ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ LXXVII

  • Report of his ಸರ್ ಜ. ಚಂ. ಬೋಸರವರು ಪಾಶ್ಚಾತ್ಯರೀತಿಯಿಂದ ಶೋಧನ ಮಾಡಿ [e cture New India 24 8 21 ಸ್ಥಾಪಿಸಿದ್ದಾರೆ*, ತೆಂಗು ಮುಂತಾದ ಕೆಲವು ಮರಗಳು ತಮ್ಮ ಸಮಿಾಪಕ್ಕೆ ಬೇರೆ ಮರಗಳ ಕೊಂಬೆಗಳು ಬರುವದನ್ನು ಕಂಡು, ಅವುಗಳನ್ನು ತಪ್ಪಿಸಿಕೊಳ್ಳುವದಕ್ಕಾಗಿ, ಮುಂದಾಗಿಯೇ ತಿರುಗಿ ಬೆಳೆಯುವದನ್ನು ನಮ್ಮ ವಾಚಕರಲ್ಲಿ ಅನೇಕರು ನೋಡಿರಬಹುದು. ಬಳ್ಳಾರಿ, ಅನಂತಪುರ, ಮುಂತಾದ ಕೆಲವು ಜಿಲ್ಲೆಗಳಲ್ಲಿ ಮಳೆ ಮತ್ತು ಮರಮಟ್ಟುಗಳು ಕಡಿಮಯಾದ್ದರಿಂದ ಅಧಿಕವಾಗಿರುವ ಬಿಸಿಲಿನ ಪ್ರತಾಪವನ್ನು ಗಾಳಿಯು ಅನ್ಯ ಕಡೆಗಳಿಗೆ ಒಯ್ದು, ಸಮಿಾಪದ ತಂಪಾದ ಪ್ರದೇಶಗಳ ತಣಸನ್ನು ಅಲ್ಲಿಗೆ ಬೀಸಿ, ಆ ಜಿಲ್ಲೆಗಳ ಪ್ರಾಣಿ ಗಳನ್ನು ರಕ್ಷಣೆ ಮಾಡುತ್ತಾ ಉಂಟು ಒಟ್ಟಾರೆ, ಅಲ್ಲಿ ವಾಯುವು ಪ್ರಬಲ ಅಲ್ಲಿಯ ಮಣ್ಣು ಪ್ರಾಯಶಃ ಕರ್ರಗಾಗಿರುವದು ಆಯುರ್ವೇದ ಪ್ರಕಾರ ವಾಯುವಿನ ಗುಣ ಅಲ್ಲಿಯ ಜನಜಾನುವಾರುಗಳು ಬಲವಾಗಿದ್ದರೂ ಪುಷ್ಟಿಯುಳ್ಳವಾಗಿರುವದು ಕಡಿಮೆ. ವಾಯುವು ಶೋಷಣ ಗುಣವುಳ್ಳದ್ದೆಂಬ ಆಯುರ್ವೇದೀಯ ತತ್ವವು ಅದಕ್ಕೆ ಕಾರಣವಾಗಿ ರಬಹುದು. ಸಂಕ್ಷೇಪವಾಗಿ, ನಮ್ಮ ವಾಚಕರು ತ್ರಿದೋಷಗಳ ವಿಷಯದಲ್ಲಿ ಆಯುರ್ವೇ ದವು ಕೊಟ್ಟಿರುವ ವಿವರಗಳನ್ನು ತಿಳಿದು ನೆನಪಿನಲ್ಲಿಟ್ಟು ಕೊಂಡರೆ, ಅವುಗಳನ್ನು ಸಮರ್ಥಿ ಸುವ ದೃಷ್ಟಾಂತಗಳು ಅವರಿಗೆ ಪ್ರತಿ ದಿನವೂ ಕಾಣುತ್ತಿರುವವು ಎಂಬದರಲ್ಲಿ ಸಂದೇಹವಿಲ್ಲ ಮೇಲೆ ಪ್ರಸ್ತಾಪಿಸಿದ ದೃಷ್ಟಾಂತಗಳಲ್ಲಿ ಚಂದ್ರ-ಸೂರ್ಯ-ವಾಯುಗಳ ಪ್ರಾಬಲ್ದಭೇದ ಗಳನ್ನು ಅನುಮಾನರೀತ್ಯಾ ತಿಳಿಯಬೇಕಷ್ಟೇ ತ್ರಿದೋಷಗಳ ವಿಷಯದಲ್ಲಿ ಅಂಧಾ ಅನುಮಾನಕ್ಕ ಅವಕಾಶವಿಲ್ಲ. ಅವುಗಳ ಪ್ರಾಬಲ್ಯದ ಅತಿಯೋಗ- ಹೀನಯೋಗ-ಸಮ ಯೋಗಗಳ ದೆಸೆಯಿಂದ ಮನುಷ್ಯರಲ್ಲಿ ಉಂಟಾಗುವ ಲಕ್ಷಣಗಳನ್ನು ಪ್ರತ್ಯಪ್ರತ್ಯೇಕ ಸುಲಕ್ಷಿತವಾಗಿ ಹೇಳಿರುತ್ತಾರ. ಈ ಲಕ್ಷಣ ವಿಭಾಗಗಳು ಮನುಷ್ಯಯತ್ನದಿಂದಲೇ ಲಬ್ಭ ವಾದವಾದರೆ, ಅವುಗಳ ಪ್ರತಿಪಾದನಕ್ಕೆ ನಮ್ಮ ಪೂರ್ವಿಕರು ಉಪಯೋಗಿಸಿರಬೇಕಾದ ಶ್ರಮ ಮತ್ತು ಸೂಕ್ಷ್ಮ ಬುದ್ದಿ ಎಷ್ಟು ಶ್ಲಾಘ್ಯ ಎಂಬುದನ್ನು ನೆನಸುವದಕ್ಕೂ ಈಗಿನವರು ರಕ್ತರಲ್ಲ. ಅಂಧಾ ಶಾಸ್ತ್ರವನ್ನು ವಿಚಾರವಿಲ್ಲದೆ ನಿಂದಿಸಿದರೆ, ನಮ್ಮ ಬುದ್ದಿ ಸಂಕೋಚ ವನ್ನೇ ಪ್ರದರ್ಶಿಸಿದಂತಾಗುವದು
  27 ಸರ್ ಜಗದೀಶ್ವರ ಚಂದ್ರ ಬೋಸರವರು ಇತ್ತಲಾಗಿ ಪ್ರತಿಪಾದಿಸಿರುವ ಇನ್ನೊಂದು ಆಯುರ್ವೇದತತ್ವವನ್ನು ಇಲ್ಲಿ ಸೂಚಿಸುವದು ಯುಕ್ತ (Desmodium g) -1ans ಎಂಬ) ಒಂದು ಗಿಡದಲ್ಲಿ ನಾಡೀ ಬಡಿತವು ಕಪ್ಪೆಯ ಹೃದಯದಲ್ಲಿದ್ದಂತೆ ಉಂಟೆಂತಲೂ, ಬಿಸಿಯನ್ನು ತಗ್ಗಿಸುವದರಿಂದ ಅದರ ನಾಡಿಯು ಪುಷ್ಟವಾಗಿ, ಅದರ ವೇಗವು ಕಡಿಮೆಯಾಗು ತ್ತದೆಂತಲೂ, ಬಿಸಿಯನ್ನು ಏರಿಸಿದರೆ, ನಾಡಿಯು ಸಂಕೋಚವಾಗಿ ಅದರ ವೇಗವು ಅಧಿಕವಾ ಗುತ್ತದೆಂತಲೂ, ತಕ್ಕ ಯಂತ್ರಗಳಿಂದ ಪ್ರದರ್ಶಿಸಿ ಸ್ಥಾಪಿಸಿದ್ದಾರೆ ಪುನಃ, ಒಂದು ನಾಚಿಕೆ ಗಿಡವನ್ನು ಹಗಲಿನ ಬೆಳಕಿಗೆ ಎದುರಾಗಿ ಕೋಣೆಯಲ್ಲಿರಿಸಿ, ಸ್ವಲ್ಪ ಕಾಲದ ಮೇಲೆ ಆ ಕೋಣೆ ಯನ್ನು ಒಂದೇ ಸರ್ತಿ ಪರದೆಗಳಿಂದ ಮುಚ್ಚಿ ಕತ್ತಲೆ ಮಾಡಿ ಪರೀಕ್ಷಿಸಿದ್ದಲ್ಲಿ, ಅದರ ಎಲೆಗಳು ಮುಚ್ಚಿಕೊಂಡು ಬೊಗ್ಗುವ ಸ್ವಾಭಾವಿಕ ಸಂಕ್ಟೋಭವು ನಿಂತುಹೋಯಿತು. ಮುಕ್ಕಾಲು ಘಂಟೆ ಕಾಲದನಂತರ ಆ ಸಂಕ್ಷೋಭಶಕ್ತಯು ಪುನಃ ಕೂಡಲಿಕ್ಕಾರಂಭಿಸಿ, ಒಂದು ಘಂಟೆಯ ನಂತರ ಮೊದಲಿನಂತೆ ಬಲವಾಗಿ ಕಂಡಿತು. ಆ ಶಕ್ತಿಯು ಮಳೆಗಾಲದಲ್ಲಿ ಹೀನವಾಗಿರುತ್ತದೆ