ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LXII

               ಉಪೋದ್ಘಾತ

18. ಈಗ ಪಾಶ್ಚಾತ್ಯವೈದ್ಯರ ಜ್ವರಚಿಕಿತ್ಸೆಯ ಅವಸ್ಥೆಯನ್ನು ಸ್ವಲ್ಪ ವಿಚಾರಿಸುವ. ಈ ಪ್ರಕರಣಕ್ಕೆ ಇದರ ಪ್ರಾಂತದಲ್ಲಿ ಹೆಸರು ಕಾಣಿಸಿದ ಮೂರು ಪುಸ್ತಕಗಳನ್ನು ಆಧಾರ ವಾಗಿ ತೆಗೆದುಕೊಂಡಿದ್ದೇವೆ. ಅವುಗಳೊಳಗೆ ಒಂದನೇದು 1876-79ನೇ ಇಸವಿಗಳಲ್ಲಿ ಐದು ಭಾಗಗಳಾಗಿ ರಚಿತವಾದ 4860 ಪುಟಗಳುಳ್ಳ ಪ್ರಸಿದ್ದ ವೈದ್ಯಗ್ರಂಧ, ಎರಡನೇದು 1903 ನೇ ಇಸವಿಯಲ್ಲಿ ಪ್ರಕಟವಾಗಿ, ಅದು ಬಹು ಪ್ರಯೋಜನಕರ 1 A System of Medicine? hy Reynolda vul U ವಾದದ್ದೆಂಬದರಿಂದ ಸರಕಾರದವರು ಅದರ ಪ್ರತಿಗಳನ್ನು ! Moore's Family Medಲು ಕೊಂಡುಕೊಂಡು ಕಡಿಮೆ ಕ್ರಯದಲ್ಲಿ ತಮ್ಮ ನೌಕರರು and Ilygiene for India 3 'l he Principles and Praı tice ಮುಂತಾದವರಿಗೆ ವಿಕ್ರಯಿಸಿದ್ದಾರೆ; 3ನೇದು ಅದ್ಯಾಪಿ of Medicine by (slei and ದಾಕ್ಟರರು ಆಧಾರವಾಗಿಟ್ಟುಕೊಳ್ಳುವ ಪುಸ್ತಕಗಳೊಳ M ('re ಗೊಂದಾಗಿ, 1920ನೇ ಇಸವಿಯಲ್ಲಿ ಪ್ರಕಟವಾದ ಪ್ರಸಿದ್ದ ವೈದ್ಯ ಕಗ್ರಂಧ ಈಗ, ಆಯುರ್ವೇದದಲ್ಲಿ ವಿವರಿಸಲ್ಪಟ್ಟ ಪಂಚವಿಧವಾದ ವಿಷಮ ಜ್ವರವನ್ನು ಪಾಶ್ಚಾತ್ಯರು 'ಮಲೇರಿಯಲ್' ಎಂಬ ಸಾಮಾನ್ಯ ಹೆಸರಿನಿಂದ ಅದೇ ರೀತಿ ವರ್ಣಸಿ ದ್ದಾರೆಂತ ಹಿಂದೆ ಹೇಳಿದೆ ಆಗಂತು, ಅನ್ಯ ಲಕ್ಷಣ ಮತ್ತು ಉಪದ್ರವರೂಪವಾದ ಜ್ವರ ಜಾತಿಗಳನ್ನು ಎರಡು ಕ್ರಮಗಳಲ್ಲಿಯೂ ಪ್ರತ್ಯೇಕವಾಗಿಯೇ ವರ್ಣಿಸಿದ್ದಾರ ಉಳಿದ ವಾತಾದಿ ಪೃಧಕ 3, ದ್ವಂದ್ವ 3, ಸನ್ನಿಪಾತ 13, ಜ್ವಾರಾತಿಸಾರ 1, ಸಹ 20 ಜ್ವರಗಳ ಸ್ಥಾನ ದಲ್ಲಿ ಪಾಶ್ಚಾತ್ಯ ವೈದ್ಯದಲ್ಲಿ ಟಾಯ್ದೆಯ್ ಎಂಬ ಒಂದೇ ವರ್ಗ ಕಾಣುತ್ತದೆ. ಅವರ ವಿಚಾರದಲ್ಲಿ ನಿರ್ವಿವಾದವಾದ ಆಗಂತು ಮುಂತಾದ ವರ್ಗಗಳೊಳಗೆ ಸೇರದ್ದಾದ ಬಿಡದೆ ಬರುವ ಜ್ವರವು ವಿಷಮಲಾತಿಗಳೊಳಗೊಂದಾದ ಸಂತತ (Remittent) ಅಲ್ಲವಾದರೆ, ಅದು ಟಾಯ್ಕೆಯ್ದೆ ಆಗಿರಬೇಕು ಬಿಳೇ ಜನರಲ್ಲಿ ಟಾಯ್ಫೊಯ್ಡ್ ಜ್ವರದ ಆರಂಭದಿನದಿಂದ 7ನೇ 10ನೇ ದಿನಗಳ ಮಧ್ಯ ಹೊಟ್ಟೆ, ಬೆನ್ನು ಮುಂತಾದ ಅಂಗಗಳಲ್ಲಿ ಒತ್ತಿದರೆ ಅಡಗುವೆ, 2-3 ದಿನಗಳಲ್ಲಿ ತನ್ನಂತೆ ಕಾಣದೆ ಹೋಗುವ ಮತ್ತು ಗುಲಾಬಿ ಕೆಂಪು ವರ್ಣದ ದಡಿಕೆಗಳು ಹೆಚ್ಚು ಕಡಿಮೆಯಾಗಿ ಏಳುತ್ತವೆ ಈ ಲಕ್ಷಣ ಈ ದೇಶದ ಜನರಲ್ಲಿ ಪ್ರಾಯಶಃ ಕಾಣುವದಿಲ್ಲವಂತೆ. ಈ ಛೇದಕ್ಕೆ ಕಾರಣ ಗೊತ್ತಾಗಲಿಲ್ಲ. ಕೆಲವರು ಇಲ್ಲಿಯ ಜನರ ಶ್ಯಾಮವರ್ಣದ ದೆಸೆಯಿಂದ ಆ ದಡಿಕ ಗಳು ದೃಷ್ಟಿಗೋಚರವಾಗದೆ ಹೋಗುತ್ತವೆಂತ ಸಮಾಧಾನ ಹೇಳುವದುಂಟು. ಆದರೆ ಭಾರತೀಯರೆಲ್ಲರು ಶ್ಯಾಮವರ್ಣದವರಾಗಿರುವದಿಲ್ಲ, ಹಾಗಿದ್ದರೂ, ಆ ದಡಿಕೆ ಏಳುವ ಲಕ್ಷಣ ಈ ದೇಶದಲ್ಲಿ ರೋಗದ ನಿದಾನನಿರ್ಣಯಕ್ಕೆ ಸಾರ್ಧಕವೆಲ್ಲ ಎಂತ ಅವರೇ ಹೇಳುತ್ತಾರೆ. ಆ ಲಕ್ಷಣವಲ್ಲದೆ ಬೇರೆ ಟಾಯ್ಫೊಯ್ಡ್ ಗೂ ಸಂತತಕ್ಕೂ ಇರುವ ಭೇದವನ್ನು ನಿಃಸಂಶಯವಾಗಿ ತಿಳಿಸತಕ್ಕ ಲಕ್ಷಣ ಯಾವದೂ ಇಲ್ಲ ಟಾಯ್ಫೊಯ್ಡ್ ಜ್ವರದ ಪರೀಕ್ಷೆ ವಿಷಯದಲ್ಲಿ 1920ನೇ ಇಸವಿಯ ಪುಸ್ತಕದಲ್ಲಿ ಈ ಕೆಳಗಣ ಅರ್ಧದ ಮಾತುಗಳಿವೆ - “ಲಕ್ಷಿಸಲಿಕ್ಕೆ ಅನೇಕ ಅಂಶ ಗಳು ಇವೆ ಪ್ರಥಮತಃ, ಬಿಡದೇ ಕಾದು ಬರುವ ಎಲ್ಲಾ ಜ್ವರಗಳಲ್ಲಿ ಟಾಯ್ಫೊಯ್ಡ್ ಜ್ವರವು ಅತ್ಯಂತ ಸಾಮಾನ್ಯವಾಗಿರುತ್ತದೆ. ಎರಡನೇದು, ಅದರ ಲಕ್ಷಣಗಳು ವಿಶೇಷವಾಗಿ ಅಸ್ಥಿರ ವಾಗಿವೆ ಮೂರನೇದು, ಈ ಜ್ವರವೂ ವಿಷಮಜ್ವರವೂ ಕೂಡಿಕೊಂಡ ರೋಗ ಎಂಬಂಧಾದ್ದಿಲ್ಲ. ನಾಲ್ಕನೇದು, ಅತ್ಯಂತ ಅನುಕೂಲವಾದ ಸಂದರ್ಭಗಳಲ್ಲಿ ಸಹ ಇದರ ಪರೀಕ್ಷೆಯಲ್ಲಿ ತಪ್ಪು ಗಳುಂಟಾಗದೆ ಇರಲಿಕ್ಕೆ ಸಾಧ್ಯವಿಲ್ಲ.” ಜ್ವರವು ಒಂದು ಹಸ್ತೆ ಅಧವಾ ಹೆಚ್ಚು ಕಾಲ ಏರಿ