ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 487 - ಅ. XXVII ಉಪಚಾರ ಲವಣಾಭ್ಯಕ್ಕಮುಖೀಂ ವಾಮಹಸ್ತಾಂಗುಲೀಭ್ಯಾಂ ಗೃಹೀತಪುಚ್ಚಾಂ ದಕ್ಷಿಣಹಸ್ತಾಂಗುಷ್ಟಾಂಗುಲೀಭ್ಯಾಂ ಶನೈತಿ ಶನೈರನುಲೋಮಮನುಮಾ ರ್ಜಿಯೇದಾಮುಖಾದ್ವಾಮಯೇತ್ರಾವದ್ಯಾವತ್ಸಮ್ಯಗ್ವಾಂತಲಿಂಗಾನೀ ತಿ | ಸಮ್ಯಗ್ವಾಂತಾ ಸಲಿಲಸರಕನ್ಯಾ ಭೋಕ್ತು ಕಾಮಾ ಸತೀ ಚರೇ ಕಚ್ಚಿದ ಜಗಳೆಗೆ ತ್ | ಯಾ ಸೀದತಿ ನ ಚೇಷ್ಟತೇ ಸಾ ದುರ್ವಾಂತಾ ತಾಂ ಪುನಃ ಸ ಮೃಗ್ರಾಮಯೇತ್ | ದುರ್ವಾಂತಾಯಾ ವ್ಯಾಧಿರಸಾಧ್ಯ ಇಂದ್ರಮ ದೋ ನಾಮ ಭವತಿ | ಅಧ ಸುವಾಂತಾಂ ಪೂರ್ವವತೃನ್ನಿದಧ್ಯಾತ್ ಶೋಣಿತಸ್ಯ ಚ ಯೋಗಾಯೋಗಾನವೇಕ ಜಲೌಕೋವ್ರಣಾಧು ನಾನಘಟ್ಟಯೇಚ್ಚತಾಭಿರಶ್ಚ ಪರಿಷೇಚಯೇದ್ ಬದ್ರಿತ ವಾ ವ್ರಣಂ ಕಷಾಯಮಧುರಸ್ನಿಗ್ಧಶೀತೃತ್ವ ಪ್ರದೇಹೈ ಪ್ರದಿಹ್ಯಾದಿತಿ | (ಸು. 46-47.) ಜಿಗಳೆಯು ರಕ್ತದ ವಾಸನೆಯಿಂದ ಹಿಡಿದದ್ದನ್ನು ಬಿಡುವದಿಲ್ಲ. ಆಗ್ಗೆ ಅದರ ಮುಖಕ್ಕೆ ಸೈಂಧವ ಉಪ್ಪಿನ ಚೂರ್ಣವನ್ನು ಚೆಲ್ಲಿದಲ್ಲಿ ಅದು ಬೀಳುತ್ತದೆ. ಆ ಮೇಲೆ ಅದರ ಶರೀರಕ್ಕೆ ಅಕ್ಕಿ ಪುಡಿಯನ್ನು ಲೇಪಿಸಿ, ಬಾಯಿಗೆ ತೈಲ ಮತ್ತು ಸೈಂಧವಲವಣವನ್ನು ಹಚ್ಚಿ, ಅದರ ಬಾಲ ವನ್ನು ಎಡದ ಕೈಯ ಬೆರಳುಗಳಿಂದ ಹಿಡಕೊಂಡು, ಬಲದ ಕೈಯ ಹೆಬ್ಬೆಟ್ಟು ಮತ್ತು ಬೆರಳಿಂದ ಮೆಲ್ಲ ಮೆಲ್ಲ ಗಾಗಿ ಕೆಳಗೆ ಬಾಯಿಯ ಕಡೆಗೆ ಒರಸಿ, ಬಾಯಿಯಿಂದ ವಾಂತಿಮಾಡಿಸಬೇಕು. ಈ ಕ್ರಮವನ್ನು ಚೆನ್ನಾಗಿ ವಾಂತಿಮಾಡಿದ ಲಕ್ಷಣಗಳು ಕಾಣುವ ವರೆಗೆ ನಡಿಸಬೇಕು. ಚೆನ್ನಾಗಿ ವಾಂತಿಮಾಡಿದ ಜಿಗಳೆಯನ್ನು ನೀರುಳ್ಳ ಕವಳಿಯೊಳಗೆ ಇಟ್ಟಲ್ಲಿ ಅದು ಉಣ್ಣುವ ಅಪೇಕ್ಷೆಯಿಂದ ಸಂಚರಿಸುವದು. ಅದು ಚಲಿಸದೆ ಜಡವಾಗಿದ್ದರೆ, ಅದು ವಾಂತಿಮಾಡಿದ್ದು ಸಾಲದೆಂತ ತಿಳಿದು, ಅದನ್ನು ಪುನಃ ಚೆನ್ನಾಗಿ ವಾಂತಿಮಾಡಿಸಬೇಕು. ಅದು ಸರಿಯಾಗಿ ವಾಂತಿಮಾಡದಿರುವದರಿಂದ (ಇಂದ್ರಮದ' ಎಂಬ ಹೆಸರಿನ ಅಸಾಧ್ಯವಾದ ವ್ಯಾಧಿ ಉಂಟಾ ಗುವದು. ಸರಿಯಾಗಿ ವಾಂತಿಮಾಡಿದ ಜಿಗಳೆಯನ್ನು ಮೊದಲಿನಂತೆ ಪಾತ್ರೆಯಲ್ಲಿ ಕ್ರಮದಂತೆ ಇರಿಸತಕ್ಕದ್ದು. ರಕ್ತವನ್ನು ತೆಗೆದದ್ದು ಸರಿಯಾಯಿತು ಅಧವಾ ಸಾಲದು ಎಂಬದನ್ನು ನೋಡಿ ಕೊಂಡು, ಜಿಗಳೆ ಕಚ್ಚಿದ ಗಾಯವನ್ನು ಜೇನು ಹಚ್ಚಿ ಕೂಡಿಸಿ, ಅದರ ಮೇಲೆ ತಣ್ಣಗಾದ ನೀರನ್ನು ಚಿಮುಕಿಸಬೇಕು. ಅಧವಾ ವ್ರಣವನ್ನು (ವಸ್ತ್ರದಿಂದ) ಕಟ್ಟಿ, ಚೊಗರು, ಸೀ, ಸ್ನಿಗ್ಧ ಮತ್ತು ಶೀತವಾದ ಲೇಪಗಳನ್ನು ಲೇಪಿಸತಕ್ಕದ್ದು.

  • ಷರಾ -ಜಿಗಳೆಗೆ ಗಂಧೇಂದ್ರಿಯವಿಲ್ಲದರಿಂದ, 'ಗರ್ದ್ದೆನ' (ಆಶೆಯಿಂದ) ಎಂಬ ಪಾರವಿರಬೇಕಂತ ಕೆಲವರ ಪಕ್ಷ ಉಂಟಾಗಿ ನಿ ಸಂ ವ್ಯಾ

ರಕ್ತಸ್ರಾವಣಹ 13. ಶೋಣಿತಂ ಸ್ರಾವಯೇಜ್ಜಮೈರಾಮಯಂ ಪ್ರಸವಿಾಕ್ಷ್ಯ ಚ | ರಕ್ತಸ್ರಾವಣಹ ಪ್ರಸ್ಥಂ ಪ್ರಸ್ಥಾರ್ದ್ದಕಂ ವಾಪಿ ಪ್ರಸ್ಥಾರ್ದ್ದಾರ್ದ್ದಮಧಾಪಿ ವಾ || (ಶಾ. 178.) ಪ್ರಮಾಣ ಮನುಷ್ಯನ ರೋಗವನ್ನು ನೋಡಿಕೊಂಡು, ಒಂದು ಪ್ರಸ್ಥ, ಅರ್ಧ ಪ್ರಸ್ಥ, ಅಧವಾ ಕಾಲು ಪ್ರಸ್ಥ ರಕ್ತವನ್ನು ಸುರಿಸಿ ತೆಗೆಯಬಹುದು.