ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


XX1 ಉಪೋದ್ಘಾತ ಬೇಕಾಗುತ್ತದೆ. ಆ ಯೋಗದಂತೆ ಮಾತ್ರೆಗಳನ್ನು ತಯಾರಿಸುವದಕ್ಕೆ ಅನೇಕ ಸಂಗತಿಗಳಲ್ಲಿ ಮತ್ತೂ ಹೆಚ್ಚು ಶ್ರಮ ಬೇಕಾಗುತ್ತದೆ. ಹೀಗೆ ಯೋಗಗಳನ್ನು ಕಲ್ಪಿಸಿ, ಆ ಯೋಗಗಳ ಪ್ರಕಾರ ಮಾತ್ರೆಗಳನ್ನು ಮಾಡಿ, ಆ ಮಾತ್ರೆಗಳನ್ನು ರೋಗಿಗಳಿಗೆ ಕೊಟ್ಟು ಸಿಕ್ಕಿದ ಫಲ ಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿ, ಸಫಲವಾಗಿ ಕಂಡ ಯೋಗಗಳನ್ನು ಮಾತ್ರ ಪ್ರಕಟ ಮಾಡುತ್ತಾ ಬಂದಿದ್ದಾರ. ಇಂಧಾ ಯೋಗಗಳು ಆಯುರ್ವೇದಗ್ರಂಧಗಳಲ್ಲಿ ನೂರಾರು ಇರುತ್ತವೆ. ಇಂಧಾ ಅನೇಕ ದೃಷ್ಟಾಂತಗಳಿಂದ ಈ ಭರತವರ್ಷದಲ್ಲಿ ಆಗಿಂದಾಗ್ಗೆ ಮಹಾ ಜ್ಞಾನಿಗಳು ಹುಟ್ಟಿ, ಬೇರೆ ಬೇರೆ ಶಾಸ್ತ್ರಶಾಲೆಗಳಲ್ಲಿ ಮಹತ್ಕಾರ್ಯಗಳನ್ನು ಪೂರೈಸು ತಿದ್ದಾಗ್ಯೂ, ಅಂಧವರನ್ನು ಪ್ರಕಾಶಕ್ಕೆ ತರುವ ಅನುಕೂಲ್ಯವು ಕಡಿಮೆಯಾದ ದೆಸೆಯಿಂದ, ಅವರು ಸಾಮಾನ್ಯ ಜನತೆಯೊಳಗೆ ಅಡಗಿದ್ದು, ಲೋಕಪ್ರಸಿದ್ದಿಗೆ ಬಾರದೆ ಹೋಗುವವರಾಗು ತಿದ್ದಾರೆಂತ ತೋರಿಸಬಹುದು. ( ಉಪದೇಶ' ವನ್ನು ಬಿಟ್ಟರೆ, ಎರಡನೇ ಪ್ರಧಾನ ಸಾಧನವು ಪ್ರತ್ಯಕ್ಷ, ಅಂದರೆ, ಆಯುರ್ವೇದಕ್ರಮವನ್ನು ಉಪಯೋಗಿಸಿ, ಅದರಲ್ಲಿ ಹೇಳಲ್ಪಟ್ಟ ಗುಣ ದೋಷಗಳು ಕಾಣುತ್ತವೋ ಇಲ್ಲವೋ ಎಂಬದನ್ನು ಪರೀಕ್ಷಿಸುವದು ಈ ವಿಷಯದಲ್ಲಿ “ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು' ಎಂಬ ನ್ಯಾಯವೇ ಬಲವಾಗಿದೆ. ಪಾಶ್ಚಾತ್ಯ ಶಾಸ್ತ್ರ ಪ್ರಕಾರ ನಮ್ಮ ವೈದ್ಯವು ಶಾಸ್ತ್ರೀಯವೆಂತ ಮುಂದಾಗಿ ತೋರಿಸಬೇಕಂದರ ಅದು ಹ್ಯಾಗೆ ಸಾಧ್ಯವಾಗುವದು.' ಅವರ ಶಾಸ್ತ್ರವೇ ಅವ್ಯವಸ್ಥೆಯಲ್ಲಿ ಇರುತ್ತದೆಂಬದನ್ನು ಸೂಚಿಸುವ ಕೆಲವು ಸಂಗತಿಗಳನ್ನು ಹಿಂದೆ ಪ್ರಸ್ತಾಪಿಸಿದ್ದೇವೆ. ಕಬ್ಬಿಣ, ಬೆಳ್ಳಿ, ಭಂಗಾರ ಮುಂತಾದ ಲೋಹಗಳು ಅವರ ಮೂಲಭೂತಗಳ ಪಟ್ಟಿಯಲ್ಲಿ ಸೇರಿ ದಂಧವು, ಈ ನಿರ್ಣಯವನ್ನಾಧರಿಸಿ ಪಾಶ್ಚಾತ್ಯ ಶಿಕ್ಷಣಪ್ರವೀಣರಾದ ಕೆಲವರು ಲೋಹ ಮಾರಣ' ಎಂಬ ಆಯುರ್ವೇದೀಯ ಪದವನ್ನು ಉಚ್ಚರಿಸಿದೊಡನೇ ನಗುತ್ತಿದ್ದರು. ಮೂಲ ಭೂತಗಳಾದ ಲೋಹಗಳು ಸಾಯುವದು ಅಧವಾ ಭಸ್ಮವಾಗುವದು ಅಸಾಧ್ಯವೆಂತಲೂ, ಅವು ಮಾರಣಕ್ರಮದಿಂದ ರೂಪಾಂತರವನ್ನು ಹೊಂದಿದಾಗ್ಯೂ, ಆ ರೂಪಭೇದವನ್ನು ಕಳೆದು, ಅವುಗಳನ್ನು ಪುನಃ ನಿಜಸ್ಥಿತಿಗೆ ತರುವದು ಸಾಧ್ಯವೆಂತಲೂ ಅವರ ಮತವಾಗಿತ್ತು. ಇತ್ತ ಲಾಗಿ ಆ ಲೋಹಗಳಿಗೆ ಸುಖದುಃಖಮರಣಗಳಿವೆ ಎಂತಲೂ, ಸತ್ಯ ಲೋಹವನ್ನು ಪುನ ರ್ಜೀವ ಮಾಡಲಿಕ್ಕಾಗುವುದಿಲ್ಲ ಎಂತಲೂ, ಸರ್ ಜಗದೀಶ ಚಂದ್ರಬೋಸರವರು ಪಾಶ್ಚಾತ್ಯ ರಸಾಯನಶಾಸ್ತಾದಿಗಳ ರೀತಿಯಿಂದಲೇ ಸ್ಥಾಪಿಸಿದ್ದಾರೆ ಈ ಸ್ಥಾಪನವು ಸರಿಯಲ್ಲ ಎಂತ ತೋರಿ ಸುವ ಉಪಾಯ ಕಾಣದೆ, ಅದನ್ನು ಒಪ್ಪಿಕೊಳ್ಳಲಿಕ್ಕೆ ಮನಸ್ಸಿಲ್ಲದೆ, ಪಾಶ್ಚಾತ್ಯ ರಸಾಯನ ಶಾಸ್ತ್ರಜ್ಞರು ಪ್ರಕೃತ ಮೌನಾಚರಣದಲ್ಲಿದ್ದ ಹಾಗೆ ಕಾಣುತ್ತದೆ ಆ ಸ್ಥಾಪನವನ್ನು ಒಪ್ಪಿ ಕೊಂಡರೆ, ದೀರ್ಘವಾಗಿರುವ ಅವರ ಮೂಲಭೂತಗಳ ಪಟ್ಟಿಯು ಬಹಳಮಟ್ಟಿಗೆ ಸಂಕೋಚಪಡಬೇಕಾದೀತು. ಅಂಧಾ ಶಾಸ್ತ್ರವನ್ನನುಸರಿಸಿ ನಮ್ಮ ತ್ರಿದೋಷನ್ಯಾಯವನ್ನು ಮುಂದಾಗಿ ಸ್ಥಾಪಿಸಿಕೊಡಬೇಕೆನ್ನುವದು ವಿಹಿತವೋ? ಅದಲ್ಲದೆ, ನೀರನ್ನು ಉಪಯೋಗಿಸು ವದಕ್ಕೆ ಅದರಲ್ಲಿ ರಸಾಯನಶಾಸ್ತ್ರ ಪ್ರಕಾರ ಒಂದು ಪಾಲು ಒಕ್ಸಿಜನ್, ಎರಡು ಪಾಲು ಹೈಡೋಜನ್ ಮತ್ತು ಇಂತಿಷ್ಟು ಬೇರೆ ಪದಾರ್ಥಗಳು ಇರುತ್ತವೆ ಎಂತ ಜನರು ಮುಂದಾಗಿ ಅನುಭವ ಮಾಡಿಕೊಂಡಿದ್ದರೊ? ಜನಿಸಿದ ಶಿಶುವಿಗೆ ತಾಯಿಯು ಮೊಲೆಯನ್ನುಣಿಸುವ ಆಚರಣವು ಆ ಮೊಲೆಹಾಲನ್ನು ರಸಾಯನಶಾಸ್ತ್ರ ರೀತ್ಯಾ ಶೋಧಿಸಿದನಂತರ ಉಂಟಾ