ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ LXXIX ದಲ್ಲದೆ, ಇತರ ಮೂರು ವರ್ಗಗಳ ಜನರಿಗೆ ನಿರರ್ಧಕ, ಆದರೆ ಆ ವರ್ಗದವರಿಗೆ ಇತರ ಮೂರು ವರ್ಗಗಳ ಜನರೊಳಗೆ ಯಾರ ರಕ್ತವಾದರೂ ಹಿತವಾಗುತ್ತದೆ. ಇಂಧವರು ನೂರ ರಲ್ಲಿ ಒಬ್ಬನಂತೆ ಮಾತ್ರ ಇರುತ್ತಾರೆ. 2ನೇ ವರ್ಗದವರ ರಕ್ತವು ಯಾವ ವರ್ಗದವನಿ ಗಾದರೂ ಹಿತವಾಗುತ್ತದೆ; ಆದರೆ ಆ ವರ್ಗದವನಿಗೆ ರಕ್ತ ಬೇಕಾದರೆ, ಇನ್ನೊಬ್ಬ ಅದೇ ವರ್ಗದವನ ರಕ್ತ ಸಿಕ್ಕಬೇಕಲ್ಲದೆ, ಇತರ ವರ್ಗದವರ ರಕ್ತ ಹಿತವಾಗುವದಿಲ್ಲ ಈ ವರ್ಗ ದವರು ನೂರರಲ್ಲಿ 44ರಂತೆ ಇರುತ್ತಾರೆ 3ನೇ 4ನೇ ವರ್ಗಗಳ ಜನರ ರಕ್ತವು ಆಯಾ ವರ್ಗ ದವರಿಗೆ ಮತ್ತು 1ನೇ ವರ್ಗದವರಿಗೆ ಹಿತವಾಗುತ್ತದಲ್ಲದೆ, ಆ ಎರಡು ವರ್ಗಗಳೊಳಗೆ ಒಂದು ವರ್ಗದವರ ರಕ್ತವು ಇತರ ವರ್ಗದವರಿಗೆ ಆಗುವದಿಲ್ಲ ಯಾವನಾದರೂ ಈ ನಾಲ್ಕು ವರ್ಗಗಳೊಳಗೆ ಯಾವದಕ್ಕೆ ಸೇರಿದವನೆಂಬದನ್ನು ಕೆಲವು ಮಿನಿಟುಗಳೊಳಗೆ ಪರೀಕ್ಷಿಸಲಿಕ್ಕಾಗುತ್ತದೆ. ಇದನ್ನು ತಿಳಿದ ಮೇಲೆ ರಕ್ತಪ್ರದಾನಕ್ಕೆ 2ನೇ ವರ್ಗದವರನ್ನೇ ಅಧವಾ ರಕ್ತ ನಷ್ಟವಾದವರ ವರ್ಗದ ಜನರನ್ನೇ ಆರಿಸುತ್ತಿದ್ದರು ಈ ರಕ್ತಬಾತಿಭೇದವು ರೋಗ ಮುಂತಾದ ಸಂಗತ್ಯಾನುಸಾರವಾಗಿ ಉಂಟಾಗುವದಲ್ಲ, ಹುಟ್ಟುವಾಗಲೇ ಇರು *Geoffrey Keyne, ವಂಧಾದ್ದು. ಜನಿಸಿದ ಶಿಶುವನ್ನು ಆಗಲೇ ಪರೀಕ್ಷೆ ಮಾಡಿದರೆ ಈ M D Professor Surgi- ರಕ್ತಭೇದವು ಕಾಣುತ್ತದೆ. ತಾಯಿಯ ವರ್ಗ ಬೇರೆ, ಶಿಶುವಿನ ( ca| unit, S Bartho-) ವರ್ಗ ಬೇರೆಯಾಗಿರುವದುಂಟು. ಈ ಅಭಿಪ್ರಾಯವನ್ನು ಒಬ್ಬ Bomew's Hospital, (New India Supple - ಪ್ರಸಿದ್ದ ಡಾಕ್ಟರರ * ಒರದ ಲೇಖನದಿಂದ ತೆಗೆದದ್ದು ಮನುಷ್ಯ ment, June 19, 1920 ) ರಕ್ತದಲ್ಲಿ ಜನ್ಮತಃ ಭೇದವ್ರಂಟಂತಾದರ ಸತ್ವ-ರಜ-ತಮಃ ಎಂಬ ಅಧವಾ ವಾತ, ಪಿತ್ತ, ಕಫ ಎಂಬ ಪ್ರಕೃತಿಭೇದಗಳು, ಬ್ರಹ್ಮ-ಕ್ಷತ್ರ-ವೈಶ್ಯ-ಶೂದ್ರ ಎಂಬ ವರ್ಣಭೇದಗಳು ಮುಂತಾದ ಹಿಂದು ಮತೋಕ ಭಾಗಗಳು ಒನ್ನತ ಇರಲಾರವು ಎಂತ ನಿಶ್ಚಯವಾಗಿ ಹೇಳುವದು ಹ್ಯಾಗೆ? ಹ್ಯಾಗಿದ್ದರೂ, ಮೊನ್ನೆ ವರೆಗೆ ಅಸಾಧ್ಯವೆಂದದ್ದು ನಿನ್ನೆ ಸಾಧ್ಯವಾಯಿತು, ನಿನ್ನೆ ವರೆಗೆ ಅಸಾಧ್ಯವೆಂದದ್ದು ಈ ದಿನ ಸಾಧ್ಯವಾಯಿತು ಎಂತಾದ ಮೇಲೆ, ಇಂದು ಅಸಾಧ್ಯ, ಅಧವಾ ಅಸಂಭವನೀಯವೆಂತ ಕಂಡವುಗಳು, ಕೆಲವು ಮಟ್ಟಿ ಗಾದರೂ ನಾಳೆ ಸಾಧ್ಯವಾಗಬಾರದು ಯಾಕೆ? 29 ಆಯುರ್ವೇದಚಿಕಿತ್ಸಾ ಕ್ರಮದ ಸಾರ್ಥಕತ್ವದ ಶೋಧನಕ್ಕೆ ನಿಯುಕ್ತರಾದ ಡಾಕ್ಟರ ಕೋಮನ್ ನವರು, ಚರಕ-ಸುಶ್ರುತ-ವಾಗ್ಭಟ - ಮಾಧವನಿದಾನಾದಿ ಗ್ರಂಧಗಳನ್ನು ನೋಡಿ, ತ್ರಿದೋಷಗಳ ತತ್ವವನ್ನು ತಿಳಿಯುವದಕ್ಕೆ ಅಧಿಕವಾಗಿ ಪ್ರಯತ್ನಿಸಿದ ಹಾಗೆ ತಾನು ಹೆಚ್ಚು ಹೆಚ್ಚು ಅಗಾಧವಾದ ಕೆಸರಿಗೆ ಇಳಿದ ಹಾಗೆ ಆಯಿತೆಂತಲೂ, ಪೂರ್ವದ ಮಹರ್ಷಿಗಳ ಕಾಲದಲ್ಲಿ ತ್ರಿದೋಷನ್ಯಾಯವು ಚಿಕಿತ್ಸೆಗೊಂದು ಆಧಾರವಾಗಿರಬಹುದಾದರೂ, ಅದು ಈಗಿನ ಕಾಲದ ವಿಚಾರಪರವಾದ ಶರೀರಶಾಸ್ತ್ರದ ಎದುರಿನಲ್ಲಿ ನಿಲ್ಲತಕ್ಕದ್ದಲ್ಲ ಎಂತಲೂ, ಮೇಲಿಂದ ಮೇಲೆ ತಮ್ಮ ಅಭಿಪ್ರಾಯವನ್ನು ಹೇಳಿ, ಆಯುರ್ವೇದೀಯ ಪಂಡಿತರು ಉಪ ಯೋಗಿಸುವ ಔಷಧಗಳಲ್ಲಿ ಮತ್ತು ಯೋಗಗಳಲ್ಲಿ ಪ್ರಯೋಜನಕರವಾದವುಗಳನ್ನು ಕುರಿತು ಒಂದು ದೀರ್ಘವಾದ ವಿಜ್ಞಾಪನಪತ್ರವನ್ನು ಸರಕಾರಕ್ಕೆ ಬರಕೊಂಡಿದ್ದಾರೆ ಅವರು ಮಾಡಿದ ಆ ಕೆಲಸವೂ ಅಪಾರ್ಧ ಮಾತ್ರವಲ್ಲ, ಅಪಕಾರಕ ಎಂತ ಸ್ವಲ್ಪ ವಿಚಾರಮಾಡಿದ್ದಲ್ಲಿ ಸರ್ವರಿಗೂ ಗೊತ್ತಾಗುವದು. ಇವರೇ ಆಯುರ್ವೇದದ ರೋಗವಿಭಾಗ, ಔಷಧಗಳ ಗುಣ