ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.




LA11

              ಉಪೋದ್ಘಾತ

ರಕ್ತದ ಕೆಂಪುಜಾತಿಯ ಜೀವಬೀಜಗಳಿಗೆ ಬಂದಣಿಗೆರೂಪವಾಗಿ ಹಿಡಕೊಳ್ಳುವ ಒಂದು ಸಜೀವವಸ್ತು ಅಥವಾ ಕ್ರಿಮಿ: ಅದು ಹೆಣ್ಣುನುಸಿಗಳ ಕಚ್ಚುವಿಕೆಗಳಿಂದ, ಅಥವಾ ನೀರಿನಿಂದ, ಅಥವಾ ಗಾಳಿಯಿಂದ, ಮನುಷ್ಯರ ರಕ್ತಕ್ಕೆ ಸೇರುವಂಧಾದ್ದು, ಆ ವಸ್ತು ಕಠಿಣವಾದ ಜ್ವರದ ಪೀಡೆಯನ್ನು ಎಂದೂ ಅನುಭವಿಸದ ಮನುಷ್ಯನ ರಕ್ತದ ಕೆಂಪು ಬೀಜಗಳಲ್ಲಿ ಸಹ ಪರೀಕ್ಷೆಗೆ ಸಿಕ್ಕಿಯದೆ, ಇತ್ಯಾದಿ ಮತ ಕಾಣುತ್ತದೆ. ಈ ಎರಡು ಪುಸ್ತಕಗಳಲ್ಲಿಯೂ ವಿಷಮಜ್ವರವು ಸಂತತವಾಗಿ ಪೀಡಿಸುವದಕ್ಕೆ ವಿಷವು ಅತಿಯಾಗಿ ಸೇರಿಕೊಳ್ಳುವದೇ ಮುಖ್ಯ ಕಾರಣವಾಗಿ ಹೇಳಲ್ಪಟ್ಟಿದೆ. ಆ ವಿಷಕಾರಣವಾದ ಕ್ರಿಮಿಯಲ್ಲಿ ಭೇದಗಳಿವೆ ಎಂತ ಮಾತ್ರ 1903ನೇ ಇಸವಿಯ ಪುಸ್ತಕದಲ್ಲಿ ಸೂಚಿತವಾಗಿದೆ 1920ನೇ ಇಸವಿಯ ಗ್ರಂಧದಲ್ಲಿ, ತ್ರ್ಯಾಹಿಕಜ್ವರಕ್ಕೆ ಕಾರಣವಾದ ಕ್ರಿಮಿ ಒಂದು, ಚಾತುರ್ಥಿಕಜ್ವರಕ್ಕೆ ಕಾರಣವಾದ ಕ್ರಿಮಿ ಒಂದು, ಸಂತತ ಜ್ವರಕ್ಕೆ ಕಾರಣವಾದ ಕ್ರಿಮಿ ಒಂದು, ಕಣಜಾತಿಯ ವಿಷಮಜ್ವರದಲ್ಲಿ ಕಾಣುವ ಕ್ರಿಮಿ ಒಂದು, ಹೀಗೆ ನಾಲ್ಕು ಬೇರೆಬೇರೆ ಕ್ರಿಮಿಗಳು ಇವೆ, ಮನುಷ್ಯನ ಶರೀರದೊಳಗೆ ಸೇರಿದ ಈ ಕ್ರಿಮಿಗಳು ತಮ್ಮ ಸಂತತಿಯನ್ನು ವೃದ್ಧಿಮಾಡುವ ಕಾಲದಲ್ಲಿ ಆ ಮನುಷ್ಯನಿಗೆ ಚಳಿ ಆರಂಭಿಸುವಂಧಾದ್ದು, ಸಂತತ, ಅನ್ಯೋದ್ಯು, ಇತ್ಯಾದಿ ಭೇದಗಳು ಆಗಲಿಕ್ಕೆ ದೇಹದಲ್ಲಿ ತ್ರಾಹಿಕ ಹೇತುವಾದ ಕ್ರಿಯಗಳು ಮತ್ತು ಚಾತುರ್ಧಿಕ ಹೇತುವಾದ ಕ್ರಿಮಿಗಳು ಸಹ ಸೇರಿಕೊಂಡಿರುವದರಿಂದ, ಅಥವಾ ಒಂದೇ ಜಾತಿಯ ಕ್ರಿಮಿಗಳು ಬೇರೆಬೇರೆ ಗುಂಪುಗಳಾಗಿ ನಿಂತಿದ್ದು, ಆ ಗುಂಪುಗಳಿಗೆ ಬೇರೆ ಬೇರೆ ವೃದ್ಧಿಕಾಲಎರುವದರಿಂದ ಕಾರಣವಾಗಿರಬೇಕು, ಆ ಕ್ರಿಮಿಗಳು ಒಬ್ಬ ಮನುಷ್ಯನ ದೇಹದಲ್ಲಿದ್ದಾಗ್ಯೂ. ಅವನಿಗೆ ಜ್ವರ ಬಾರದಿರಬಹುದು, ಆ ಕ್ರಿಮಿಗಳು ನುಸಿಗಳಲ್ಲಿಯೂ, ಮನುಷ್ಯರಲ್ಲಿಯೂ ಅಲ್ಲದೆ ಬೇರೆ ಎಲ್ಲಿಯೂ ಕಾಣಲಿಕ್ಕೆ ಸಿಕ್ಕಿದ್ದಿಲ್ಲ, ಅವುಗಳು ನುಸಿಗಳ ಕಚ್ಚುವಿಕಗಳಿಂದಲೇ ಅಲ್ಲದೆ ಬೇರೆ ಎಧವಾಗಿ ಮನುಷ್ಯರ ಶರೀರವನ್ನು ಪ್ರವೇಶಿಸುವದಿಲ್ಲ; ಒಮ್ಮ ಎಷಮಜ್ವರ ಬಂದು ಗುಣವಾಗಿ ಎಷ್ಟೋ ತಿಂಗಳುಗಳು, ಅಧವಾ ವರ್ಷಗಳು, ಕಳದ ಮೇಲೆ ಪುನ: ವಿಷ ತಾಗದೆನೇ ಮರುಕಳಿಸಿ ಬರುವ ಜ್ವರಕ್ಕೆ ಕಾರಣ ಹೇಳುವದು ಕಷ್ಟ; ರಕ್ತದ ಪರೀಕ್ಷ ಎನಾ ಜ್ಜರವ್ವು ಟಾಯ್ಫೋಯ್ದೋ, ಸಂತತವೋ, ಎಂತ ನಿಶ್ಚಯಿಸುವದು ಅಸಾಧ್ಯ ವಾಗುವ ಸಂದರ್ಭಗಳು ಇವೆ, ರಕ್ತವನ್ನು ಪರೀಕ್ಷಿಸಿ ಆ ಕ್ರಿಮಿಗಳನ್ನು ಹುಡುಕಿತೆಗೆಯುವದು ಬಹಳ ಶ್ರಮವುಳ್ಳ ಮತ್ತು ಪ್ರಾಯಶಃ ಅಸಾಧ್ಯವಾದ ಕೆಲಸ, ಇತ್ಯಾದಿ ಮತ ಕಾಣುತ್ತದೆ.ಆ ಪುಸ್ತಕ ಮುದ್ರಿತವಾದನಂತರ ಇಷ್ಟರಲ್ಲಿಯೇ ಎಷ್ಟೆಲ್ಲ ವಿಚಾರ ನಡದಿದೆಯೋ ತಿಳಿಯ ಬೇಕಷ್ಟೆ ಹೀಗೆ, ಎಷಮಜ್ವರದ ಬೇರೆಬೇರೆ ಜಾತಿಗೆ ಬೇಬೇರೆ ಸಿದಾನವನ್ನು ಕಂಡುಹಿದಡವಾಗೂ, ಚಿಕಿತ್ಸಾಭಾಗದಲ್ಲಿ ಆ ಎಲ್ಲಾ ವಿಷಮಜ್ವರಗಳಿಗೂ ಕ್ವಿನಿಸು ಒಂದು ಅಲ್ಲದೆ ಬೇರೆ ಔಷಧವಿಲ್ಲ ಎಂಬ ಅಭಿಪ್ರಾಯವೇ ಬಲಪಟ್ಟಿದೆ. ಸಂತತಿ ವೃದ್ಧಿಯಾಗುವ ಕಾಲದಲ್ಲಿ ಕ್ರಿಮಿ ಗಳು ಪ್ರತ್ಯೇಕವಾಗಿ ರಕ್ತದಲ್ಲಿರುತ್ತವಯಾದ್ದರಿಂದ, ಆಗ್ಗೆ ಅವುಗಳನ್ನು ಕ್ವಿನೀನು ಸುಲಭವಾಗಿ ಕೊಲ್ಲುತ್ತದೆ, ಆದ್ದರಿಂದ ಚಳಿ ತೊಡಗುವಾಗ್ಗೆ ಮತ್ತು ಅದಕ್ಕೆ ಮೊದಲು ಧಾರಾಳವಾಗಿ ಕ್ವಿನೀ ನನ್ನು ಕೂಡಬೇಕು, ಆ ಕಾಲ ಬರುವದರೊಳಗೆ ಪ್ರತಿದಿನ 10-30 ಗೈನ್ ವರೆಗೆ ಸರ್ತಿಗ ಳಿಂದ 3 ದಿನಗಳ ವರೆಗೆ ಕ್ವಿನೀನನ್ನು ಕೊಡಬೇಕು, ಅನಂತರ ಕಡಿಮೆ ಪ್ರಮಾಣದಲ್ಲಿ ಎರಡು ಮೂರು ಹಸ್ತೆಗಳು ಕಳೆಯುವ ವರೆಗೆ ಕ್ವಿನೀನನ್ನು ಕೊಡುತ್ತಾ ಬರುವದು ಒಳ್ಳೇದು, ಸಂತತ ರೂಪವಾದ ಜ್ವರದ ಕಠಿಣ ಸ್ಥಿತಿ ದಾಟಿದ ಮೇಲೆ ಆರು ಹಸ್ತೆಗಳ ವರೆಗೆ ಪ್ರತಿದಿನ ಸಣ್ಣ