ವಿಷಯಕ್ಕೆ ಹೋಗು

ಪುಟ:ಇಂದ್ರವಜ್ರ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

16

ರಿಸಲ್ಪಟ್ಟು, ಈಗಲೂ ಎಲ್ಲ ಪಾಠ ಶಾಲೆಗಳಲ್ಲಿಯ ಓದ ಲ್ಪಡುತ್ತಲಿದೆ. ಈತನ ಗ್ರಂಥವು ಚೀನಾ ಭಾಷೆಗೆ ಪರಿವರ್ತಿಸಲ್ಪಟ್ಟಿದೆ. ಈತನ ಗ್ರಂಥದ ಸಹಾಯದಿಂದ ಸಂಸ್ಕೃತ ಭಾಷಾಭ್ಯಾಸವು ಸುಲಭವಾಗಿದೆ.

ಧನ್ವಂತರಿಯಂಬಾತನು ದೊಡ್ಡ ವೈದ್ಯನು.

ವೇ(ಭೇ?) ತಾಳಭಟ್ಟನು 'ನೀತಿಪ್ರದೀಪ' ವೆಂಬ ಗ್ರಂಥವನ್ನು ರಚಿಸಿದನು.

ಈ ಮಹನೀಯರಲ್ಲದೆ ಸುವಾಕ್, ಅಂಶುದತ್ತ, ಜಿಷ್ಣು, ತ್ರಿಲೋಚನ, ಹರಿ, ಶೃತಸೇನ, ಬಾದರಾ ಯಣ, ಮನಿತ್ದ ಕುಮಾರ ಸಿಂಹ,ಕಾಲತಂತ್ರ, ಮುಂ ತಾದ ಅನೇಕ ವಿದಾಂಸರು ವಿಕಮಸಭೆಯನ್ನಲಂಕ ಕರಿಸಿದ್ದರು.

ಇಷ್ಟುಮಂದಿ ಕವಿಗಳಿಗೂ, ಜ್ಞಾನಿಗಳಿಗೂ, ಪಂಡಿತ ರಿಗೂ ಆಶ್ರಯವನ್ನಿತ್ತು, ರಾಜತೇನನ್ನಿಸಿ ಕೊಂಡಿದ್ದ ವಿಕ್ರಮನಲ್ಲಿ ಧೈರ್ಯ, ಔದಾರ್ಯ, ನ್ಯಾಯ, ದಯಾದಿ ಸದ್ದು ಣಗಳು ತುಂಬಿದ್ದವೆಂದು ಹೇಳಬೇ ಕಾದುದೇ ಇಲ್ಲವ, ಆ ಮಹಾರಾಯನಿಗೆ ದೇವತಾ ಯೋಗ್ಯವಾದ ಸಿಂಹಾಸನ ವೊಂದು ಹೇಗೋ ದೊರೆ ತಿತ್ತು. ಆ ಆಸನವು ಆತನ ಗುಣಗಳಿಗೆ ಅನುಸಾರ ವಾದುದು; ಆತನ ಗುಣಗಳು ಆ ಆಸನಕ್ಕೆ ತಕ್ಕವು, ಆತನಿಗೆ ಉಂಟಾಗಿದ್ದ ಐಶ್ವರ್ಯವೊ, ವೈಭವವೂ, ಗೌರ ವವೂ-ಎಲ್ಲವೂ ಆಸಿಂಹಾಸನದ ಮಹಿಮೆಯೇ ಎಂದು ಜನರು ನಂಬಿದ್ದರು. ಅಂತಹ ವಿಚಿತ್ರವಾದ ಮಾಹಾ