ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೭೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 Lxxvi ಉಪೋದ್ಘಾತ

ಕವಾಗಿರುವದರಿಂದ ಕಹಿ, ಪೃಧ್ವೀ-ವಾಯು ಅಧಿಕವಾಗಿರುವದರಿಂದ ಚೊಗರು; ಈ ಪ್ರಕಾರ ಷಡ್ರಸಗಳ ಉತ್ಪತ್ತಿ, ಆ ಪಂಚ ಮಹಾಭೂತಗಳು ದ್ರವ್ಯಗಳಲ್ಲಿ ಬೇರೆ ಬೇರೆ ತರತಮ ಪ್ರಮಾಣ ಗಳಲ್ಲಿ ಸಂಯೋಗವಾಗಿರುವದರಿಂದ ದ್ರವ್ಯಗಳ ಅಸಂಖ್ಯೇಯ ಮಿಶ್ರ ರಸಗಳು ಉಂಟಾಗುತ್ತವೆ. ಈ ರಸಗಳಲ್ಲಿ ಕೆಲವು ಶರೀರದಲ್ಲಿ ಜರರಾಗ್ನಿಯಿಂದ ಪಾಕ ಮಾಡಲ್ಪಡುವಾಗ್ಗೆ ಅನ್ಯ ರಸಗಳಾಗಿ ಪರಿಣಮಿಸುತ್ತವೆ. ಆದ್ದರಿಂದ ದ್ರವ್ಯ ಗುಣ ವರ್ಣದಲ್ಲಿ, ವಿಪಾಕ ರುಚಿ ಬೇರೆ ಇದ್ದರೆ, ಎರಡು ರುಚಿಗಳನ್ನು ಪತ್ಯೇಕವಾಗಿ ಕಾಣಿಸುತ್ತಾರೆ. ದ್ರವ್ಯದಲ್ಲಿ ವೀರ್ಯ-ಶಕ್ತಿ ಎಂಬ ಬೇರೆ ಗುಣಗಳಿವೆ. ಈ ಶಕ್ತಿಯಿಂದ ದ್ರವ್ಯದಲ್ಲಿ (ಆದ್ಯ) ಅದರ ನಿಜ ರುಚಿಗೂ, ವಿಪಾಕದ ರುಚಿಗೂ, ಬೇರೆಯಾದ ಗುಣ ಕಾಣುವದುಂಟು. ಇವುಗಳನ್ನೆಲ್ಲಾ ಪ್ರತ್ಯಕ್ಷ ಅನುಭವದಿಂದ ನಿಶ್ಚಯಿಸಿ, ಎಲ್ಲಾ ರೋಗಗಳಿಗೂ ಬೇಕಾದಷ್ಟು ಔಷಧಗಳನ್ನು ವರ್ಣಿಸಿದ್ದಾರೆ. ವಾತ-ಪಿತ್ತಕಫಗಳ ಸಾಮಾನ್ಯ ಲಕ್ಷಣಗಳು ಇಂಧವ್ರ ಎಂತ ಕಾಣಿಸಿ, ಯಾವ ರೋಗದಲ್ಲಿಯಾದರೂ ಆ ಲಕ್ಷಣಗಳು ಕಂಡರೆ, ಅವು ಆಯಾ ದೋಷದ ಕರ್ಮ ಎಂತ ತಿಳಿಯಬೇಕಾಗಿ ವಿಧಿಸಿ ದ್ದಾರೆ ಈ ಅಂಶಗಳನ್ನೆಲ್ಲಾ ಸರಿಯಾಗಿ ಕಲಿತ ವೈದ್ಯನಿಗಾದರೂ ದೋಷಗಳ ಬಲಾಬಲ ಭೇದಗಳನ್ನು ಲಕ್ಷಿಸಿ, ಅವುಗಳಿಗೆ ಬೇಕಾದಷ್ಟೇ ಬಲವುಳ್ಳ ಪ್ರತಿಕ್ರಿಯಾಯೋಗವನ್ನು ಕಲ್ಪಿ ಸುವದಕ್ಕೆ ಬಹು ಕಷ್ಟವಾಗುತ್ತದೆ, ಈ ಕಷ್ಟಕ್ಕೆ ವೈದ್ಯನ ಸೂಕ್ಮ ಬುದ್ಧಿ ಮತ್ತು ಅನುಭವವೇ ಪರಿಹಾರ ದೋಷಗಳ ನಿಶ್ಚಯಕ್ಕೆ ಶಬ್ದ, ಸ್ಪರ್ಶ, ರೂಪ, ರಸ, ಪ್ರಾಣ, ದೃಷ್ಟಿ, ಮಲ, ಮೂತ್ರ, ನಾಲಿಗೆ, ನಾಡೀ, ಇವುಗಳಲ್ಲಿ ಆ ದೋಷಗಳಿಂದ ಉಂಟಾಗುವ ಭೇದಗಳು ಸವಿ ಸ್ತಾರವಾಗಿ ವರ್ಣಿಸಲ್ಪಟ್ಟಿವೆ. ಚಂದ್ರ-ಸೂರ್ಯ-ವಾಯುಗಳ ಪ್ರಬಲತೆ ಭೇದದಿಂದ ಋತುಅಯನಾದಿ ಕಾಲಗಳಲ್ಲಿಯೂ, ದೇಶಗಳಲ್ಲಿಯೂ, ಆ ದೇಶಗಳಲ್ಲಿ ಬೆಳೆಯುವ ದ್ರವ್ಯ ಗಳಲ್ಲಿಯೂ ಭೇದ ಉಂಟಾಗಿ, ಆ ಭೇದಕ್ಕನುಸಾರವಾಗಿ ಜನರ ದೇಹದಲ್ಲಿರುವ ಕಫ-ಪಿತ್ತವಾಯುಗಳೆಂಬ ದೋಷಗಳಲ್ಲಿ ಹೆಚ್ಚು ಕಡಿಮೆಯಾಗುತ್ತದೆಂಬದು ಸವಿಸ್ತಾರವಾಗಿ ಆಯು ರ್ವೇದಗ್ರಂಧಗಳಲ್ಲಿ ವರ್ಣಿಸಲ್ಪಟ್ಟಿದೆ.

     26. ಈಗ ಸಾಧಾರಣವಾಗಿ ಒಬ್ಬ ಕೃಷಿಗಾರನು ಒಂದು ಗಿಡವನ್ನು ನೆಡುವದಕ್ಕ ಸ್ಥಳವನ್ನು ಆರಿಸುವಾಗ್ಗೆ ಆ ಸ್ಥಳಕ್ಕೆ ವ್ಯಾಪಿಸುವ ಸೂರ್ಯನ ಬಿಸಿಲು, ನೆರಳು, ಮತ್ತು ಗಾಳಿ, ಇವುಗಳ ಹೆಚ್ಚು ಕಡಿಮೆಯನ್ನು ಆಲೋಚಿಸುತ್ತಾನೆ, ಮತ್ತು ಒಂದು ನೆಟ್ಟ ಗಿಡವು ಸುಖವಾಗಿ ಬೆಳೆಯುವದಿಲ್ಲ ಎಂತ ಕಂಡರೆ, ಮುಂದಾಗಿ ಚಂದ್ರ-ಸೂರ್ಯ-ವಾಯುಗಳ ಉಪದ್ರವವನ್ನೇ ಶಂಕಿಸುತ್ತಾನೆ. ಸುಮಾರು ಹದಿನೈದು ವರ್ಷಗಳ ಪೂರ್ವದಲ್ಲಿ ನೆಡಲ್ಪಟ್ಟ ಒಂದು ಹಲಸಿನ ಗಿಡವೂ ಅದರ ಸುತ್ತಲಿದ್ದ ಆವರಣದಷ್ಟೇ ಎತ್ತರ ಬೆಳೆದು, ಅನಂತರ ವೃದ್ಧಿ ಯನ್ನು ಪಡೆಯದಿದ್ದದಕ್ಕೆ, ಆ ಮಣ್ಣಿನ ಆವರಣದ ಮೇಲೆ ಸುಮಾರು ಎರಡು ಅಡಿ ಎತ್ತರದ ವರೆಗೆ ಸೊಪ್ಪುಗಳಿಂದ ಆವರಣವನ್ನು ಮಾಡಲಾಗಿ, ಅಂದಿನಿಂದ ಆ ಗಿಡವು ಸುಖವಾಗಿ ಬೆಳೆ ಯಲಾರಂಭಿಸಿ, ಕೆಲವು ವರ್ಷಗಳೊಳಗೆ ಮರವಾಗಿ ಫಲವತ್ತಾಯಿತು. ಆ ಸ್ಥಳವು ಎತ್ತರ ವಾಗಿ, ಬೀಸುವ ಗಾಳಿಯ ಪ್ರಾಬಲ್ಯಾಧಿಕ್ಯದಿಂದ ಆ ಚಿಕ್ಕ ಗಿಡದ ಬೆಳಿಕೆಯು ನಿಂತುಹೋಗಿ ತ್ತೆಂತ ಕಾಣುತ್ತದೆ. ಪ್ರತಿ ಗಿಡವು ತನ್ನ ಎಲೆಗಳಿಂದ ಪ್ರಕಾಶದ ಜ್ಞಾನವನ್ನು ಪಡೆದು, ಆ ಪ್ರಕಾಶವು ತನಗೆ ಸುಖಕರವಾಗುವ ಹಾಗೆ ತನ್ನ ಬೆಳಿಕೆಯನ್ನು ಸಮಮಾಡಿ ಕೊಳ್ಳುತ್ತದೆಂತ