ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಸ್ತಾವನೆ

V11


ವಾಗಿದ್ದ ವೈದ್ಯಕ್ಕೆ ಸಹಾಯಕರವಾಗಬಹುದಾದ ಬಹು ಪುಸ್ತಕಗಳನ್ನು ಅನೇಕ ವಿಧವಾಗಿ
ಸಂಗ್ರಹಿಸಿ, ಓದುತ್ತಲೂ, ಬಲ್ಲಂಧ ಪಂಡಿತರ ಹತ್ತಿರ ಕೇಳಿಯೂ, ಚಿಕಿತ್ಸೆ ನಡಿಸಿ ಸಿಕ್ಕಿದ ಅನು
ಭವದಿಂದಲೂ ನನ್ನ ವೈದ್ಯ ಪರಿಚಯವನ್ನು ಬೆಳೆಸುತ್ತಾ ಇದ್ದೇನೆ. ನಾನು ನನ್ನ ವಿಶ್ವವಿದ್ಯಾ
ಪೀರವಿಹಿತವಾದ ಪರೀಕ್ಷೆಗಳ ಅಂಗವಾಗಿ ಸಂಸ್ಕೃತವನ್ನು ಕಲಿತದ್ದರಿಂದ, ನನ್ನ ಈ ಉದ್ಯ
ಮಕ್ಕೆ ಬಹಳ ಸಹಾಯವಾಯಿತು ನಾನು 1900ನೇ ಇಸವಿಯೊಳಗೆ ನನ್ನ ಸರಕಾರಿ ಕೆಲಸ
ವನ್ನು ಸರಿಯಾಗಿ ನಡೆಸಿಕೊಂಡು, 5926 ರೋಗಿಗಳಿಗೆ 10,161 ಸರ್ತಿಗಳಿಂದ ಔಷಧ
ಕೊಟ್ಟಿರುವದಾಗಿ ಬರೆದಿಟ್ಟಿದ್ದು ಕಾಣುತ್ತದೆ 1916ನೇ ಇಸವಿ ಮಾರ್ಚಿಯಲ್ಲಿ ನಾನು ಸರ
ಕಾರಿ ಕೆಲಸದಿಂದ ನಿವೃತ್ತನಾದ ಮೇಲೆ ಕಳದ ದಶಂಬರ ಆಖೈರ ವರೆಗೆ 3483 ರೋಗಿ
ಗಳಿಗೆ 9932 ಸರ್ತಿಯಿಂದ ಔಷಧ ಕೊಟ್ಟ ರಿಜಿಸ್ತಿಯೂ ಇರುತ್ತದ ತನ್ಮಧ್ಯಕಾಲದ
ಲೆಕ್ಕ ಮಾತ್ರ ಇಲ್ಲ ಸಾಧಾರಣವಾಗಿ ರೋಗಿಗಳಿಗೆ ತಕ್ಕನಾದ ಯೋಗಗಳನ್ನು ಆಯು
ರ್ವೇದ ತತ್ವಗಳ ಮೇಲೆ ನಾನೇ ಕಲ್ಪಿಸಿ ಚಿಕಿತ್ಸೆ ನಡೆಸುತ್ತಾ ಬರುತ್ತೇನೆ ಅನ್ಯ
ನಿರ್ಮಿತ ಮಾತ್ರೆಗಳನ್ನು ಉಪಯೋಗಿಸುವಲ್ಲಿ ರೋಗಕ್ಕೆ ತಕ್ಕವಾದ ಅನುಪಾನವಿಶೇಷಗಳನ್ನು ಕಲ್ಪಿ
ಸುತ್ತಾ ಬರುತ್ತೇನೆ ಅಧವಾ ಆ ಮಾತ್ರೆಗಳಲ್ಲಿ ಸೇರಿರುವ ದ್ರವ್ಯಗಳ ಗುಣಪಾರದ ಮೇಲೆ
ವಿಧಿಯಲ್ಲಿ ಉಕ್ತವಲ್ಲದ ಬೇರೆ ರೋಗಗಳಿಗೆ ಆ ಮಾತ್ರೆಗಳನ್ನು ಉಪಯೋಗಿಸುತ್ತೇನೆ. ಈ
ಕ್ರಮಗಳಿಂದ ಬಹಳ ತೃಪ್ತಿಕರವಾದ ಪ್ರಯೋಜನ ಸಿಕ್ಕುತ್ತಾ ಇದೆ. ಇದೆಲ್ಲ ಆಯುರ್ವೇ
ದದ ಮಹತ್ವ ಲಕ್ಷಣ
2. ವೈದ್ಯಕ ಗ್ರಂಧಗಳನ್ನು ಓದಿಕಲಿಯುವದರಲ್ಲಿ ಆರಂಭದ ಕಷ್ಟವ ಔಷಧಗಳ
ಗುರುತನ್ನು ಹಿಡಿಯುವದು ಈ ಕಷ್ಟದ ನಿವೃತ್ತಿಗೆ ಸಹಾಯಕವಾಗುವ ಹಾಗೆ ಮುಖ್ಯ
ವಾದ ಔಷಧಗಳ ವರ್ಣನವನ್ನೂ ಗುಣದೋಷಗಳನ್ನೂ ಕಾಣಿಸುವ ಒಂದು ಪುಸ್ತಕವನ್ನು
ಬರೆದು, ಅದರೊಂದಿಗೆ ಅವುಗಳ ಸಂಸ್ಕೃತ ಹೆಸರುಗಳನ್ನು ಅಕಾರಾದಿ ಕ್ರಮದಲ್ಲಿ ಜೋಡಿಸಿ
ಕನ್ನಡಾರ್ಧ ಸಮೇತವಾಗಿ ರಚಿಸಿದ ನಿಘಂಟನ್ನು ಸೇರಿಸುವದು ಅಗತ್ಯವಾಗಿ ಕಂಡಿತು. ಈ
ಉದ್ದೇಶದಿಂದ ಒಂದು ಚಿಕ್ಕ ನಿಘಂಟನ್ನು ಮಾಡಿದ್ದಲ್ಲದೆ, ಬೇರೆ ಬೇರೆ ಊರುಗಳಿಗೆ ಹೋಗಿ
ವಿಚಾರಿಸಿ, ದೊರೆತ ಔಷಧಗಿಡಮರಗಳ ಮತ್ತು ಅವುಗಳ ಬೇರು, ಪತ್ರ, ಪುಷ್ಪ, ಫಲ
ಗಳ ಆಕಾರ, ವರ್ಣ, ರುಚಿ ಮುಂತಾದ, ಅವುಗಳ ಗುರುತು ಹಿಡಿಯುವದಕ್ಕೆ ಬೇಕಾದ
ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತಾ ಬಂದೆ. ಸಾಧಾರಣವಾದ ಅಸೌಖ್ಯಗಳಿಗೆ ಯುಕ್ತವಾದ
ಸುಲಭ ಪರಿಹಾರಗಳನ್ನು ತೋರಿಸುವ ಒಂದು ಚಿಕ್ಕ ಗ್ರಂಧವನ್ನು ಒರೆದರೆ ಜನರಿಗೆ ಬಹಳ
ಪ್ರಯೋಜನವಾದೀತೆಂತ ನನ್ನ ಕೆಲವು ಮಿತ್ರರು ಅಭಿಪ್ರಾಯ ಕೊಟ್ಟರು ಆದರೆ ಆಯುರ್ವೇದದ
ಮುಖ್ಯ ತತ್ವಗಳನ್ನು ತಿಳಿಯದವರಿಗೆ ಅಂಧಾ ಗುಣಪಾರದ ಪುಸ್ತಕವಾಗಲ, ಚಿಕಿತ್ಸಾ ಭಾಗ
ವಾಗಲಿ ಪ್ರಯೋಜನಕರವಾಗಲಾರದೆಂಬರು ಸಿದ್ದಾಂತವಾದ್ದರಿಂದ, ಆ ತತ್ವಗಳನ್ನು ವರ್ಣಿ
ಸುವ ಭಾಗವನ್ನೇ ಮುಂದಾಗಿ ರಚಿಸುವದು ಅಗತ್ಯ ಕಂಡಿತು ಅದಕ್ಕೆ ಯತ್ನಿಸಿದೆ ಅಂಧಾ
ಗ್ರಂಧವು ದೊಡ್ಡದಾಗಿ ಬೆಳೆಯುವ ಸಂಭವವನ್ನು ಕಂಡು, ಅದನ್ನು ಪೂರೈಸಿ ಪ್ರಕಟಿಸುವ
ನಷ್ಟಕಷ್ಟಗಳಿಗೆ ಅಂಜಿ ಉದಾಸೀನನಾಗಿರುವಾಗ್ಗೆ, ಬಹುಮಾನ ಪಟ್ಟಿ ರೆವನ್ನು ಬೋರ್ಡಿನ
ಒಂದನೆ ಮೆಂಬರರಾದ ಮಾನ್ಯ ಎಮ್ ಇ ಕೌಚ್ ಮೆನ್ ದೊರೆಗಳು ನನ್ನ ವೈದ್ಯಾಲಯ
ವನ್ನು ದಯಮಾಡಿ ಸಂದರ್ಶಿಸಿ, ನನ್ನ ವೈದ್ಯಾನುಭವವನ್ನು ಪುಸ್ತಕರೂಪವಾಗಿ ಬರೆದು