ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



V1
ಪ್ರಸ್ತಾವನೆ


ವೈದ್ಯಸಂಗ್ರಹ ಎಂಬ ಒಂದು ಚಿಕ್ಕ ಪುಸ್ತಕದ ಪ್ರತಿಯನ್ನು ತರಿಸಿದೆ 1890ನೇ ಇಸವಿಯಲ್ಲಿ
ನನಗೆ ಮುಲ್ಕಿಯಿಂದ ಕಾರ್ಕಳಕ್ಕೆ ವರ್ಗವಾಗಿ, ಆ ಸರ್ತಿಯ ಖಾನೇಸುಮಾರಿ ಸುಪರ್ವಾಯ್ಜರಿ
ಕೆಲಸದ ಮೇಲೆ ಮನೆ ಮನೆ ತಿರುಗುತ್ತಿರುವಾಗ್ಗೆ, ಒಂದು ಮುಸಲ್ಮಾನರ ಮನೆಯಲ್ಲಿ ಒಂದು
ಚಿಕ್ಕ ಬಾಲಕನನ್ನು ಎದೆಗೆ ಅನ್ನಮೆತ್ತಿ ಮಲಗಿಸಿದ್ದದ್ದನ್ನು ನೋಡಿ ವಿಚಾರಿಸಿದ್ದಲ್ಲಿ ಆ ಬಾಲಕ
ನಿಗೆ ಜ್ವರ ಬಂದು ಸ್ಮೃತಿ ತಪ್ಪಿದೆ ಮತ್ತು ಅವನು ಬದುಕುವ ಸಂಭವವಿಲ್ಲೆಂಬ ಗ್ರಹಿಕೆಯ
ಮೇಲೆ ಅವನ ಚಿಕಿತ್ಸೆಯನ್ನು ನಿಲ್ಲಿಸಿಯದೆ ಎಂತ ತಿಳಿಯಿತು ಅವನನ್ನು ಪರೀಕ್ಷಿಸಿದ್ದಲ್ಲಿ
ನಾಡಿಗಳು ಅಸ್ಪಶ್ಯವಾಗಿದ್ದರೂ, ಊರ್ಧ್ವಶ್ವಾಸ ಮುಂತಾದ ಅಶುಭಸೂಚನೆಗಳು ಕಾಣದ
ರಿಂದ, 2-3 ಬಗೆ ಔಷಧಗಳನ್ನು ಹಾಕಿ ಕಾಯಿಸಿದ ಹಾಲನ್ನು ಸಕ್ಕರೆ ಕೂಡಿಸಿ ಅಲ್ಪಸ್ವಲ್ಪವಾಗಿ
ಚಮಚಯಿಂದ ಬಾಲಕನ ಬಾಯಿಯೊಳಗೆ ಹಾಕುತ್ತ ಬರ ಹೇಳಿ ಹೋದೆ ಮಾರಣೆ ದಿನ
ಆ ಬಾಲಕನ ನಾಡಿಗಳು ಕೈಗೆ ಸಿಕ್ಕುವಷ್ಟು ಬಲವಾದ್ದನ್ನು ಕಂಡು, ನನ್ನ ತಂದೆಯವರ ಸನ್ನಿ
ಪಾತಭೈರವಿ ಮಾತ್ರೆಯನ್ನ ಯಾವದೋ ಒಂದು ರಸದಲ್ಲಿ ಕೆಲವು ಸುತ್ತು ತೇದಿಕೊಟ್ಟದರಿಂದ,
ಬಾಲಕನಿಗೆ ಎಚ್ಚರವುಂಟಾಗಿ 2-3 ದಿನಗಳ ಚಿಕಿತ್ಸೆಯಿಂದ ಕ್ಷೇಮವಾಯಿತು ಇದರಿಂದ
ನಾನೊಬ್ಬ ಒಳ್ಳೆ ಪಂಡಿತನೆಂಬ ವರ್ತಮಾನ ಊರೊಳಗೆ ಹಬ್ಬಿತು. ಸ್ವಲ್ಪ ಕಾಲದನಂತರ
ಅದೇ ಊರಲ್ಲಿ ಜನೋಪಕಾರಿಯಾದ ಒಬ್ಬರು ಪಂಡಿತರಿಗೆ ವಿಷಮಜ್ವರ ಉಂಟಾದ್ದಕ್ಕೆ
ಮಾಡಿದ ಚಿಕಿತ್ಸೆ ಸರಿಯಾಗದೆ, ತ್ರಿದೋಷಗಳು ಕೆದರಿ, ಸ್ಕೃತಿಯನ್ನು ಕಡಿಸಿ. ಕರಿನಸ್ಥಿತಿ
ಯನ್ನುಂಟುಮಾಡಿದ. ಆಗ್ಗೆ ಆ ಊರಿನ ಸದ್ಧಹಸ್ತರನೇಕರು ಸೇರಿ, ಆ ರೋಗಿಯ
ಚಿಕಿತ್ಸೆಯನ್ನು ನಾನು ವಹಿಸಿಕೊಳ್ಳಬೇಕಾಗಿ ನನ್ನನ್ನು ಕೇಳಿಕೊಂಡದಕ್ಕೆ ನಾನು ಪಂಡಿತನಲ್ಲ,
ಅಂಧಾ ರೋಗದ ಚಿಕಿತ್ಸೆಯನ್ನು ಸರಿಯಾಗಿ ನಡೆಸುವ ಯೋಗ್ಯತೆ ನನ್ನಲ್ಲಿಲ್ಲ' ಎಂತ ನಾನು
ಎಷ್ಟು ವಿಧವಾಗಿ ಹೇಳಿದರೂ, ಅವರ ಸಮಾಧಾನ ವಡದೆ, ರೋಗಿಯು ಅವರ ಆಪತ್ತಿನಿಂದ
ವಿಮುಕ್ತರಾದಾರೆಂಬ ಆಶೆಯಿಲ್ಲದೆ ತಾವು ಬಂದಿದ್ದೇವ ಮತ್ತು ಹ್ಯಾಗಾದರೂ ನಾನೇ ಚಿಕಿತ್ಸೆ
ಮಾಡಿ ನೋಡಬೇಕು ಎಂತ ಹೇಳಿ ನನಗೆ ಒತ್ತಾಯ ಮಾಡಿದರು ಅದೆಲ್ಲ ದೇವರ ತಂತ್ರ
ವಾಗಿರಬೇಕಂತ ನೆನಸಿ, ನಾನು ಹೋಗಿ ರೋಗಿಯನ್ನು ಪರೀಕ್ಷಿಸಿ, ಚಿಕಿತ್ಸೆ ಆರಂಭಿಸಿದ
ಕೆಲವು ದಿವಸಗಳಲ್ಲಿಯೇ ಆ ರೋಗಿಗೆ ಸೌಖ್ಯವಾಯಿತು. ಹೀಗೆ ದಿನೇ ದಿನೇ ಜನರ
ಒತ್ತಾಯ ಹೆಚ್ಚುತ್ತಾ ಬಂದದರಿಂದ, ನನ್ನ ತೀರ್ಧರೂ ವರಿಂದ ಉಪದೇಶಪಡೆದು, ಅವರು
ಮೊದಲು ನನಗೆ ಕೂಡುತ್ತಿದ್ದ ಮಾತ್ರೆಗಳನ್ನು ನಾನೇ ತಯಾರಿಸಲಾರಂಭಿಸಿದೆ ಅವಲ್ಲದೆ ಮರಿಶ
ಟ್ಟಿಗಳ ಪುಸ್ತಕದಲ್ಲಿ ಉಕ್ತವಾದ ಕೆಲವು ಮಾತ್ರೆಗಳನ್ನೂ, ಲೇಹಗಳನ್ನೂ, ಚೂರ್ಣಗಳನ್ನೂ,
ಮುಲಾಮುಗಳನ್ನೂ ಮಾಡಿಟ್ಟು ಕೊಂಡೆ ಬಹು ಒತ್ತಾಯವಿದ್ದು ತಪ್ಪಿಸಿಕೊಳ್ಳಲಿಕ್ಕೆ ಉಪಾಯ
ಕಾಣದ ಸಂದರ್ಭಗಳಲ್ಲಿ ಅವರೂಪವಾಗಿ ಚಿಕಿತ್ಸೆ ನಡಿಸುತ್ತಾ ಬಂದೆ 1892ನೇ ಇಸವಿಯಲ್ಲಿ
ನನಗೆ ಬ್ರಹ್ಮಾವರಕ್ಕೆ ವರ್ಗವಾಯಿತು. ಆ ಊರಲ್ಲಿ ಸರಕಾರಿ ಆಸ್ಪತ್ರೆಯಾಗಲೀ, ಪ್ರಸಿದ್ಧ
ವೈದ್ಯರಾಗಲೀ ಇರಲಿಲ್ಲ. ಇಷ್ಟರಲ್ಲಿ ಧರ್ಮದೇಶಾವರಗಳನ್ನಪೇಕ್ಷಿಸಿ ಬರುವ ಜನರೊಳಗೆ
ಅನೇಕರ ದುರ್ನಡತೆಗಳು ನನ್ನ ತಿಳವಳಿಕೆಗೆ ಬಂದದರಿಂದ, ಧರ್ಮಮಾರ್ಗಗಳೊಳಗೆ ಕ್ರಮ
ವಾದ ವೈದ್ಯವು ಉತ್ತಮ ಎಂಬ ಮತವು ನನ್ನಲ್ಲಿ ನೆಲೆಗೊಂಡಿತು ಆದ್ದರಿಂದ, ನನ್ನ ವೈದ್ಯ
ಜ್ಞಾನಾಭಿವೃದ್ಧಿಗೆ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ನಾನು ಮನಃಪೂರ್ವಕವಾಗಿ ಮಾಡ
ತೊಡಗಿದೆಅಂದಿನಿಂದ ಕನ್ನಡದಲ್ಲಿಯೂ, ಸಂಸ್ಕೃತದಲ್ಲಿಯೂ, ಇಂಗ್ಲಿಷಿನಲ್ಲಿಯೂ ಪ್ರಕಟ