ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 475 - e XXVI ಪರಾ ಶರತ್ ಮತ್ತು ವಸಂತಋತುಗಳಲ್ಲಿಯೂ, ಸ್ವಸ್ಥನಿಗೂ ಪೂರ್ವಾಹ್ನ ದಲ್ಲಿ, ಹೇಮಂತ, ಶಿಶಿರ ಎಂಬ ಶೀತ ವಾದ ಋತುಗಳಲ್ಲಿ ಮಧ್ಯಾಹ್ನ ಕಾಲದಲ್ಲಿ, ಗ್ರೀಷ್ಮ ಋತುವಿನಲ್ಲಿ ಸಾಯಂಕಾಲ, ಮತ್ತು ವರ್ಷಋತುವಿನಲ್ಲಿ ಬಿಸಿಲು ಕಾಣುವ ದಿನದಲ್ಲಿ, ನಸ್ಯ ಉಪಯೋಗಿಸಬೇಕಾಗಿ ವಾ (ಪು 96 ) ರೋಗವು ಕಠಿನವಾದಲ್ಲಿ ರಾತ್ರಿಯಲ್ಲಿಯೂ ನಸ್ಯ ಮಾಡಬಹುದೆಂತ ಶಾ (ಪ 156 ) ಕ್ರಮ 6. ಅಧ ಪುರುಷಾಯ ಶಿರೋವಿರೇಚನೀಯಾಯ ದನಕಾಷ್ಠ ಧೂಮ ಪಾನಾಭ್ಯಾಂ ವಿಶುದ್ಧ ವಕ್ತಸ್ರೋತಸೇ ಪಾಣಿತಾಪಪರಿಸ್ತಿನ್ನಮೃದಿತ ಗಲಕಪೋಲಲಲಾಟಪ್ರದೇಶಾಯ ವಾತಾತಪರಜೋಹೀನವೇಶ್ನನ್ನು ತಿರೋವಿರೇಚನದ ತಾನಶಾಯಿನೇ ಪ್ರಸಾರಿತಕರಚರಣಾಯ ಕಿಂಚಿತೃವಿಲಂಬಿತಶಿರಸೇ ವಸ್ತಾಚ್ಛಾದಿತನೇತ್ರಾಯ ವಾಮಹಸ್ತಪ್ರದೇಶಿನ್ಯಗೊನ್ನಾಮಿತನಾ ಸಾಮ್ರಾಯ ವಿಶುದ್ಧ ಸೋತಸಿ ದಕ್ಷಿಣಹಸ್ತೆನ ಸ್ನೇಹಮೂಷ್ಟಾನು ತಪ್ತಂ ರಜತಸುವರ್ಣತಾಮ್ರ ಮೃತ್ಪಾತ್ರಶುಕೀನಾಮತಮಸ್ಸಂ ಶುಕ್ಕಾ ಪಿಚುನಾ ವಾ ಸುಖೋಷ್ಣಂ ಸ್ನೇಹಮದ್ರತಮಾಸಿಂಚೇದ ವಚ್ಛನಧಾರಂ ಯಧಾ ನೇತ್ರೇ ನ ಪ್ರಾಪ್ಪೋತಿ | ಸ್ನೇಹೇವಸಿಚ್ಯಮಾನೇ ತು ಶಿರೋ ನೈವ ಪ್ರಕಂಪಯೇತ್ | ನ ಕುತ್ಯೇನ್ನ ಪ್ರಭಾಷೇಚ್ಚ ನ ಕ್ಯೂಯಾನ್ನ ಹಸೇಧಾ || ಏತೈರ್ಹಿ ವಿಹಿತಃ ಸ್ನೇಹೋ ನ ಸಮ್ಯಕ್ ಪ್ರತಿಪದ್ಯತೇ | ತತಃ ಕಾಸಪ್ರತಿಶ್ಯಾಯಶಿರೋ5ಕ್ಷಿಗದಸಂಭವಃ || (ಸು 595 ) ಶಿರೋವಿರೇಚನ ಮಾಡಿಸಿಕೊಳ್ಳತಕ್ಕ ಪುರುಷನ ಬಾಯಿಯನ್ನು ದಂತಕಾಷ್ಠ ದಿಂದಲೂ, ಧೂಮಪಾನದಿಂದಲೂ, ಚೆನ್ನಾಗಿ ಶುದ್ಧ ಮಾಡಿಸಿ, ಗಂಟಲು, ಕಪಾಲ ಮತ್ತು ಹಣೆ ಪ್ರದೇಶ ಗಳನ್ನು ಕೈ ಬಿಸಿಯಿಂದ ಬೆವರಿಸಿ, ತಿಕ್ಕಿದ ಮೇಲೆ, ಅವನನ್ನು ಗಾಳಿ, ಬಿಸಿಲು ಮತ್ತು ದೂಳು ಇಲ್ಲದ ಕೋಣೆಯಲ್ಲಿ ಅಂಗಾತನೆ, ಕೈಕಾಲು ಚಾಚಿ, ತಲೆಯನ್ನು ಕಿಂಚಿತ್ತಾಗಿ ಮುಂದಕ್ಕೆ ಬಗ್ಗಿ ರುವಂತೆ ಮಲಗಿಸಿ, ಅವನ ಕಣ್ಣುಗಳನ್ನು ವಸ್ತ್ರದಿಂದ ಮುಚ್ಚಿ, ವೈದ್ಯನ ಎಡದ ಕೈಯ ಪ್ರದೇಶಿನೀ (ಹೆಬ್ಬೆಟ್ಟಿನ ಒತ್ತಿನ) ಬೆರಳಿನ ತುದಿಯಿಂದ ರೋಗಿಯ ಮೂಗಿನ ತುದಿಯನ್ನು ಎತ್ತಿ, ಸೊಳ್ಳೆಯನ್ನು ಚೆನ್ನಾಗಿ ಶುದ್ಧ ಮಾಡಿ, ಬಲದ ಕೈಯಿಂದ ಬೆಳ್ಳಿ, ಚಿನ್ನ, ತಾಮ್ರ, ಮಣ್ಣು ಇವುಗಳ ಪಾತ್ರಗಳು, ಚಿಪ್ಪು, ಇವುಗಳೊಳಗೆ ಯಾವದಾದರೊಂದರಲ್ಲಿರಿಸಿದ್ದ ಕಾಯಿಸಿದ ಸ್ನೇಹವನ್ನು ಚಿಪ್ಪಿನಿಂದಾಗಲಿ, ಹತ್ತಿಯಿಂದಾಗಲಿ, ಸುಖೋಷ್ಣವಾಗಿ, ಅವಸರವಿಲ್ಲದೆಯೂ, ಧಾರೆ ಕಡಿಯುವಂತೆಯೂ, ಸ್ನೇಹವು ಕಣ್ಣುಗಳಿಗೆ ಸೇರದ ಹಾಗೂ, ಹೊಯ್ಯಬೇಕು. ಸ್ನೇಹ ವನ್ನು ಹೊಯ್ಯುವ ಸಮಯದಲ್ಲಿ ರೋಗಿಯು ತಲೆಯನ್ನು ಅಲ್ಲಾಡಿಸಲೇ ಬಾರದು, ಕೋಪ ಗೊಳ್ಳಬಾರದು, ಮಾತನಾಡಬಾರದು, ಮೂಗಿನಿಂದ ಶ್ವಾಸ ಬಿಡಬಾರದು (ಮೂಗ ಸುರಿಯ ಬಾರದು), ಮತ್ತು ನಗಬಾರದು. ಈ ಅಪಚಾರಗಳಿಂದ ಹಾಕಿದ ಸ್ನೇಹವು ಸರಿಯಾಗಿ ಸೇರುವದಿ ಲ್ಲವಾದ್ದರಿಂದ, ಕೆಮ್ಮು, ಪೀನಸ, ಶಿರೋರೋಗಗಳು ಮತ್ತು ನೇತ್ರರೋಗಗಳು ಸಂಭವಿಸುವವು. ಷರಾ ಪಾದಗಳನ್ನು ಕಿಂಚಿತ್ತಾಗಿ ಎತ್ತರವಿಟ್ಟು ಕೊಳ್ಳಬೇಕಾಗಿಯೂ, ಒಂದು ಮೂಗಿನ ಹೊಳ್ಳೆಯನ್ನು ಮುಚ್ಚಿ ಇತರ ಸೊಳ್ಳೆಗೆ, ಹೀಗೆ ಪರ್ಯಾಯದಿಂದ, ಔಷಧವನ್ನು ಹಾಕಬೇಕಾಗಿಯೂ ವಾ (ಪು 96) ಕಷಾಯಾದಿಗಳ ನಸ್ಯೆ ವನ್ನು ಇದೇ ಕ್ರಮದಲ್ಲಿ ನಡಿಸತಕ್ಕದ್ದು (ಸಿ ಸಂ ವ್ಯಾ) 60*