ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

– 473 - xxvI ನೇ ಅಧ್ಯಾಯ. ನಸ್ಯವಿಧಿ 1. ಔಷಧಯೌಷಧಸಿದ್ದೋ ವಾ ಸ್ನೇಹೋ ವಾ ನಾಸಿಕಾಭ್ಯಾಂ ದೀಯತ ಇತಿ ನಸ್ಯಂ | ತದ್ ದ್ವಿವಿಧಂ ಶಿರೋವಿರೇಚನಂ ಸ್ನೇಹನಂ ಚ | ತದ್ ದ್ವಿವಿಧಮಪಿ ಪಂಚಧಾ | ತದಧಾ | ನಸ್ಯಂ ಶಿರೋವಿರೇಚನಂ ಪ್ರತಿ ಮರ್ಶೋsಪೀಡಃ ಪ್ರಧನನಂ ಚ | ತೇಷು ನಸ್ಯಂ ಪ್ರಧಾನ ಶಿರೋ ನಸ್ಯದ ನಿರ್ದೇಶ ವಿರೇಚನಂ ಚ ನಸ್ಯ ವಿಕಲ್ಪಃ ಪ್ರತಿಮರ್ಶಃ ಶಿರೋವಿರೇಚನವಿಕಲ್ಲೋಳೆ ಮತ್ತು ವಿಧಗಳು ವಪೀಡಃ ಪ್ರಧಮನಂ ಚ | ತತೋ ನಸ್ಯ ಶಬ್ದಃ ಪಂಚಧಾ ನಿಪಾತಿತಃ | ತತ್ರ ಯಃ ಸ್ನೇಹನಾರ್ಧಂ ಶೂನ್ಯ ಶಿರಸಾಂ ಗ್ರೀವಾಸ್ಕಂಧೋರಸಾಂ ಬಲಜನನಾರ್ಧ೦ ದೃಷ್ಟಿಪ್ರಸಾದಜನನಾಯ ವಾ ಸ್ನೇಹೋ ವಿಧೀ ಯತೇ ತಸ್ಮಿನ್ ವೈಶೇಷಿಕ ನಸ್ಯ ಶಬ್ದಃ | (ಸು. 594.) ಔಷಧವು, ಅಧವಾ ಔಷಧದಿಂದ ತಯಾರಿಸಲ್ಪಟ್ಟ ಸ್ನೇಹವ್ರ, ಮೂಗಿನ ಸೊಳ್ಳೆಗಳಿಂದ ಕೊಡಲ್ಪಡುತ್ತದೆಂಬದು ನಸ್ಯ, ಅದು ಶಿರೋವಿರೇಚನ ಮತ್ತು ಸ್ನೇಹನ ಎಂತ ಎರಡು ವಿಧ. ಆ ಎರಡರಲ್ಲಿ ಐದು ಸೇರಿವೆ. ಯಾವವೆಂದರೆ 1 ನಸ್ಯ, 2. ಶಿರೋವಿರೇಚನ, 3. ಪ್ರತಿ ಮರ್ಷ, 4 ಅವಪೀಡ, ಮತ್ತು 5. ಪ್ರಧಮನ. ಇದರೊಳಗೆ ನಸ್ಯ ಮತ್ತು ಶಿರೋವಿರೇ ಚನ ಎಂಬವು ಪ್ರಧಾನವಾದವು. ಪ್ರತಿಮರ್ಶವ ನಸ್ಯದ ಭೇದ, ಅವಪೀಡ ಮತ್ತು ಪ್ರಧ ಮನ ಎಂಬವು ಶಿರೋವಿರೇಚನದ ಭೇದಗಳು, ಇವೈದಕ್ಕೂ ಸಾಮಾನ್ಯವಾಗಿ ನಸ್ಯ ಶಬ್ದವು ಉಪಯೋಗಿಸಲ್ಪಡುತ್ತದಾದರೂ, ವಿಶೇಷವಾಗಿ ನಸ್ಯ ಎನ್ನುವದು ತಲೆ ಶೂನ್ಯವಾದವರ ಸ್ನೇಹನಕ್ಕಾಗಿಯೂ, ಕುತ್ತಿಗೆ, ಭುಜ ಮತ್ತು ಎದೆಗಳಿಗೆ ಬಲಿಕೊಡುವದಕ್ಕಾಗಿಯೂ, ದೃಷ್ಟಿಯ ಪ್ರಸನ್ನತೆಯನ್ನುಂಟುಮಾಡುವದಕ್ಕೂ, ಕೊಡಲ್ಪಡುವ ಸ್ನೇಹಕ್ಕಾಗಿರುತ್ತದೆ. ಷರಾ ನಸ್ಯಕರ್ಮದಲ್ಲಿ ಸ್ನೇಹನ, ರೇಚನ ಎಂತ ಎರಡು ವಿಧ ಅವುಗಳಲ್ಲಿ ಸ್ನೇಹನವು ಪುಷ್ಟಿ ಕೊಡುವಂಥಾದ್ದು, ರೇಚನವು ಕೃಶತೆಯನ್ನುಂಟುಮಾಡುವಂಥಾದ್ದು (ಶಾ 156 ) 2. ಮರ್ಶಶ್ಚ ಪ್ರತಿಮರ್ಶಶ್ಚ ದ್ವಿಧಾ ಸ್ನೇಹೋತ್ರ ಮಾತ್ರಯಾ | ಕಲ್ಕಾರವಪೀಡಸ್ತು ತೀಕ್ಷ್ಯರ್ಮೂಧ್ರವಿರೇಚನಃ || ರ್ಶ: ಧ್ಯಾನಂ ವಿರೇಚನಕ್ರೂರ್ಣೋ ಯುಂಜಾಂ ಮುಖವಾಯುನಾ | ಅವಪೀಡ-ಧಮನ ಷಡಂಗುಲದ್ವಿಮುಖಯಾ ನಾಡ್ಯಾ ಭೇಷಜಗರ್ಭಯಾ | ಸ ಹಿ ಭೂರಿತರಂ ದೋಷಂ ಚೂರ್ಣತ್ಯಾದಪಕರ್ಷತಿ | (ವಾ. 95.) ಸ್ನೇಹನಸ್ಯದಲ್ಲಿ ಪ್ರಮಾಣಭೇದದ ಮೇಲೆ ಮರ್ಶ, ಪ್ರತಿಮರ್ಶ, ಎಂತ ಎರಡು ವಿಧ. ತೀಕ್ಷವಾದ ಕಲ್ಯಾದಿಗಳಿಂದ ತಯಾರಿಸಿದ ಶಿರೋವಿರೇಚನನಸ್ಯಕ್ಕೆ ಅವಪೀಡ ಎಂತಲೂ, ಚೂರ್ಣರೂಪವಾದ ವಿರೇಚನನಸ್ಯಕ್ಕೆ ಧ್ಯಾನ ಎಂತಲೂ ಹೆಸರು ಧ್ಯಾನದಲ್ಲಿ ಆರು ಅಂಗುಲ ಉದ್ದವಾದ, ಎರಡು ಬಾಯಿಗಳುಳ್ಳ, ನಳಿಗೆಯಲ್ಲಿ ಔಷಧವನ್ನು ತುಂಬಿಸಿ, ಆ ಮರ್ಶ-ಪ್ರತಿಮರ್ಶ, ಗಳ ಭೇದ 60