ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



viii
ಪ್ರಸ್ತಾವನೆ


ಪ್ರಕಟಿಸುವದು ಪ್ರಶಸ್ತ ಎಂತ ಹೇಳಿ ನನ್ನನ್ನು ಒತ್ತಾಯಪಡಿಸಿದರು. ಅದರಿಂದ ಉತ್ತೇಜನ
ಪಟ್ಟು ಯಾವ ಶ್ರಮಕ್ಕಾಗಲಿ ಖರ್ಚಿಗಾಗಲಿ ಹಿಂಜರಿಯದೆ, ಈ ಗ್ರಂಧವನ್ನು ಪೂರೈಸಿ
ಪ್ರಕಟಿಸುವವನಾದೆ. ಈ ನನ್ನ ಆತ್ಮಚರಿತಕಧನದಿಂದ ನಾನು ಈ ವೈದ್ಯಕ್ಕೆ ಪ್ರವೇಶ ಮಾಡಿ
ದ್ದಾಗಲೀ ಈ ಗ್ರಂಧವನ್ನು ರಚಿಸಿ ಪ್ರಕಟಿಸಿದ್ದಾಗಲೀ ದೈವೇಚ್ಛೆಯಿಂದಲ್ಲದೆ, ದ್ರವ್ಯಲಾಭ,
ಯಶೋಲಾಭ ಮುಂತಾದ ಆತ್ಮಪ್ರಯೋಜನದ ದೃಷ್ಟಿಯಿಂದಲ್ಲ ಎಂಬದು ವಾಚಕರಿಗೆ
ಸಮಾಧಾನವಾದೀತೆಂತ ಕೋರುತ್ತೇನೆ
3. ಈ ಗ್ರಂಧವನ್ನು ಪ್ರಕಟಿಸುವದಕ್ಕೆ ನನಗೆ ತಗಲಿದ ಖರ್ಚು ನನಗೆ ಹುಟ್ಟಿದೆ
ಹೋದರೆ, ನನ್ನ ದ್ರವ್ಯಾನುಕೂಲದಿಂದಲೇ ಈ ಆಯುರ್ವೇದಸಾರದ ಎರಡನೇ ಭಾಗವಾದ
ಚಿಕಿತ್ಸಾ ಸ್ಥಾನವನ್ನಾಗಲೀ, ಮೂರನೇ ಭಾಗವಾದ ಔಷಧನಿಘಂಟನ್ನಾಗಲೀ ರಚಿಸಿ ಪ್ರಕಟಿಸು
ವದು ಸಾಧ್ಯವಾಗಲಾರದು ಖರ್ಚಾದದ್ದಕ್ಕಿಂತ ಹೆಚ್ಚು ದ್ರವ್ಯ ಉತ್ಪನ್ನವಾದರೆ, ಸಂಕಲ್ಪಿಸಿದ
ಗ್ರಂಧಗಳ ರಚನೆಗೂ, ನನ್ನ ಧರ್ಮವೈದ್ಯಾಲಯದ ಅಭಿವೃದ್ಧಿಗೂ, ಆ ಹೆಚ್ಚಿನ ದ್ರವ್ಯವು
ಉಪಯೋಗಿಸಲ್ಪಡುವದಲ್ಲದೆ, ನನ್ನ ಸ್ವಂತ ಪ್ರಯೋಜನಗಳಿಗೆ ಅದನ್ನು ವಿನಿಯೋಗಿಸಲಾರ
4. ಈ ಗ್ರಂಥದಲ್ಲಿ ಎತ್ತಿದ ಸುಶ್ರುತನ ವಚನಗಳಿಗೆ ಬರೆದಿರುವ ಅರ್ಧವನ್ನು ನಿಬಂಧ
ಸಂಗ್ರಹವ್ಯಾಖ್ಯಾನಕ್ಕೂ, ವಾಗ್ನಟನ ವಚನಗಳ ಅರ್ಧವನ್ನು ಅರುಣದತ್ತನ ವ್ಯಾಖ್ಯಾ
ನಕ್ಕೂ ಹೋಲಿಸಿ ನೋಡಿಯದೆ. ಆದರೆ ಚರಕಸಂಹಿತೆಯ ವಚನಗಳ ಅರ್ಧವನ್ನು ಯಾವ
ವ್ಯಾಖ್ಯಾನವನ್ನಾದರೂ ನೋಡದೆ ಬರೆದ್ದಾಗಿರುತ್ತದೆ ಇದರಲ್ಲಿ ಪ್ರಮಾದ-ಸ್ಥಲಿತಾದಿ ದೋಷ
ಗಳು 'ಕಂಡರೆ, ಅವುಗಳನ್ನು ಉಪಕಾರಪರರಾದ ಪಂಡಿತಮಹಾಶಯರು ನನಗೆ ತಿಳಿಸುವ
ರಾಗಿ ನಂಬಿದ್ದೇನೆ.
5. ನನ್ನ ವೈದ್ಯದಿಂದ ಬಡವರಿಗೆ ಬಹಳ ಪ್ರಯೋಜನ ಸಿಕ್ಕುತ್ತದೆಂಬ ಮುಖ್
ಯ ವಿಚಾರದ ಮೇಲೆ ಬಹು ವರ್ಷಗಳಿಂದ ಈ ಉದ್ಯಮದಲ್ಲಿ ನನಗೆ ಉತ್ತೇಜನ ಕೊಡುತ್ತಾ
ಬಂದು, ಕಡೆಗೆ ಈ ಗ್ರಂಥವನ್ನು ರಚಿಸಿ ಪ್ರಕಟಿಸುವ ಹಾಗೆ ನನಗೆ ಬಹಳವಾಗಿ ಪ್ರೋತ್ಸಾಹ
ಕೊಟ್ಟಂಧಾ, ದೀನಬಂಧುಗಳೆಂದು ಈ ಜಿಲ್ಲೆಯಲ್ಲಿ ಪ್ರಸಿದ್ದಿ ಪಡೆದವರಾದ, ಮಾನ್ಯ ಎಮ್. ಇ
ಕೌಚ್ ಮೆನ್ ದೊರೆಗಳಿಗೆ ನನ್ನ ಸಹೃದಯವಾದ ಕೃತಜ್ಞತೆಯನ್ನು ಇಲ್ಲಿ ಅರ್ಪಿಸುವರೆ
ಸಂತೋಷಪಡುತ್ತೇನೆ. ಈ ಗ್ರಂಧವು ಸಾಕಷ್ಟು ಪ್ರಯೋಜನಕರವೆಂತ ಗ್ರಹಿಸುವ ವಾಚಕರು
ಸಹ ಅವರಿಗೆ ಕೃತಜ್ಞರಾಗಿರಬೇಕು
ದೇವರು ಪ್ರೀತನಾಗಲಿ! ಸರ್ವೇಜನರು ಸುಖಿಗಳಾಗಲಿ!
ಹರಿಪ್ರೀತಿರಸ್ತು! ಸರ್ವೇ ಜನಾಃ ಸುಖಿನೋ ಭವನ್ನುǃ

Kambala, Mangalore }
5th September 1921 } P. RAMAKRISHNAIYA.