ಆ XXVI - 474 - ಚೂರ್ಣವನ್ನು ಬಾಯಿಯ ಗಾಳಿಯಿಂದ (ಊದಿ) ಉಪಯೋಗಿಸುವದಾಗಿರುತ್ತದೆ; ಅದು ಚೂರ್ಣರೂಪವಾದ್ದರಿಂದ ದೋಷವನ್ನು ಬಹಳವಾಗಿ ಹೊರಗೆ ಹಾಕುತ್ತದೆ. ಅರ್ಹರು 3. ತತ್ತು ನಸ್ಯಂ ದೇಯಂ ವಾತಾಭಿಭೂತೇ ಶಿರಸಿ ದಂತಕೇಶಶ್ಯಶ್ರು ಪ್ರಪಾತದಾರುಣಕರ್ಣಶೂಲಕರ್ಣಕ್ಕೆ ಇತಿಮಿರಸ್ಕರೋಪಘಾತ ಸ್ನೇಹನನಸ್ಯಕ್ಕೆ ನಾಸಾರೋಗಾಸ್ಯಶೋಷಾಪಬಾಹುಕಾಕಾಲಜವಲೀಪಲಿತಪ್ರಾ ದುರ್ಭಾವದಾರುಣಪ್ರಬಾಧೇಷು ವಾತಪೈತಿಕೇಷು ಮುಖಗೋಗೇಷ್ಟ ನೈಷು ಚ ವಾತಪಿತ್ತಹರದ್ರವ್ಯಸಿದ್ದೇನ ಸ್ನೇಹೇನೇತಿ | (ಸು. 594-95.) ಆ (ಸ್ನೇಹ) ನಸ್ಯವು, ತಲೆಯಲ್ಲಿ ವಾತದೋಷವು ಪ್ರಬಲವಾದಾಗ್ಗೆ, ಹಲ್ಲು, ಕೂದಲು ಮತ್ತು ಊಾಸೆ ಉದುರುವದು, ದಾರುಣ, ಕಿವಿಶೂಲೆ, ಕಿವಿಯಲ್ಲಿ ಶಬ್ದ, ತಿಮಿರ, ಸ್ವರಬೀಳು ವದು, ನಾಸಿಕಾರೋಗ, ಬಾಯಿಹುಣ್ಣು, ಅಪಬಾಹುಕ, ಅಕಾಲದಲ್ಲಿ ನೆರಿನರೆಗಳು ಕಾಣು ವದು, ಇವುಗಳ ಕರಿನವಾದ ಬಾಧೆಗಳಲ್ಲಿ ಮತ್ತು ವಾತಪಿತ್ತಗಳಿಂದ ಹುಟ್ಟಿದ ಬೇರೆ ಮುಖ ರೋಗಗಳಲ್ಲಿ, ವಾತಪಿತ್ತಹರವಾದ ದ್ರವ್ಯಗಳಿಂದ ತಯಾರಿಸಲ್ಪಟ್ಟ ಸ್ನೇಹದಿಂದ ಕೊಡಬೇಕಾ ದ್ದಾಗಿರುತ್ತದೆ. 4. ಶಿರೋವಿರೇಚನಂ ಶ್ರೇಷ್ಮಣಾಭಿವ್ಯಾ ತಾಲುಕರಶಿರಸಾಮರೋಚಕ ಶಿರೋಗೌರವಶೂಲಪೀನಸಾರ್ಧಾಭೇದಕಕೃಮಿಪ್ರತಿಶ್ಯಾಯಾಪಸ್ಮಾರ ತಿರೋವಿರೇಚನ ಗಂಧಾಜ್ಞಾನೇಷ್ಠ ನೈಷು ಚೋರ್ಧ್ವಜತ್ರುಗತೇಷು ಕಫಜೇಷು ವಿಕಾ ನಸ್ಯಕ್ಕೆ ಅರ್ಹರು ರೇಷು, ಶಿರೋವಿರೇಚನದ್ರವ್ಯಸ್ತತ್ಸದ್ದೇನ ವಾ ಸ್ನೇಹನೇತಿ | (ಸು. 595.) ತಾಲು, ಕಂರ ಮತ್ತು ತಲೆ, ಇವುಗಳಲ್ಲಿ ಕಫ ವ್ಯಾಪಿಸಿರುವವರಿಗೂ, ಅರುಚಿ, ತಲೆ ಭಾರ, ಶೂಲ, ಪೀನಸ, ಅರೆತಲೆಯ ಒಡತ, ಕೃಮಿ, ನೆಗಡಿ, ಅಪಸ್ಮಾರ, ವಾಸನೆ ತಿಳಿಯ ದಿರುವದು, ಈ ರೋಗಗಳಲ್ಲಿ ಯೂ, ಕಫದಿಂದ ಹುಟ್ಟಿದ ಕುತ್ತಿಗೆಯ ಮೇಲಕ್ಕೆ ನಿಂತಿರುವ ಬೇರೆ ಉಪದ್ರವಗಳಲ್ಲಿಯೂ, ಶಿರೋವಿರೇಚನ ಮಾಡಿಸತಕ್ಕ ದ್ರವ್ಯಗಳಿಂದಾಗಲಿ, ಅವುಗ ಳಿಂದ ತಯಾರಿಸಲ್ಪಟ್ಟ ಸ್ನೇಹದಿಂದಾಗಲಿ, ಶಿರೋವಿರೇಚನರೂಪವಾದ ನಸ್ಯವು ಉಪ ಯೋಗಿಸಲ್ಪಡಬೇಕಾದ್ದಾಗಿರುತ್ತದೆ. 5. ತತದ್ ದ್ವಿವಿಧಭುಕ್ತವತೋತನ್ನ ಕಾಲೇ ಪೂರ್ವಾಹ್ನ ಶ್ರೇಷ್ಮೆ ನಷ್ಟಗಳಿಗೆ ರೋಗಿಣಾಂ ಮಧ್ಯಾಹ್ನ ಪಿತ್ತರೂಗಿಣಾಮಪರಾಕ್ಷೇ ವಾತರೋಗಿ ಯೋಗ್ಯಕಾಲ ಣಾಂ | (ಸು. 595.) ಮೇಲೆ ಹೇಳಿದ ಎರಡು ವಿಧವಾದ (ಸೈಹಿಕ ಮತ್ತು ವೈರೇಚನಿಕ) ನಸ್ಯಗಳನ್ನು ಉಂಡಿರದವಗೆ ಅನ್ನಕಾಲದಲ್ಲಿ , ಕಫರೋಗಿಗಾದರೆ ಪೂರ್ವಾಹ್ನದಲ್ಲಿ, ಪಿತ್ತರೋಗಿಗಾದರೆ ಮಧ್ಯಾಹ್ನದಲ್ಲಿ, ಮತ್ತು ವಾತರೋಗಿಗಾದರೆ ಅಪರಾಕ್ತದಲ್ಲಿ, ಉಪಯೋಗಿಸತಕ್ಕದ್ದು.
ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೬೪
ಗೋಚರ