ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

13

ದೆವೋ, ಹಾಗೆಯೇ ಅದೇವಾಹನದಿಂದ ಕಾಲದೂರ ವನ್ನೂ ಅತಿಕ್ರಮಿಸಿ,ಮಹಾರಾಜಾ ವಿಕ್ರಮಾರ್ಕನಪ್ರಭುತ್ವಕಾಲವನ್ನು ಸೇರಿ, ಆತನ ಆಸ್ಥಾನನ್ನು ಪ್ರವೇಶಿಸೋಣ! ಆತನ ಕಾಲವನ್ನು ಕುರಿತು ವಿದ್ವಾಂಸರು ಇನ್ನೂ ಚರ್ಚೆಮಾಡುತಲೇ ಇರುವರು. ಇವರ ವಿವಾದವು ಮುಗಿಯುವುದೋ ಇಲ್ಲವೋ ಯಾರು ಬಲ್ಲರು? ಕೆಲವು ಮಂದಿ ಪ್ರಾಚೀನ ಚರಿತ್ರಶೋಧಕರು ವಿಕ್ರಮನು ಕ್ರಿ. ಶ. ೬ನೆಯ ಶತಮಾನದಲ್ಲಿದ್ದನೆಂದು ಹೇಳುತ್ತಾರೆ. ಆದರೆ, ಈ ದೇಶದ ಜನರು ಮಾತ್ರ ಆ ಮಹಾರಾಜನ ಹೆಸರನ್ನು ಮರೆಯದೆ, ಆತನು ಸ್ಥಾಪಿಸಿದ ಶಕಧಿಂದಲೇ ವರ್ಷಗಳನ್ನು ಈಗಲೂ ಎಣಿಸುತ್ತಿರುವರು. ವಿರೋಧಿಕೃನ್ನಾಸಂವತ್ಸರದ ಪಂಚಾಂಗದ ಮುಖಪತ್ರದ ಮೇಲುಗಡೆ "ಶ್ರೀವಿಕ್ರಮಾರ್ಕ ಶಕಗತಾಬ್ದಾ:? ೧೯೬೮ ” ಎಂದಿರುವುದನ್ನು ಯಾವ ಹಿಂದುವುತಾನೆ ನೋಡಿಲ್ಲ ? ಆದರೆ ಈಗಿನ ಹಿಂದುಗಳಿಗೆ ಸ್ವವಿಷಯಗಳಲ್ಲಿ ಗೌರವ ಕಡಿಮೆ, ಹೇಗಾದರಾಗಲಿ, ವಿಕ್ರಮಾದಿತ್ಯನೆಂಬ ಒಬ್ಬ ರಾಜನಿದ್ದ ವಿಷಯವು ನಿಸ್ಸಂದೇಹವಾಗಿದೆ ಆತನ ವಿಷಯವನ್ನೂ ಆತನ ಸಭಾವಿಷಯವನ್ನೂ ಸಾಧ್ಯವಾದ ಮಟ್ಟಿಗೆ ಇಲ್ಲಿ ಮನಸ್ಸಿಗೆ ತಂದುಕೊಳ್ಳೋಣ.

ಆತನ ತಂದೆಯ ಹೆಸರು ಮಹೇಂದ್ರಾದಿತ್ಯನೆಂದೂ ತಾಯಿಯ ಹೆಸರು ಸೌಮ್ಯದರ್ಶನೆಯೆಂದು ಕೆಲವರು ಹೇಳಿರುವರು.