ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ IXXl11 ಸ್ಥಾಪಿಸತಕ್ಕಂಧಾದ್ದು. ಪಾಶ್ಚಾತ್ಯ ವೈದ್ಯದಲ್ಲಿಯೂ ಮಾತ್ರಾಕ್ರಮ ಉಂಟು. ಒಬ್ಬ ರೋಗಿಗೆ ಅರ್ಧಗ್ರನ್ ಅಫೀಮನ್ನು ಅಥವಾ ಐದು ಗ್ರ್ಯಲ್ ಹಿಂಗನ್ನು ಕೊಡಬೇಕೆಂತಿದ್ದರೆ, ಅಷ್ಟೇ ಅಫೀ ಮಿನ ಅಧವಾ ಹಿಂಗಿನ ಸಂಗಡ ಸಾಧಕತ್ವವಾಗಲೀ ಬಾಧಕತ್ವವಾಗಲೀ ಇಲ್ಲದ ಬೇರೆ ಯಾವದಾದರೊಂದು ಹಿಟ್ಟು, ಗೋ೦ದು ಮುಂತಾದ್ದನ್ನು ಕೂಡಿಸಿ ಕಲಸಿ, ಮಾತ್ರೆ ಮಾಡಿ ಕೊಡುತ್ತಾರೆ. ಆಯುರ್ವೇದೀಯ ಮಾತ್ರಾಕ್ರಮ ಹಾಗಿನದಲ್ಲ. ಸಾಧಾರಣವಾಗಿ ಅನೇಕ ಔಷಧಗಳು ಸೇರಿರುವ ಒಂದು ಮಾತ್ರೆಯು ಪ್ರಮಾಣದಲ್ಲಿ ಒಂದು ಹೆಸರಕಾಳಿನಷ್ಟು, ಉದ್ದಿನ ಕಾಳಿನಷ್ಟು, ಮೆಣಸಿನ ಕಾಳಿನಷ್ಟು, ಅಥವಾ ಒಂದು ಗುಲುಗುಂಜಿಯಷ್ಟು ಇರುತ್ತ ದಷ್ಟೆ, ಇಂಧಾ ಮಾತ್ರೆಯ ಗುಣವು ಅದರಲ್ಲಿರುವ ಎಷದ್ರವ್ಯಗಳ ಮೇಲಿನದಕ್ಕಿಂತಲೂ ಇತರ ಶುಂಠಿ, ಲವಂಗ, ಬಜೆ ಇತ್ಯಾದಿ ಸಾಧಾರಣ ವಸ್ತುಗಳ ಮೇಲೆ ಅಧಿಕವಾಗಿ ಆಧರಿಸಿರುತ್ತದೆ. ಆ ಶುಂಠಿ ಮುಂತಾದ ಸಾಧಾರಣವಾದ ಬೇರುಕಾಳುಗಳನ್ನು ಪ್ರತ್ಯೇಕವಾಗಿ ಪುಡಿಮಾಡಿ ಇಟ್ಟರೆ, ಆ ಪುಡಿಯು ಒಂದೆರಡು ತಿಂಗಳುಗಳೊಳಗೆ ಸತ್ವಹೀನವಾಗಿ ನಿಷ್ಟ್ರಯೋಜನವಾಗುತ್ತದೆ; ಆದರೆ ಮಾತ್ರೆಯಲ್ಲಿ ಸೇರಿದ ಅದೇ ವಸ್ತುಗಳ ಗುಣವು ಬಲವತ್ತಾಗಿ ದೀರ್ಘಕಾಲ ಉಳಿಯುತ್ತದೆ. ಮಹಾಜ್ಪರಾಂಕುಶ ಮಾತ್ರೆಗೆ ಸೇರಿದ ತ್ರಿಕಟುವಿನ ಖಾರ ಮತ್ತು ಅದನ್ನು ಅರಿಯುವದಕ್ಕೆ ಉಪಯೋಗಿಸಲ್ಪಟ್ಟ ಲಿಂಬೇರಸದ ಹುಳಿ ಆರು ವರ್ಷಕಾಲದನಂತರವೂ ಹಾಗೆಯೇ ಉಳಿದದ್ದನ್ನು ಪರೀಕ್ಷಿಸಿ ನೋಡಿದ್ದೇವೆ ಆ ಮಹಾರಾಂಕುಶ ಎಂಬ 12 ಗ್ರ್ಯೆನ್ ತೂಕದ ಮಾತ್ರೆಯಲ್ಲಿ ಶುಂಠಿ-ಹಿಪ್ಪಲಿ-ಮೆಣಸುಗಳು 1 ಗ್ರೀನ್ ಪ್ರಕಾರ ಸೇರಿ 1 ಗ್ರ್ಯೆನ್, ಉಮ್ಮತನ ಬೀಜ : ಗ್ರ್ಯೆನ್ ಪಾದರಸ-ಗಂಧಕ-ವತ್ಸನಾಭಿಗಳು , ರೈನ ಪ್ರಕಾರ ಸೇರಿ ಗ್ರೆನ್ ಅಧಿಕ ಪಕ್ಷದಲ್ಲಿ ಇರಬಹುದು. ಈ ಙಗ್ರ್ಯೆನ್ಖ ಲಿಂಬೇರಸದ ಅಂಶ ವನ್ನು ಬಿಟ್ಟಿದೆ. ಈ ಮಾತ್ರೆಯು ಬಹು ವಿಧವಾದ ಜ್ವರಗಳಲ್ಲಿ, ವಿಶೇಷವಾಗಿ ವಿಷಮಜ್ವರ ಗಳಲ್ಲಿ, ಬಹಳ ಸಫಲವಾಗುತ್ತದೆ. ಈ ಪ್ರಯೋಜನವನ್ನು ಸಾಧಿಸುವದಕ್ಕೆ ಆ ಮಾತ್ರೆಯಲ್ಲಿ ಸೇರಿದ ಏಳು ಬಗೆ ಔಷಧಗಳೊಳಗೆ ಯಾವದಾದರೊಂದಕ್ಕೆನೇ ಪ್ರತ್ಯೇಕವಾಗಿ ಶಕ್ತಿ ಇರುವ ದಿಲ್ಲ. ಗಂಧಕ ಮತ್ತು ವತ್ಸನಾಭಿ ಪಾದರಸವನ್ನು ಕೊಂದು ಅದಕ್ಕೆ ಕರ್ಮಸಾಧಕ ಶಕ್ತಿ ಯನ್ನು ಕೊಡುವದಕ್ಕೆ ಸೇರಿಸಲ್ಪಟ್ಟವೆಂತಲೂ, ಹಾಗೆ ಕರ್ಮದಕ್ಷತೆಯನ್ನು ಪಡೆದ ಪಾದ ರಸವು ತನ್ನ ಜತೆಯಲ್ಲಿರುವ ಕಟು ಮುಂತಾದ ದ್ರವ್ಯಗಳನ್ನು ಸುರಕ್ಷಿತವಾಗಿ ಕಾಪಾಡಿ, ಅವುಗಳಿಗೆ ಮಹತ್ತಾದ ಶಕ್ತಿಯನ್ನು ಕೊಟ್ಟು, ಅವುಗಳ ಕೆಲಸಗಳನ್ನು ಶೀಘ್ರವಾಗಿಯೂ ಸಂಪೂರ್ಣವಾಗಿಯೂ ಮಾಡಿಸುತ್ತದೆ ಎಂತಲೂ ಆಲೋಚಿಸಲಿಕ್ಕೆ ಕಾರಣ ಉಂಟು. ಪ್ರತ್ಯೇಕ ವಾದ ! ಗ್ರ್ಯೆನ್ ಶುಂಠಿಯಿಂದಾಗಲಿ, ಹಿಪ್ಪಲಿಯಿಂದಾಗಲಿ, ಕಾಳುಮೆಣಸಿನಿಂದಾಗಲಿ ಯಾವ ಕೆಲಸವೂ ಆಗದು. ಈ ಗುಣವಿರುವದರಿಂದ ಪಾದರಸವು ಯೋಗವಾಹಿ ಎಂತ ವರ್ಣಿಸಲ್ಪಟ್ಟಿದೆ, ಅಂದರೆ ಬತದ್ರವ್ಯಗಳಿಂದ ಕೆಲಸಮಾಡಿಸತಕ್ಕಂಧಾದ್ದು. ಮಾತ್ರೆಯಿಂದ ಪರಿಹಾರವಾಗತಕ್ಕ ರೋಗಗಳಿಗೆ ಉಕ್ತವಾದ ಔಷಧಗಳಲ್ಲಿ ಎಲ್ಲವೂ ಮಾತ್ರೆಯಲ್ಲಿ ಕೂಡಿಸ ಲ್ಪಡಲಿಕ್ಕೆ ಯುಕ್ತವಾಗುವದಿಲ್ಲ. ಅವುಗಳೊಳಗೆ ಕೆಲವು ಎಣ್ಣೆ-ಸೀರುಗಳಂತೆ ಒಂದಕ್ಕೊಂದು ಕೂಡಿಕೊಳ್ಳದಂಧವು ಇರಬಹುದು. ಸಂಯೋಗದಿಂದಲೇ ಮಾತ್ರೆ ಕಟ್ಟುವದಕ್ಕೆ ಬೇಕಾದಷ್ಟು ಅಂಟು ಉಂಟಾಗಬೇಕು. ಹೀಗೆ ಒಂದು ಮಾತ್ರೆಯ ಯೋಗವನ್ನು ಕಲ್ಪಿಸುವದಕ್ಕೆ ರಸಾ ಯನಶಾಸ್ತ್ರವನ್ನೂ ಆಯುರ್ವೇದವನ್ನೂ ಆಧರಿಸಿಕೊಂಡು ಬಹಳ ಸೂಕ್ಷ್ಮ ವಿಚಾರ ಮಾಡ 10 A