ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lxxviii ಉಪೋದ್ಘಾತ ಆ ಸಂಕ್ಷೋಭಶಕ್ತಿಗೆ ಮೂಲವು ಎಲೆ ಕೈಯ ಬುಡಕ್ಕೆ ಗಿಡದಲ್ಲಿರುವ ಗಂಟು. ಈ ಮೂಲ ಸ್ಥಾನದಲ್ಲಿ ಒಂದು ಬೊಟ್ಟು ತಣ್ಣೀರನ್ನು ಎಲೆಯು ಬೊಗ್ಗಿರುವಾಗ ಹಚ್ಚಿದರಿಂದ, ಎಲೆಯು ನಿಜ ಸ್ಥಿತಿಗೆ ಬರುವದಕ್ಕೆ 15 ಮಿನಿಟು ಕಾಲದ ಬದಲಾಗಿ 45 ಮಿನಿಟು ಕಾಲ ಹಿಡಿಯಿತು ಅನಂತರ 15 ಮಿನಿಟುಗಳ ಕಾಲಾಂತರಗಳಲ್ಲಿ ಮೊದಲಿನಂತೆ ಸಂಕ್ಷೋಭವನ್ನುಂಟುಮಾಡು ವದಕ್ಕೆ ಪ್ರಯತ್ನಿಸಿದ್ದು ನಿಷ್ಪಲವಾಯಿತು. ಆ ಮೇಲೆ ಒಂದು ಬೊಟ್ಟು ಬಲವಾದ ಗ್ಲಿಸರೀನನ್ನು (Glycerine) ಹಚ್ಚಿ ನೀರನ್ನು ಆರಿಸಿದ್ದಲ್ಲಿ, ಸಂಕ್ಷೋಭವು ಉಂಟಾಗಿ ಸ್ವಸ್ಥ ಸ್ಥಿತಿಯು ಕಂಡಿತು. ಈ ಪರೀಕ್ಷೆಗಳ ಉಪಲಬ್ಲಿಯು ಆಯುರ್ವೇದದಲ್ಲಿ ಉಕ್ತವಾದ ಪಿತ್ತ ಕಫಗಳ ಕರ್ಮಗಳನ್ನೂ, ನಾಡೀ ಲಕ್ಷಣಗಳನ್ನೂ, ಪ್ರತಿಪಾದಿಸತಕ್ಕಂಧಾದ್ದಾಗಿರುತ್ತದೆ. ಇದೇ ರೀತಿ ಆಯುರ್ವೇದದ ಇತರ ತತ್ವಗಳು ಕ್ರಮೇಣ ಪಾಶ್ಚಾತ್ಯ ವಿದ್ವಾಂಸರ ಶೋಧನ ಗಳಿಂದಲೇ ಪ್ರಮಾಣೀಕರಿಸಲ್ಪಡಬಹುದು ಹ್ಯಾಗಾದರೂ , ಆಯುರ್ವೇದವನ್ನು ತಿರಸ್ಕಾರ ಮಾಡುವದಕ್ಕೆ ಮುಂದಾಗಿ, ಅದರ ತತ್ವಗಳ ಪೂರ್ಣವಾದ ಶೋಧನಕ್ಕೆ ಸರ್‌ ಜಗದೀಶ್ವರ ಚಂದ್ರ ಬೋಸರವರನ್ನು, ಅಥವಾ ಅವರಿಗನುಕೂಲವಿಲ್ಲದಿದ್ದರೆ, ಅವರ ನಿಪುಣ ತಿಷ್ಯರೊಳ ಗೊಬ್ಬರನ್ನು, ನಿಯೋಜಿಸಿ, ಬೇಕಾದ ಎಲ್ಲಾ ಅನುಕೂಲತೆಗಳನ್ನು ಒದಗಿಸಿಕೊಟ್ಟು, ಅಂಧಾ ಶೋಧನಗಳ ಫಲಿತಾಂಶಗಳನ್ನು ಸಂಗ್ರಹಿಸುವದು ನಮ್ಮ ಸರಕಾರದ ಕರ್ತವ್ಯವಾಗಿರುತ್ತದೆ ಇಂಧಾ ಬಹು ಸಾರ್ಧಕವಾದ ಕೆಲಸಕ್ಕೆ ಈ ಭರತಖಂಡದಲ್ಲಿರುವ ಅನೇಕ ದೇಶೀಯ ಮಹಾರಾಜರೊಳಗೆ ಯಾರೊಬ್ಬರೂ ಈ ವರೆಗೆ ಮನಸ್ಸು ಕೊಡದಿದ್ದದ್ದು ಶೋಚನೀಯ ವಾದ ಸಂಗತಿ. 28 ಎಲಾಯತಿಯಲ್ಲಿ ಕಡೇ ಸಾರಿ ನಡೆದ ಮಹಾ ಯುದ್ಧದ ಪ್ರಚಾರಾಂತರದಲ್ಲಿ ಪಾಶ್ಚಾತ್ಯ ವಿದ್ವಾಂಸರು ಹೊಸತಾಗಿ ಕಂಡುಹಿಡಿದ ಒಂದು ವಿಶೇಷವಾದ ಉಪಲಬ್ಲಿಯು ಏನಂದರೆ - ಯಾರಾದರೂ ಯುದ್ದದಲ್ಲಿ ಗಾಯಪಟ್ಟು ವಿಶೇಷವಾಗಿ ರಕ್ತವು ಸ್ರವಿಸಿ ಹೋಗುವದರಿಂದ ಸಾಯಲಿಕ್ಕೆ ಸಿದ್ದವಾದರೆ, ಬೇರೆ ಜನರ ದೇಹದಿಂದ ರಕ್ತವನ್ನು ತೆಗೆದು, ಅದನ್ನು ಅವರ ರಕ್ತಶಿರೆಗಳೊಳಗೆ ನಳಿಗೆಗಳಿಂದ ಸೇರಿಸಿದರೆ, ಹಾಗೆ ಹೊಸ ರಕ್ತವು ಒಳಗೆ ಸೇರಿದ ಹಾಗೆ ಆ ಗಾಯಪಟ್ಟವನ ಶ್ವಾಸಗಳು, ನಾಡಿಗಳು ಮುಂತಾದ ಕೂಡಲೇ ಬಲ ಪಟ್ಟು, ಅತಿಸ್ವಲ್ಪಕಾಲದೊಳಗ ಅವನಿಗೆ ಆಶ್ಚರ್ಯಕರವಾಗಿ ಸೌಖ್ಯ ಉಂಟಾಗುತ್ತದೆಂಬದು ಮೊದಲೇ ತಿಳಿದಿದ್ದ ಸಂಗತಿಯಾಗಿತ್ತು ಆರೋಗ್ಯವಂತನ ದೇಹದಿಂದ ತೆಗೆದ ರಕ್ತವು ಉಪ ಯೋಗಿಸಲ್ಪಡುವದಕ್ಕೆ ಮೊದಲೇ ಗಟ್ಟಿಯಾಗಿ ಹೋಗದ ಹಾಗೆ ಮಾಡುವದು, ಈ ಪ್ರತಿರಕ್ತ ಪ್ರದಾನವನ್ನು ಸಾಕಷ್ಟು ಬೇಗನೇ ಮಾಡಲಿಕ್ಕೆ ಅನುಕೂಲಿಸುವದು, ರಕ್ತವನ್ನು ಕೊಡುವದಕ್ಕೆ ಯೋಗ್ಯರಾದ ಮತ್ತು ಸಮ್ಮತಿಸುವ ಜನರನ್ನು ಮುಂದಾಗಿ ಸಂಗ್ರಹಿಸಿಟ್ಟುಕೊಳ್ಳುವದು, ಮುಂತಾದ ಕಷ್ಟಗಳಿಗೆಲ್ಲ ತಕ್ಕ ಪರಿಹಾರಗಳನ್ನು ಮಾಡಿಕೊಂಡಿದ್ದರು ತಿಳಿದ ಮಟ್ಟಿಗೆ ಯಾವ ದೋಷವೂ ಬಾರದಂತೆ ಜಾಗ್ರತೆ ತೆಗೆದುಕೊಂಡು, ಈ ಪ್ರತಿರಕ್ತಪ್ರದಾನವನ್ನು ಮಾಡಿದಾಗ್ಯೂ, ಕೆಲವರು ಅದರಿಂದ ಏನೂ ಪ್ರಯೋಜನ ಪಡಿಯದೆ ಸಾಯುವದು ಕಂಡಿತು. ಇದರ ಕಾರಣವನ್ನು ಒಬ್ಬರು ಅಮೇರಿಕದ ಡಾಕ್ಟರರು ಕಂಡುಹಿಡಿದರು. ಅದೇನೆಂದರೆ - ಮನುಷ್ಯರಲ್ಲಿ ರಕ್ತಭೇದದ ಮೇಲೆ ನಾಲ್ಕು ವರ್ಗಗಳಿವೆ. ಒಂದನೇ ವರ್ಗದೊಳಗೆ ಸೇರಿದ ಯಾವನೊಬ್ಬನ ರಕ್ತವು ಅದೇ ವರ್ಗಕ್ಕೆ ಸೇರಿದ ಇನ್ನೊಬ್ಬನಿಗೆ ಪ್ರಯೋಜನಕರವಾಗುತ್ತ