ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೫೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

u XXVII - 486 -- ತೋರವಾದ ಮಧ್ಯವುಳ್ಳ, ಕೋಪಗೊಂಡ, ದೊಡ್ಡದಾದ, ಮಂದಗತಿಯುಳ್ಳ, ಹಿಡಿ ಯದ, ಅಲ್ಪವಾಗಿ ಕುಡಿಯುವ, ಮತ್ತು ವಿಷಜಾತಿಯ ಜಿಗಳೆಗಳು ಪೂಜ್ಯವಲ್ಲ. 11. ಅಧ ಜಲೌಕೋವಸೇಕಸಾಧ್ಯವ್ಯಾಧಿತಮುಸವೇಶ್ಯ ಸಂವೇಶ್ಯ ವಾ ವಿರೂಕ್ಷ ಚಾಸ್ಯ ತಮವಕಾಶಂ ಮೃಗ್ಗೋಮಯಚೂರ್ಣೋಯ್ರದ್ಯ ರುಜಃ ಸ್ಯಾತ್ | ಗೃಹೀತಾಶ್ವ ತಾಃ ಸರ್ಷಪರಜನೀಕಲ್ನೋದಕಪ್ರದಿಗ್ಧ ಗಾತ್ರೀಃ ಸಲಿಲಸರಕಮಧ್ಯೆ ಮುಹೂರ್ತಸ್ಥಿತಾ ವಿಗತಕ್ತಮಾ ಜ್ಞಾತ್ವಾ ತಾಭೀರೋಗಂ ಗ್ರಾಹಯೇತ್ | ಸೂಕ್ಷ್ಮಶುಕ್ಲಾದ್ರ್ರಪಿಚುಪೋತಾವ ಒಗಳೆಯನ್ನು ಚನ್ನಾಂ ಕೃತ್ವಾ ಮುಖಮಪಾವೃಣುಯಾದಗೃಷ್ಣಂತ್ಯೆ ಕ್ಷೀರಬಿಂದುಂ ಕಚ್ಚಿಸುವ ಎಧಿ ಗಳು ಶೋಣಿತಬಿಂದುಂ ವಾ ದದ್ಯಾಚ್ಛಸ್ತಪದಾನಿ ವಾ ಕುರ್ವೀತ ಯದ್ಭವಮ ಪಿನ ಗೃಘೀಯಾತ್ರದಾನ್ಯಾಂ ಗ್ರಾಹಯೇತ್ | ಯದಾ ಚ ನಿವಿಶತೇಶ್ವ ಖರವದಾನನಂ ಕೃತ್ವನ್ನ ಮೈ ಚ ಸಂಧಂ ತದಾ ಜಾನೀಯಾದ್ (ಕೃಷ್ಣಾ ತೀತಿ) ಕೃಷ್ಣಂತೀಂ ಚಾದ್ರ್ರವಸ್ತಾನಚನ್ನಾಂ ಧಾರಯೇತ್ಸೆಚ ಯೇಚ್ಛ | ದಂತೇ ತೋದಕಂಡುಪ್ರಾದುರ್ಭಾವೈರ್ಚಾನೀಯಾಚ್ಚುದ್ದ ಮಿ ಯಮಾದತ್ತ ಇತಿ ಶುದ್ಧವಾದದಾನಾಮಪನಯೇತ್ | (ಸು. 46.) ಜಿಗಳೆ ಕಚ್ಚಿಸಿ ರಕ್ತ ತೆಗೆಯುವದರಿಂದ ಸಾಧ್ಯವಾದ ರೋಗವುಳ್ಳ ಮನುಷ್ಯನನ್ನು ಕೂತುಕೊಳ್ಳಿಸಿ, ಅಧವಾ ಮಲಗಿಸಿ, ಅವನ ಆ ಸ್ಥಳದಲ್ಲಿ ನೋವಿಲ್ಲದಿದ್ದರೆ, ಅಲ್ಲಿ ಯ ಜಿಡ್ಡು ಹೋಗುವ ಹಾಗೆ ಮಣ್ಣು ಮತ್ತು ಸಗಣಿಯ ಚೂರ್ಣದಿಂದ ತಿಕ್ಕಬೇಕು. ಹಿಡಿದಿಟ್ಟ ಆ ಜಿಗಳೆಗಳ ಶರೀರಕ್ಕೆ ಸಾಸಿವೆ ಮತ್ತು ಅರಸಿನದ ಕಲ್ಕವನ್ನು ಕದಡಿದ ನೀರನ್ನು ಹಚ್ಚಿ, ಅವು ಗಳನ್ನು ನೀರು ತುಂಬಿದ ಕವಳಿಗೆಯಲ್ಲಿ ಒಂದು ಮುಹೂರ್ತಕಾಲ ಇರಿಸಬೇಕು. ಆ ಮೇಲೆ ಅವುಗಳ ಶ್ರಮ ಪರಿಹಾರವಾದ್ದನ್ನು ತಿಳಿದು, ಅವುಗಳಿಂದ ರೋಗವುಳ್ಳ ಸ್ಥಳವನ್ನು ಹಿಡಿಸ ಬೇಕು. ಸೂಕ್ಷ್ಮ ಮತ್ತು ಬಿಳೇದು ಆದ ಹತ್ತಿ ಅಥವಾ ವಸ್ತದ ತುಂಡನ್ನು ಒದ್ದೆ ಮಾಡಿ ಅದ ರಿಂದ ಜಿಗಳೆಯನ್ನು ಮುಚ್ಚಿ ಹಿಡಕೊಂಡು, ಅದರ ಮುಖವನ್ನು ತೆರೆಯಬೇಕು. ಆಗ್ಗೆ ಅದು ಹಿಡಿಯದಿದ್ದರೆ ಒಂದು ಬಿಂದು ಹಾಲನ್ನಾಗಲಿ, ರಕ್ತವನ್ನಾಗಲಿ, ಬಿಡಬೇಕು. ಅಧವಾ ಶಸ್ತ್ರ ದಿಂದ ಗೀರಿ ಗುರುತುಗಳನ್ನು ಮಾಡಬೇಕು ಹೀಗೆ ಮಾಡಿದಾಗ್ಯೂ, ಅದು ಹಿಡಿಯದಿದ್ದರೆ, ಅದನ್ನು ಬಿಟ್ಟು ಬೇರೊಂದನ್ನು ಹಿಡಿಸಬೇಕು. ಯಾವಾಗ ಅದು ಕುದುರೆ ಕಾಲ ಗೊರಸಿನಂತೆ ಬಾಯಿಯನ್ನು ಬಿಡಿಸಿಕೊಂಡು, ದೇಹವನ್ನು ಎತ್ತಿಕೊಂಡು, ಹಿಡಿಯುತ್ತದೋ, ಆಗ್ಗೆ ಅದು ರಕ್ತವನ್ನು ಹೀರುತ್ತದೆಂತ ತಿಳಿದು, ಅದನ್ನು ಒದ್ದೆ ವಸ್ತ್ರದಿಂದ ಮುಚ್ಚಿ ಹಿಡಕೊಂಡು, ಅದರ ಮೇಲೆ ನೀರು ಬಿಡಬೇಕು. ಗಾಯದಲ್ಲಿ ನೋವು ಮತ್ತು ತುರಿಕೆ ಹೊರಟರೆ, ಜಿಗಳೆಯು ಶುದ್ಧವಾದ ರಕ್ತವನ್ನೇ ಕುಡಿಯುತ್ತದೆಂದು ತಿಳಿದು ಅದನ್ನು ಬಿಡಿಸಿಬಿಡಬೇಕು.

  • ಮುಚ್ಚಬೇಕು' ಎಂದರ್ಥವಾಗಿ ನಿ ಸಂ ವ್ಯಾ 12. ಅಧ ಶೋಣಿತಗಂಧೇನ ನ ಮುಂಚೇನ್ನುಖಮಸ್ಯಾತಿ ಸೈಂಧವಚೂರ್ಣೇ

ನಾವಕಿರೇತ್ | ಅಧ ಪತಿತಾಂ ತಂಡುಲಕಂಡನಪ್ರದಿಗ್ಧ ಗಾತ್ರೀಂ ತೈಲ