಲು, ಸಕ್ಕರೆ ಪಾನಕ, ಸೀ ಮತ್ತು ಹುಳಿ ರಸಗಳು, ಇವುಗಳನ್ನು ವಮನಕ್ಕಾಗಿ ಕೊಡಬೇಕಾಗಿಯೂ, ಶಾ (ಪು 162 ) 16. ಹೃತ್ಕಂರೇಂದ್ರಿಯಸಂಶುದ್ದಿರ್ಲಾಘವಂ ಶಿರಸಃ ಶಮಃ | ಸರಿಯಾದ ಧೂಮ ಯಧೇರಿತಾನಾಂ ದೋಷಾಣಾಂ ಸಮ್ಯಕ್ ಪೀತಸ್ಯ ಲಕ್ಷಣಮ್ || ಪಾನದ ಲಕ್ಷಣ ಚಿ. ಸಾ. ಸಂ. (ಪು. 953.) ಎದೆಯ, ಕಂರದ ಮತ್ತು ಇಂದ್ರಿಯಗಳ ಶುದ್ಧತೆ, ತಲೆ ಹಗುರವಾಗುವದು ಮತ್ತು ಕೆದ ರಿದ್ದ ದೋಷಗಳು ಶಾಂತವಾಗುವದು, ಇವು ಸರಿಯಾದ ಧೂಮಪಾನದ ಲಕ್ಷಣವಾಗಿರುತ್ತವೆ. 17. ಧೂಮೋ ದ್ವಾದಶಕಾರ್ಪಾದ್ ಗೃಹ್ಮರ್ತೇಶೀತಿಕಾನ್ನ ಚ | ಧೂಮಪಾನಕ್ಕೆ ಪ್ರಾಯ ಭಾ. ಪ್ರ. (ಪು. 226.) ಹನ್ನೆರಡು ವರ್ಷಕ್ಕೆ ಕಡಿಮೆ ಪ್ರಾಯದ ಮಕ್ಕಳೂ, ಎಂಭತ್ತು ವರ್ಷಕ್ಕೆ ಮಿಕ್ಕಿದ ಮುದುಕರೂ ಧೂಮಪಾನವನ್ನು ಮಾಡಬಾರದು ವರಾ XXVI ಅ 18ನೇ ಸಂ ನೋಡಿರಿ
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೬೨
ಗೋಚರ