ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

LX ಉಪೋದ್ಘಾತ.

ಇಲ್ಲವಾದ್ದರಿಂದ, ಅವರ ಔಷಧಗಳ ಗಣವು ಸಾಕಷ್ಟು ಅಭಿವೃದ್ಧಿ ಇಲ್ಲದಿರುವದಾಗಿದೆ ಇದನ್ನು ತಮ್ಮಲ್ಲಿಯ ಒಂದು ಕೊರತೆ ಎಂತ ಎಣಿಸುವದಕ್ಕೆ ಬದಲಾಗಿ, ದೇಶೀಯರು ಉಪ ಯೋಗಿಸುವ ಔಷಧಗಣವು ಬಹು ವಿಸ್ತಾರವಾಗಿರುವದೇ ಆಯುರ್ವೇದದ ಒಂದು ದೋಷ ಎಂತ ಹೇಳಲಿಕ್ಕೆ ತೊಡಗಿದ್ದಾರೆ. ಈ ಮನುಷ್ಯದೇಹವು ದ್ರವ್ಯಾಶ್ರಯ ಎಂಬದು ಸಿದ್ಧಾಂತ. ಪ್ರತಿ ದ್ರವ್ಯದಲ್ಲಿಯೂ ಷಡ್ರಸಗಳೊಳಗಿನ ರಸಗಳು ಪ್ರಮಾಣಭೇದದಿಂದ ಸಹ ಸಿದ್ಧಾಂತ. ಆ ದ್ರವ್ಯಾಶ್ರಯವಾದ ರಸಗಳು ತಕ್ಕ ಕ್ರಮದಲ್ಲಿ ಈ ದೇಹಕ್ಕೆ ಸೇರಿದರೆ ದುಃಖಕ್ಕೂ, ಅಂದರೆ ಆರೋಗ್ಯಕ್ಕೂ, ಕ್ರಮಕ್ಕೆ ಹೆಚ್ಚು ಕಡಿಮೆಯಾಗಿ ದುಃಖಕ್ಕೂ, ಅಂದರೆ ರೋಗಕ್ಕೂ, ಕಾರಣವಾಗುತ್ತವೆ ಎಂಬ ಆಯುರ್ವೇದದ ತತ್ವವನ್ನು ಕುರಿತು ಯಾರೂ ಸಂದೇಹಪಡಲು ಕಾರಣವಿಲ್ಲ. ಉಪ್ಪು, ಹುಳಿ, ಖಾರ, ಸೀ, ಚೊಗರು ಮತ್ತು ಕಹಿ ರಸಗಳಲ್ಲಿ ಯಾವದಾದರೂ ಒಂದು ಅತಿಯಾಗಿದ್ದ ಆಹಾರವನ್ನು ನಾವು ಸೇವಿಸಿದ ಕೂಡಲೇ ಬಾಯಾರಿಕೆ ಅಥವಾ ಬೇರೆ ಅಸುಖ ಉಂಟಾಗುವದು ನಮ್ಮ ನಿತ್ಯಾನುಭವ. ಬಾಯಾರಿಕೆ ಯಾಗುವದು ಆ ಅತಿಯಾದ ರಸವನ್ನು ತೆಳ್ಳಗೆಮಾಡಿ, ಅದರ ಪ್ರಾಬಲ್ಯವನ್ನು ತಗ್ಗಿಸಿ, ಅದರ ಪಚನವನ್ನು ಸಾಧಿಸುವದಕ್ಕಾಗಿರುತ್ತದೆ ಆ ರುಚಿಭೇದವು ಆಯಾ ದ್ರವ್ಯದಲ್ಲಿರುವ ಸ್ಪಧೀಅಪ್- ತೇಜ8- ಆಕಾಶ ವಾಯು ಎಂಬ ಮಹಾಭೂತಗಳ ಪ್ರಮಾಣಭೇದವನ್ನು ಸೂಚಿಸುತ್ತದೆಯಾಗಿ ನಮ್ಮ ಮಹರ್ಷಿಗಳು ಕಂಡುಹಿಡಿದಿದ್ದಾರೆ. ಹಾಗಾದ ಮೇಲೆ ಪ್ರತಿ ದ್ರವ್ಯವು ಯಾವನಾದರೂಬ್ಬನಿಗೆ ಯಾವದಾದರೊಂದು ಸಂಗತಿಯಲ್ಲಿ ಔಷಧವಾಗಲೇ ಬೇಕಲ್ಲವೋ? ಸೃಷ್ಟಿಯಲ್ಲಿ ದ್ರವ್ಯಗಳು ಹ್ಯಾಗೆ ಅಸಂಖ್ಯೆ, ಹಾಗೆಯೇ ಆರೇ ರಸಗಳ ತರ-ತಮ-ಯೋಗಗಳಿಂದುಂಟಾಗುವ ರಸಭೇದಗಳು ಸಹ ಅಸಂಖ್ಯೆಯ ಇಂಧಾ ಸೂಕ್ಷ್ಮಭೇದಗಳನ್ನು ಭಾವಿಸುವದಕ್ಕೆ ಸಹಾಯವಾಗುವಂತೆ ಮನುಷ್ಯನ ಹೆಬ್ಬೆಟ್ಟುಗಳ ರೇಖಾಭೇದದ ಉಪಮೆಯನ್ನು ಕೊಡಬಹುದು. ಎಷ್ಟೋ ಲಕ್ಷ ಸಂಖ್ಯೆಯ ಜನರ ಹೆಬ್ಬೆಟ್ಟುಗಳ ಮುದ್ರೆಗಳನ್ನು ತೆಗೆದು ಹೋಲಿಸಿನೋಡಿ, ಪ್ರತಿಯೊಂದರ ರೇಖೆಗಳಲ್ಲಿಯೂ ಸೂಕ್ಷ್ಮವಾದ ಭೇದ ವುಂಟೆಂತ ನಿರ್ಣಯಿಸಿದ್ದಾರೆ. ಇಂಧಾ ಸೂಕ್ಷ್ಮಭೇದ ಪ್ರತಿ ಮನುಷ್ಯನಲ್ಲಿಯೂ, ಪ್ರತಿ ದ್ರವ ದಲ್ಲಿಯೂ, ಪ್ರತಿ ದ್ರವ್ಯದ ರಸದಲ್ಲಿಯೂ, ಪ್ರತಿ ರೋಗದಲ್ಲಿಯೂ ಇದ್ದೇ ಇದೆ. ಈ ಭೇದವೇ ಪ್ರತಿ ರೋಗಿಗೂ ಪ್ರತಿ ವೈದ್ಯನಿಗೂ ಚಿಕಿತ್ಸೆಯಲ್ಲಿ ಕಷ್ಟ ಕೊಡುವಂಥಾದ್ದು. ಈ ಭೇದವಿಲ್ಲ ದಿದ್ದರೆ ವೈದ್ಯರ ಆವಶ್ಯಕತೆ ಪ್ರಾಯಶಃ ಇರಲಾರದು. ಈ ಭೇದವನ್ನು ಸಾಮಾನ್ಯವಾದ ವೈದ್ಯರಾಗಲಿ ಡಾಕ್ಟರರಾಗಲಿ ಆಲೋಚಿಸದೆ ಸಾಧಾರಣ ಚಿಕಿತ್ಸೆ ನಡಿಸುವದೇ ಅವರ ವೈದ್ಯದ ಮುಖ್ಯ ದೋಷವೆಂತ ತಿಳಿಯಬೇಕು. ರಸಗಳೊಳಗೆ ಪರಸ್ಪರ ವಿರುದ್ದ ವಾದವು, ವೀರ್ಯವಿರುದ್ಧವಾದವು, ವಿಪಾಕವಿರುದ್ಧವಾದವು ಮುಂತಾದ, ಔಷಧಯೋಗಕಲ್ಪನೆಗೆ ಬೇಕಾದ, ಅನೇಕ ವಿವರಗಳು ಆಯುರ್ವೇದದಲ್ಲಿ ವರ್ಣಿಸಲ್ಪಟ್ಟಿರುತ್ತವೆ. 17. ಜ್ವರವು ಒಂದು ಪ್ರತ್ಯೇಕ ರೋಗವಾಗಿ ಆಯುರ್ವೇದದಲ್ಲಿ ಗಣನೆ ಮಾಡಲ್ಪಟ್ಟದ್ದು ಶಾಸ್ತ್ರೀಯವಲ್ಲ ಎಂಬ ದೋಷಾರೋಪಣವನ್ನು ಡಾಕ್ಟರ್ ಕೋಮನ್‌ನವರು ಸಹ ಎತ್ತಿದ್ದಾರಾದ್ದರಿಂದ, ಆ ಪ್ರಮೇಯವನ್ನು ಆಲೋಚಿಸಬೇಕಾಯಿತು. ಆಯುರ್ವೇದ ಪ್ರಕಾರ ಯಾವ ರೋಗದಲ್ಲಿಯಾದರೂ ವಾತ-ಪಿತ್ತ-ಕಫಗಳ ವಿಷಮ ಸ್ಥಿತಿ ಕಾಣುತ್ತದೆ ಮತ್ತು ಆ ವಾತ-ಪಿತ್ತ, ಕಫಗಳಲ್ಲಿ ವಿಷಮಾವಸ್ಥೆ ಹೊಂದಿದವುಗಳನ್ನು ಸ್ವಸ್ಥ ಸ್ಥಿತಿಗೆ ತರುವದೇ