ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

17

ತ್ಮವುಳ ಸಿಂಹಪೀಠವನ್ನು ಪಡೆಯಲು ಆತನೆಂತಹ ಪುಣ್ಯವಂತನೋ, ಗುಣವಂತನೋ ಪಾಠಕರೇ ಊಹಿಸಿಕೊಳ್ಳಬಹುದು.

ಆ ಸಿಂಹಪೀಠದಮೇಲೆ ಕುಳಿತು, ವಿಕ್ರಮಾದಿತ್ಯರಾಜನು ಬಹುಕಾಲ ಸುಖದಿಂದಲೂ ಧರ್ಮದಿಂದಲೂ ರಾಜ್ಯವನ್ನಾಳಿದನು, ಆತನ ಹೆಸರು ಎಲ್ಲೆಲ್ಲಿಯೂ ಪ್ರಸಿದ್ದ ವಾಯಿತು-ಮನೆಮನೆಯಲ್ಲಿನ ಹೆಂಗಸರಿಗೂ ಮಕ್ಕಳಿಗೂ ಪರಿಚಿತವಾಯಿತು. ನಾಡಿನಲ್ಲೆಲ್ಲಾ ಆ ಹೆಸರನ್ನು ವಿಶ್ವಾಸದಿಂದಲೂ ಮರ್ಯಾದೆಯಿಂದಲೂ ನೆನೆಸದವರು ಒಬ್ಬರೂ ಇರಲಿಲ್ಲ

ಮನುಷ್ಯನು ಎಷ್ಟು ದೊಡ್ಡವನಾದರೂ ಎಂದಾದ ರೊಂದುದಿನ ಸಾಯಲೇ ಬೇಕಷ್ಟೆ? ಮಹಾನುಭಾವನಾದ ವಿಕ್ರಮಾರ್ಕನೂ ಒಂದು ದಿನ ಕಾಲಾಧೀನನಾದನು. ಆ ಶೋಕಮಯವಾದ ಸಮಯದಲ್ಲಿ ಆತನ ಮಂತ್ರಿಗಳಿಗೂ, ಪ್ರಜೆಗಳೂ ಸಭೆಸೇರಿ, ಮುಂದಿನ ಕಾರ್ಯಗಳನ್ನು ಕುರಿತು ಆಲೋಚಿಸುತ್ತಿರುವಲ್ಲಿ, ಆಕಾಶದಲ್ಲಿ ಯಾರೋ ಈರೀತಿ ಹೇಳಿದಂತಾಯಿತು:

"ಎಲೈ ಜನರೆ,ವಿಕ್ರಮನ ಪೀಠವನ್ನಡರಲು ಆತನಿಗೆ ಸಮನಾದ ರಾಜನಾರೂ ಭೂಮಿಯಮೇಲಿಲ್ಲವು ಆದಕಾರಣ ಅದನ್ನು ಒಳ್ಳೆಯ ಕ್ಷೇತ್ರದಲ್ಲಿ ಹೂತಿಡುವುದು," ಈ ವಾಣಿಯನ್ನು ಕೇಳಿದ ಮಂತ್ರಿಜನರು, ಬಹುವಾಗಿ ಪ್ರಲಾಪಿಸುತ್ತಾ, ದುಃಖದಲ್ಲಿ ಮುಳುಗಿದ ಮನಸ್ಸುಳ್ಳವರಾಗಿ ವಿಕ್ರಮನೀಠವನ್ನು ಅರಮನೆಯಿಂದೀಚೆಗೆ ಸಾಗಿಸಿ,